»   » ಆಪ್ತರಕ್ಷಕ ತಮಿಳು ರೀಮೇಕ್ ಗೆ ರಜನಿ, ಸಮೀರಾ

ಆಪ್ತರಕ್ಷಕ ತಮಿಳು ರೀಮೇಕ್ ಗೆ ರಜನಿ, ಸಮೀರಾ

Posted By:
Subscribe to Filmibeat Kannada

ಸಾಹಸ ಸಿಂಹ ವಿಷ್ಣುವರ್ಧನ್ ಅವರ'ಆಪ್ತರಕ್ಷಕ' ಚಿತ್ರ ತಮಿಳಿಗೆ ರೀಮೇಕ್ ಆಗಲಿರುವುದು ಗೊತ್ತೆ ಇದೆ. ಚಿತ್ರದ ನಾಯಕ ನಟ ರಜನಿಕಾಂತ್ ಎಂಬ ಬಗ್ಗೆಯೂ ಯಾವುದೇ ಅನುಮಾನವಿಲ್ಲ.ಆದರೆ ಚಿತ್ರದ ನಾಯಕಿ ಯಾರು ಎಂಬ ಪ್ರಶ್ನೆಗೆ ಸಮೀರಾ ರೆಡ್ಡಿ ಎಂಬ ಉತ್ತ್ತರ ಸಿಕ್ಕಿದೆ.

ಈಗಾಗಲೆ 'ಆಪ್ತರಕ್ಷಕ' ಚಿತ್ರದ ವಿಶೇಷ ಪ್ರದರ್ಶನವನ್ನು ನೋಡಿರುವ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಕಣ್ಣೀರಾದ ಘಟನೆ ಚೆನ್ನೈನಲ್ಲಿ ನಡೆದಿದೆ. 'ಆಪ್ತರಕ್ಷಕ' ಬಗ್ಗೆ ರಜನಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಆಗಲೆ ಆಪ್ತರಕ್ಷಕ ರೀಮೇಕ್ ನಲ್ಲಿ ರಜನಿ ನಟಿಸಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು.

'ಆಪ್ತರಕ್ಷಕ' ಚಿತ್ರವನ್ನು ತಮಿಳಿಗೆ ರೀಮೇಕ್ ಮಾಡುವುದಾಗಿ ಚಿತ್ರದ ನಿರ್ದೇಶಕ ಪಿ ವಾಸು ತಿಳಿಸಿದ್ದಾರೆ. ಚಿತ್ರದ ನಾಯಕ ನಟ ಯಾರು ಎಂಬುದನ್ನು ಅಧಿಕೃತವಾಗಿ ಪ್ರಕಟಿಸದಿದ್ದರೂ, ನನ್ನ ಸೂಕ್ತ ಆಯ್ಕೆ ರಜನಿ ಎಂದು ಪಿ ವಾಸು ಹೇಳಿದ್ದಾರೆ. ನಟಿ ಸಮೀರಾ ರೆಡ್ಡಿಯ ಡೇಟ್ಸ್ ಪಡೆಯಲು ಪಿ ವಾಸು ಆಕೆಯನ್ನು ಸಂಪರ್ಕಿಸಿದ್ದಾಗಿ ಸುದ್ದಿ. ಚಿತ್ರದಲ್ಲಿ ಚಂದ್ರಮುಖಿಯಾಗಿ ಸಮೀರಾ ರೆಡ್ಡಿ ಕಾಣಿಸಲಿದ್ದಾರೆ ಎನ್ನುತ್ತವೆ ಮೂಲಗಳು.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada