»   »  ಹೊಸ ಪ್ರತಿಭೆಗಳ ಕಾರ್ಖಾನೆ ಸ್ಟಾರ್ ಕ್ರಿಯೇಟರ್ಸ್!

ಹೊಸ ಪ್ರತಿಭೆಗಳ ಕಾರ್ಖಾನೆ ಸ್ಟಾರ್ ಕ್ರಿಯೇಟರ್ಸ್!

Subscribe to Filmibeat Kannada
Star creators new building
ಹೊಸ ಕಲಾವಿದರನ್ನು ಹುಟ್ಟುಹಾಕುತ್ತಿರುವ 'ಸ್ಟಾರ್ ಕ್ರಿಯೇಟರ್ಸ್' ಸಂಸ್ಥೆ ಮತ್ತೊಂದು ಮೈಲಿಗಲ್ಲನ್ನು ಕ್ರಮಿಸಿದೆ. ಬೆಂಗಳೂರಿನ ಮಹಾಲಕ್ಷ್ಮಿಪುರದಲ್ಲಿರು ಮೂರು ಅಂತಸ್ತಿನ ಹೊಸ ಕಟ್ಟಡಕ್ಕೆ ಸ್ಟಾರ್ ಕ್ರಿಯೇಟರ್ಸ್ ಸಂಸ್ಥೆ ವರ್ಗಾವಣೆಯಾಗಿದೆ. ಈ ಮುಂಚೆ ಈ ಸಂಸ್ಥೆ ಡಾ.ರಾಜ್ ಕುಮಾರ್ ರಸ್ತೆಯಲ್ಲಿ ಕಾರ್ಯನಿರ್ವಹಿಸುತ್ತ್ತಿತ್ತು.

ನಮ್ಮಲ್ಲಿ ಉತ್ತಮ ಅಭಿಯನ, ನೃತ್ಯ ಮತ್ತು ಸಾಹಸ ಕಲೆಗಳನ್ನು ಕಲಿಸುವ ಸಂಸ್ಥೆಗಳಿಗೆ ಬರವಿದೆ. ಆದರೆ ಸ್ಟಾರ್ ಕ್ರಿಯೇಟರ್ಸ್ ಸಂಸ್ಥೆ ಈ ಮಾತಿಗೆ ಅಪವಾದ. ಬೆಳ್ಳಿಪರದೆ ಮೇಲೆ ಮಿಂಚಬೇಕೆಂದು ಕನಸು ಹೊತ್ತ ಎಷ್ಟೋ ಮಂದಿಯ ಯುವಕ/ಯುವಕಿಯರ ಕನಸನ್ನು ನನಸು ಮಾಡಿದ ಹೆಗ್ಗಳಿಕೆ ಈ ಸಂಸ್ಥೆಯದು.

ಗುರುದೇಶಪಾಂಡೆ ಮತ್ತು ರೋಹಿಣಿ ಅವರ ಕನಸಿನ ಕೂಸಾದ ಈ ಸಂಸ್ಥೆ ಆರಂಭವಾಗಿದ್ದು 2006ರಲ್ಲಿ. ಇದುವರೆಗೂ ಈ ಸಂಸ್ಥೆ 20ಕ್ಕೂ ಹೆಚ್ಚು ಕಲಾವಿದರನ್ನು ಹುಟ್ಟುಹಾಕಿದೆ. ಅವರೆಲ್ಲಾ ಈಗ ಕಿರುತೆರೆ ಮತ್ತು ಕನ್ನಡ ಚಿತ್ರೋದ್ಯಮದಲ್ಲಿ ನೆಲೆಕಂಡುಕೊಂಡಿದ್ದಾರೆ. ಸ್ಟಾರ್ ಕ್ರಿಯೇಟರ್ಸ್ ನ ಎರಡು ಅಂತಸ್ತುಗಳಿಗೆ ಬಿ.ಆರ್.ಪಂತುಲು ಮತ್ತು ಶಂಕರನಾಗ್ ಅವರ ಹೆಸರನ್ನಿಡಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಗುರು ದೇಶಪಾಂಡೆ, ಪ್ರತಿ ವಿದ್ಯಾರ್ಥಿಗೆ ಅಭಿನಯವನ್ನು ಕಲಿಸಲು ರು.15,000 ಶುಲ್ಕ ವಿಧಿಸಲಾಗುತ್ತದೆ ಎಂದರು. ವಿದ್ಯಾರ್ಥಿಗಳಿಗೆ ಶಿಕ್ಷಣ ಹೇಗೆ ನೀಡಲಾಗುತ್ತಿದೆ ಎಂಬುದನ್ನು ಮಾಧ್ಯಮ ಪ್ರತಿನಿಧಿಗಳಿಗೆ ಕ್ಲಿಪ್ಪಿಂಗ್ ಗಳ ಮೂಲಕ ಪ್ರದರ್ಶಿಸಲಾಯಿತು.

ಬೆಳ್ಳಿತೆರೆ ಮತ್ತು ಕಿರುತೆರೆ ನಟ ಸುಚೀಂದ್ರ ಪ್ರಸಾದ್, ನೀನಾಸಂ ರಂಗ ಕಲಾವಿದರಾದ ಮೌನೇಶ್ ಮತ್ತು ಶ್ವೇತಾ, ಸಾಹಸ ನಿರ್ದೇಶಕ ಸೂರ್ಯಪ್ರಕಾಶ್ ಮತ್ತು ನೃತ್ಯ ನಿರ್ದೇಶಕ ಕಪಿಲ್ ಇವರೆಲ್ಲಾ ಸ್ಟಾರ್ ಕ್ರಿಯೇಟರ್ಸ್ ನ ನುರಿತ ಶಿಕ್ಷಕ ವರ್ಗದಲ್ಲಿದ್ದಾರೆ ಎಂದು ಗುರು ದೇಶಪಾಂಡೆ ತಿಳಿಸಿದರು.

(ದಟ್ಸ್ ಕನ್ನಡ ಚಿತ್ರವಾರ್ತೆ)

'ಸ್ಟಾರ್ ರ್ಕ್ರಿಯೇಟರ್ಸ್ ಹೊಸ ಚಿತ್ರ 'ರಜನಿ"
ಥ್ರಿಲ್ಲರ್ ಮಂಜು ನಿರ್ದೇಶನದಲ್ಲಿ ಉಪೇಂದ್ರ

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada