»   »  ರಾಜ್ ನಲ್ಲಿ ಬೆಳ್ಳಿತೆರೆಯ ಬಂಗಾರಿಯರ ಥೈಥೈ

ರಾಜ್ ನಲ್ಲಿ ಬೆಳ್ಳಿತೆರೆಯ ಬಂಗಾರಿಯರ ಥೈಥೈ

Subscribe to Filmibeat Kannada

ನಿರ್ದೇಶಕ ಪ್ರೇಮ್ ಚಿತ್ರಗಳೆಂದರೆ ಏನೋ ಹೊಸತನ ಇದ್ದೇ ಇರುತ್ತದೆ. ಥರಾವರಿ ಗಿಮಿಕ್ ಗಳನ್ನುಮಾಡಿಕೊಂಡೆ ಜನಪ್ರಿಯರಾದವರು. ಚಿತ್ರೀಕರಣವಾಗುತ್ತಿರುವ ಅವರ ಹೊಸ ಚಿತ್ರ 'ರಾಜ್ ದಿ ಶೋ ಮ್ಯಾನ್'ನಲ್ಲೂ ಅವರ ಗಿಮಿಕ್ ಮುಂದುವರಿದೆ.

ರಾಜ್ ಕುಮಾರ್ ಅವರೊಂದಿಗೆ ನಟಿಸಿದ್ದ ಒಂದು ಕಾಲದ ನಟಿಯರಾದ ಖ್ಯಾತ ನಟಿಯರಾದ ಜಯಂತಿ, ಭಾರತಿ, ಜಯಪ್ರದಾ,ಡಾ.ಜಯಮಾಲಾ ಹಾಗೂ ಊರ್ವಶಿ ಈಗ ಪುನೀತ್ ರೊಂದಿಗೆ 'ರಾಜ್' ಚಿತ್ರದಲ್ಲಿ ಹೆಜ್ಜೆ ಹಾಕಲಿದ್ದಾರೆ. ಅಪ್ಪನೊಂದಿಗೆ ನಟಿಸಿದ ನಾಯಕಿಯರು ಮಗನೊಂದಿಗೆ ಕುಣಿದ ಉದಾಹರಣೆ ಕನ್ನಡ ಚಿತ್ರರಂಗದಲ್ಲಿ ಬಹುಶಃ ಇರಲಿಕ್ಕಿಲ್ಲ. ಆದರೆ ಈ ಸಂಸ್ಕೃತಿ ತೆಲುಗು ಚಿತ್ರರಂಗಲ್ಲಿ ಅವ್ಯಾಹತವಾಗಿ ಮುಂದುವರಿದುಕೊಂಡು ಬಂದಿದೆ. ಎನ್ ಟಿಆರ್ ಜೊತೆ ನಟಿಸಿದ್ದ ನಾಯಕಿಯರುಅವರ ಪುತ್ರರೊಂದಿಗೆ ಕುಣಿದ ಉದಾಹರಣೆಗಳು ದಂಡಿಯಾಗಿವೆ.

ಸುದೀಪ್ ನಟನೆಯ 'ಮಸ್ತ್ ಮಜಾ ಮಾಡಿ" ಚಿತ್ರದ ವಿಶೇಷ ಪಾತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಹೊಸ ತಲೆಮಾರಿನ ಹನ್ನೆರಡು ಜನ ನಾಯಕಿಯರೊಂದಿಗೆ ಹಾಡೊಂದರಲ್ಲಿ ಕುಣಿದು ಕುಪ್ಪಳಿಸಿದ್ದರು. ಆದರೆ 'ರಾಜ್" ಚಿತ್ರದಲ್ಲಿ ಪುನೀತ್ ಐದು ಜನ ನಾಯಕಿಯರೊಂದಿಗೆ ಹೆಜ್ಜೆ ಹಾಹುತ್ತಿರುವುದು ವಿಶೇಷವಾಗಿದೆ.

ಪ್ರೇಮ್ ತಮ್ಮ 'ಎಕ್ಸ್‌ಕ್ಯೂಸ್‌ಮಿ'ಯಲ್ಲಿ ಸುಮಲತಾ, 'ಜೋಗಿ ಚಿತ್ರದಲ್ಲಿಅರುಂಧತಿ ನಾಗ್ ಅವರನ್ನು ಕರೆತಂದಿದ್ದರು. 'ಪ್ರೀತಿ ಏಕೆ ಭೂಮಿ ಮೇಲಿದೆ" ಚಿತ್ರದಲ್ಲಿ ಡಾ. ರಾಜ್‌ರೊಂದಿಗೆ'ಒಂದು ಪ್ರೀತಿಯ ಕಥೆ" ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ಖ್ಯಾತ ನಟಿ ಅರ್ಚನಾರನ್ನು ತಾಯಿ ಪಾತ್ರಕ್ಕೆ ಕರೆತಂದು ದಾಖಲೆ ನಿರ್ಮಿಸಿದ್ದರು. ಆ ಚಿತ್ರವನ್ನು , ಶಂಕರ್‌ನಾಗ್ ನಿರ್ದೇಶಿಸಿದ್ದರು. 'ರಾಜ್" ಚಿತ್ರದಲ್ಲಿ ಅದೆಲ್ಲಕ್ಕಿಂತ ದೊಡ್ಡ ಸಾಹಸಕ್ಕೆ ಪ್ರೇಮ್ ಕೈಹಾಕಿರುವುದು ಮೆಚ್ಚ ಬೇಕಾದ ಸಂಗತಿ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada