»   » ಮಾತಿನಮನೆಯಲ್ಲಿ 'ನಾರದ ವಿಜಯ'

ಮಾತಿನಮನೆಯಲ್ಲಿ 'ನಾರದ ವಿಜಯ'

Posted By:
Subscribe to Filmibeat Kannada

ಹಿಂದೆ ನಟ ಅನಂತನಾಗ್ ದ್ವಿಪಾತ್ರದಲ್ಲಿ ಅಭಿನಯಿಸಿ ಪ್ರೇಕ್ಷಕರ ಮನಸೂರೆಗೊಂಡ ಚಿತ್ರ 'ನಾರದ ವಿಜಯ'. ಈಗ ಅದೇ ಹೆಸರಿನ ಚಿತ್ರವೊಂದು ನಿರ್ಮಾಣವಾಗುತ್ತಿದೆ ಸಿಮ್ರಾನ್ ಮೂವೀ ಮೇಕರ್ಸ್ ಸಂಸ್ಥೆಯ ಮೂಲಕ. ಚಿತ್ರದ ನಾಯಕ ಸೂರ್ಯನಿಗೆ ಚಿತ್ರೀಕರಣದ ವೇಳೆ ಪೆಟ್ಟಾಗಿರುವುದರಿಂದ ಚಿತ್ರೀಕರಣವನ್ನು ಸ್ಥಗಿತಗೊಳಿಸಲಾಗಿದೆ. ಚಿತ್ರೀಕರಣಗೊಂಡಿರುವ ಭಾಗಕ್ಕೆ ಬಿ.ಆರ್.ಕೇಶವ್ ಸ್ಟುಡಿಯೋದಲ್ಲಿ ಮಾತುಗಳ ಜೋಡಣೆ ನಡೆಸಲಾಗುತ್ತಿದೆ.

ಶಶಿಕುಮಾರ್ ವಿಶೇಷ ಪಾತ್ರದಲ್ಲಿ ಅಭಿನಯಿಸುತ್ತಿರುವ ಈ ಚಿತ್ರದಲ್ಲಿ ನಾಯಕಿಯಾಗಿ ಮೋಹಿನಿವಿಶ್ವಾಸ್ ನಟಿಸುತ್ತಿದ್ದಾರೆ. ಮಧ್ಯಮ ವರ್ಗದ ಜನರ ನಿತ್ಯಜೀವನದ ಪ್ರಸಂಗಗಳನ್ನು ಆಧರಿಸಿ ನಿರ್ಮಾಣವಾಗುತ್ತಿರುವ ಈ ಚಿತ್ರವನ್ನು ಮಂಜು ದೈವಜ್ಞ ನಿರ್ದೇಶಿಸುತ್ತಿದ್ದಾರೆ. ನಿರ್ದೇಶಕರೇ 'ನಾರದ ವಿಜಯ' ಚಿತ್ರಕ್ಕೆ ಕಥೆ ಚಿತ್ರಕಥೆ ಬರೆದಿದ್ದಾರೆ. ಆದಂ ಸಂಗೀತ ನೀಡಿದ್ದಾರೆ.

ಶಿವಕುಮಾರ್ ಛಾಯಾಗ್ರಹಣ, ಕುಮಾರ್ ಸಂಕಲನ, ಶ್ರೀನಿವಾಸ್ ಕಲೆ ಹಾಗೂ ಅಲ್ಟಿಮೆಟ್ ಶಿವು ಸಾಹಸ ಈ ಚಿತ್ರಕ್ಕಿದ್ದು, ಬ್ಯಾಂಕ್ ಜನಾರ್ದನ್, ಮೋಹನ್ ಜುನೇಜಾ, ಎಂ.ಎನ್.ಲಕ್ಷ್ಮೀದೇವಿ, ಬಿರದಾರ್, ಸುನಿತಾಶೆಟ್ಟಿ, ಜ್ಯೋತಿ, ರುದ್ರಾಣಿ ಮುಂತಾದವರು ಚಿತ್ರದ ತಾರಾಬಳಗದಲಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada