»   » ಪೂಜಾ, ರಘು ಅಭಿನಯದ ಚಿತ್ರದ ಹೆಸರು ನೀ

ಪೂಜಾ, ರಘು ಅಭಿನಯದ ಚಿತ್ರದ ಹೆಸರು ನೀ

Posted By:
Subscribe to Filmibeat Kannada

ಪೂಜಾಗಾಂಧಿ ಮುಖ್ಯಭೂಮಿಕೆಯಲ್ಲಿರುವ 'ಅನು' ಖ್ಯಾತಿಯ ಶಿವಗಣಪತಿ ನಿರ್ದೇಶನದ ಚಿತ್ರಕ್ಕೆ ನೀ ಎಂದು ಹೆಸರಿಡಲಾಗಿದೆ. ಈಗಾಗಲೇ ಮೈಸೂರು ಸುತ್ತಮುತ್ತ ಮೊದಲ ಹಂತದ ಚಿತ್ರೀಕರಣ ನಡೆಸಲಾಗಿದೆ. ಎರಡನೇ ಹಂತದ ಚಿತ್ರೀಕರಣವನ್ನು ನಗರದ ಮಹಾಲಕ್ಷ್ಮಿ ಲೇಔಟ್ ಸುತ್ತಮುತ್ತ ನಡೆಸಲಾಗುತ್ತಿದೆ.

ಈ ಚಿತ್ರವನ್ನು ಏಕರುದ್ರಾದೇವಿ ಫಿಲಂಸ್ ಲಾಂಛನದಲ್ಲಿ ಚೆನ್ನುಪಾಟಿ ನಾಗಮಲ್ಲೇಶ್ವರಿ ನಿರ್ಮಿಸುತ್ತಿದ್ದಾರೆ. ಸಮಾಜದಲ್ಲಿ ತನ್ನನ್ನು ಎಲ್ಲರೂ ಗುರುತಿಸಬೇಕು ಎಂದು ಆಸೆ ಇಟ್ಟುಕೊಂಡಿರುವ ಯುವಕರ ಸುತ್ತ ಹೆಣೆಯಲಾದ ಕಥೆ ಹೊಂದಿರುವ ಈ ಚಿತ್ರದಲ್ಲಿ ಹಾಸ್ಯಕ್ಕೆ ಹೆಚ್ಚಿನ ಪ್ರಾಧಾನ್ಯತೆ ಕೊಟ್ಟು ಚಿತ್ರಕಥೆ ಮಾಡಲಾಗಿದೆ.

ನಟಿ ಪೂಜಾ ಗಾಂಧಿ, ರಘು ಮುಖರ್ಜಿ, ಶ್ರೀ, ಅನಂತವೇಲು, ಜಯಲಕ್ಷ್ಮಿ, ಬುಲೆಟ್ ಪ್ರಕಾಶ್ ಹಾಗೂ ಶ್ರೀನಿವಾಸ್ ಪ್ರಧಾನ ಪಾತ್ರದಲ್ಲಿದ್ದಾರೆ. ಸುರೇಂದ್ರ ರೆಡ್ಡಿ ಛಾಯಾಗ್ರಹಣ, ಆಸ್ಲೇ ಅಭಿಲಾಷ್ ಸಂಗೀತ ಸಂಯೋಜನೆ, ಬಿ.ಎಸ್.ಕೆಂಪರಾಜ್ ಸಂಕಲನ, ಗಜೇಂದ್ರಕುಮಾರ್ ಸಂಭಾಷಣೆ ಈ ಚಿತ್ರಕ್ಕಿದೆ. ಶಿವಗಣಪತಿ, ಗಣೇಶ್ ಚಂದ್ರ ಸಹ ನಿರ್ಮಾಪಕರು.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada