Don't Miss!
- News
ಮಾನ್ವಿ: ಮಂಜೂರಾದ ಬಡವರ ಭೂಮಿಗೆ ಕಣ್ಣು ಹಾಕಿದ ಪ್ರಭಾವಿಗಳು, ಜನಾಕ್ರೋಶ
- Sports
LLC 2023: ಲೆಜೆಂಡ್ಸ್ ಲೀಗ್ನಲ್ಲಿ ಕೈಫ್, ಗೇಲ್, ಗಂಭೀರ್ ಸೇರಿದಂತೆ ಹಲವು ಸ್ಟಾರ್ಗಳು
- Lifestyle
ಆರೋಗ್ಯವಾಗಿರಬೇಕೆ? ಹಾಗಾದರೆ ನೀವು 3 ವಿಷಯಗಳಲ್ಲಿ ನಂಬಿಕೆ ಇಡಲೇಬೇಕು
- Finance
Jio 5G services: ಇಂದಿನಿಂದ ಮತ್ತೆ 34 ನಗರಗಳಲ್ಲಿ ಪ್ರಾರಂಭ- ಮಧ್ಯ ಕರ್ನಾಟಕದ ಯಾವ ನಗರಕ್ಕೆ ಕೊಡುಗೆ? ಮಾಹಿತಿ ಪಡೆಯಿರಿ
- Automobiles
ಪೆಟ್ರೋಲ್ ಬೆಲೆ ಏರಿಕೆ ಚಿಂತೆ ಬಿಡಿ: ರೂ.1 ಲಕ್ಷ ಇದ್ರೆ ಆಕ್ಟಿವಾವನ್ನು ಎಲೆಕ್ಟ್ರಿಕ್ ಸ್ಕೂಟರ್ ಆಗಿ ಪರಿವರ್ತಿಸಬ
- Technology
ಆಂಡ್ರಾಯ್ಡ್ ಬಳಕೆದಾರರಿಗಾಗಿ 'ಕಿಡ್ಸ್ ಮಿಸ್ಟರಿ ಬಾಕ್ಸ್' ಫೀಚರ್ಸ್ ಪರಿಚಯಿಸಿದ ನೆಟ್ಫ್ಲಿಕ್ಸ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ದರ್ಶನ್ ಮನವಿಯಿಂದ 1 ಕೋಟಿ ಹಣ ಸಂಗ್ರಹ, ಯಾವ ಮೃಗಾಲಯದಲ್ಲಿ ಹೆಚ್ಚು?
ಕೊರೊನಾ ವೈರಸ್‌ನಿಂದ ಕರ್ನಾಟಕ ಮೃಗಾಲಯಗಳು ಹಾಗೂ ಪ್ರಾಣಿಗಳು ಸಂಕಷ್ಟನದಲ್ಲಿದೆ, ದಯವಿಟ್ಟು ದತ್ತು ಪಡೆಯುವುದರ ಮೂಲಕ ಸಹಾಯ ಮಾಡಿ ಎಂದು ನಟ ದರ್ಶನ್ ಐದು ದಿನಗಳ ಹಿಂದೆ ವಿನಂತಿಸಿದ್ದರು.
Recommended Video
ಡಿ ಬಾಸ್ ಮನವಿ ಪರಿಣಾಮ 91 ಲಕ್ಷ ಹಣ ಸಂಗ್ರಹವಾಗಿದೆ ಎಂದ ಕರ್ನಾಟಕ ಮೃಗಾಲಯ ಆಡಳಿತ ಮಂಡಳಿ ತಿಳಿಸಿದೆ. ಈ ಕುರಿತು ಟ್ವೀಟ್ ಮಾಡಿರುವ ಇಲಾಖೆ ''ಶ್ರೀ ದರ್ಶನ್ ತೂಗುದೀಪರ ಕರೆಗೆ ಓಗೊಟ್ಟು ಒಂದು ಕೋಟಿ ಸಮೀಪ ತಲುಪಿದ ಪ್ರಾಣಿ ಪ್ರಿಯರ ದತ್ತು ಮತ್ತು ದೇಣಿಗೆ ಮೊತ್ತ. ಎಲ್ಲಾ ದಾನಿಗಳಿಗೂ ಹಾಗೂ ದರ್ಶನ್ ರವರಿಗೆ ಅನಂತ ಧನ್ಯವಾದಗಳು'' ಎಂದಿದೆ.
ಮೃಗಾಲಯದ
ನೆರವಿಗೆ
ನಿಂತ
ದರ್ಶನ್ಗೆ
ಧನ್ಯವಾದ
ತಿಳಿಸಿದ
ಅರವಿಂದ್
ಲಿಂಬಾವಳಿ
ಅಂದ್ಹಾಗೆ, ಜೂನ್ 5 ರಂದು ದರ್ಶನ್ ಮನವಿ ಮಾಡಿದ್ದರು. ಜೂನ್ 9 ರವರೆಗಿನ ಅವಧಿಯಲ್ಲಿ ಒಟ್ಟು ಏಂಟು ಮೃಗಾಲಯಗಳಲ್ಲಿ 91 ಲಕ್ಷದ 61 ಸಾವಿರ ರೂಪಾಯಿ ದತ್ತು ಹಣ ಸಂಗ್ರಹವಾಗಿದೆ.
ಮೈಸೂರು ಮೃಗಾಲಯವೊಂದರಲ್ಲೇ 47.5 ಲಕ್ಷ ಹಣ ಸಂಗ್ರಹವಾಗಿದೆ. ಬೆಂಗಳೂರಿನ ಬನ್ನೇರುಘಟ್ಟದಲ್ಲಿ 26 ಲಕ್ಷ ಹಾಗೂ ಶಿವಮೊಗ್ಗದಲ್ಲಿ 6.9 ಲಕ್ಷ ಹಣ ದೇಣಿಗೆ ಬಂದಿದೆ. ಇದುವರೆಗೂ ಒಟ್ಟು 3548 ಮಂದಿ ಮೃಗಾಲಯಗಳಿಂದ ಪ್ರಾಣಿ-ಪಕ್ಷಿಗಳನ್ನು ದತ್ತು ಪಡೆದಿದ್ದಾರೆ.
ರಾಬರ್ಟ್ ಚಿತ್ರದ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಚಾಮುಂಡಿ ಹೆಸರಿನ ಆನೆ ಮರಿ ದತ್ತು ಪಡೆದಿದ್ದಾರೆ. ಈ ವಿಷಯವನ್ನು ದರ್ಶನ್ ಟ್ವಿಟ್ಟರ್‌ನಲ್ಲಿ ತಿಳಿಸಿ ನಿರ್ಮಾಪಕರಿಗೆ ಧನ್ಯವಾದ ಹೇಳಿದರು.

ಕಿರುತೆರೆ ನಟಿ ಕಾವ್ಯ ವೆಂಕಟೇಶ್ ಬಿಳಿ ನವಿಲು ದತ್ತು ಪಡೆದು ಸಂತಸ ಹಂಚಿಕೊಂಡಿದ್ದರು. ''ಕೋವಿಡ್ ಮಹಾಮಾರಿಯಿಂದ ಮಾನವಕುಲಕ್ಕೆ ಎಷ್ಟು ತೊಂದರೆ ಆಗಿದೆಯೋ ಅಷ್ಟೇ ತೊಂದರೆ ಪ್ರಾಣಿಸಂಕುಲಕ್ಕೂ ಆಗಿದೆ. ಅದರಿಂದ ಹಂಪಿ ಕ್ಷೇತ್ರದ "ಅಟಲ್ ಬಿಹಾರಿ ವಾಜಪೇಯಿ ಜೂಲಾಜಿಕಲ್ ಪಾರ್ಕ್"ನ ಬಿಳಿ ನವಿಲನ್ನು ದತ್ತು ಪಡೆದಿದ್ದೇನೆ.
ಯಾಕೆಂದರೆ ನಾನು ಚಿಕ್ಕಂದಿನಲ್ಲಿ ತುಂಬಾ ಇಷ್ಟ ಪಡುತ್ತಿದು ಪಕ್ಷಿ ನವಿಲು ಮತ್ತು ಇದು ನಮ್ಮ ರಾಷ್ಟ್ರೀಯ ಪಕ್ಷಿ ಅದರಿಂದ ನನಗೆ ಬಹಳ ಖುಷಿ ತಂದುಕೊಟ್ಟಿದೆ ಹಾಗೂ ಈ ನನ್ನ ಕೆಲಸಕ್ಕೆ ಮುಖ್ಯ ಕಾರಣಕರ್ತರು ಕನ್ನಡ ಚಲನಚಿತ್ರದ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ (sir ) ಅವರಿಗೂ ಕೂಡ ತುಂಬು ಹೃದಯದ ಧನ್ಯವಾದಗಳು ಎಂದು ಇನ್ಸ್ಟಾದಲ್ಲಿ ಪೋಸ್ಟ್ ಹಾಕಿದ್ದಾರೆ.