»   » ನಮಿತಾಗೆ ಮೂವತ್ತನೆ ಹುಟ್ಟುಹಬ್ಬದ ಶುಭಾಶಯಗಳು

ನಮಿತಾಗೆ ಮೂವತ್ತನೆ ಹುಟ್ಟುಹಬ್ಬದ ಶುಭಾಶಯಗಳು

Posted By:
Subscribe to Filmibeat Kannada

ದಕ್ಷಿಣ ಭಾರತದ ಸೆಕ್ಸಿ ತಾರೆ ನಮಿತಾರಿಗೆ ವಯಸ್ಸು ಮೂವತ್ತಾಗಿದೆ ಅಂದ್ರೆ ಯಾರಾದರೂ ನಂಬೋ ಮಾತಾ. ಸುಮ್ನೆ ಇರ್ರಿ ಸಾಕು ಸುಳ್ಳು ಹೋಳೋಕು ಒಂದು ಮಿತಿ ಬೇಡ್ವಾ ಎನ್ನುವವರೆ ಅಧಿಕ. ನಮಿತಾ ತಮ್ಮ ಮೂವತ್ತನೆ ಹುಟ್ಟುಹಬ್ಬನ್ನು ಇಂದು (ಮೇ.10)ಆಚರಿಸಿಕೊಳ್ಳುವ ಮೂಲಕ ತಮ್ಮ ವಯಸ್ಸನ್ನು ಖಚಿತಪಡಿಸಿದ್ದಾರೆ. ಕನ್ನಡ, ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ತನ್ನದೇ ಆದಂತಹ ಪ್ರೇಕ್ಷಕ ವರ್ಗವನ್ನು ಸೃಷ್ಟಿಸಿಕೊಂಡಿರುವ ನಮಿತಾ ಮೂಲತಃ ಗುಜರಾತಿ ಎಂಬುದು ಬಹಳಷ್ಟು ಮಂದಿಗೆ ಗೊತ್ತಿಲ್ಲ.

ನಮಿತಾ ಹುಟ್ಟಿದ್ದು ಗುಜರಾತ್ ನ ಸೂರತ್ ನಲ್ಲಿ; ಜನನ ದಿನಾಂಕ ಮೇ.10, 1980. 2000ನೇ ಇಸವಿಯಲ್ಲಿ ಮಿಸ್ ಇಂಡಿಯಾಗೆ ಸ್ಪರ್ಧಿಸಿದ್ದರು. ಮಿಸ್ ಇಂಡಿಯಾ ಪಟ್ಟ ಮಿಸ್ ಆಯಿತಾದರೂ ಬಳಿಕ ನೆಲೆಕಂಡುಕೊಂಡಿದ್ದು ಮಾತ್ರಚಿತ್ರರಂಗದಲ್ಲಿ. ತೆಲುಗಿನ 'ಸ್ವಂತಂ' ಚಿತ್ರದ ಮೂಲಕ ಖಾತೆ ತೆರೆದ ನಮಿತಾ ಬಳಿಕ ತಮಿಳು, ಮಲಯಾಳಂ ಹಾಗೂ ಕನ್ನಡದಲ್ಲಿ ಕಾಣಿಸಿಕೊಂಡರು.

ಕ್ರೇಜಿ ಸ್ಟಾರ್ ರವಿಚಂದ್ರನ್ ಜೊತೆ ನೀಲಕಂಠ ಚಿತ್ರದ ಮೂಲಕ ಕನ್ನಡಕ್ಕೆ ಅಡಿಯಿಟ್ಟವರು ನಮಿತಾ. ಬಳಿಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ 'ಇಂದ್ರ' ಚಿತ್ರದಲ್ಲಿ ಅಭಿನಯಿಸಿದ್ದರು. ಕೆಲದಿನಗಳ ಹಿಂದೆ ನಮಿತಾಗೆ ಮದುವೆಯಾಗಿದೆ ಎಂದು ಗುಲ್ಲು ಆಕೆಯ ಆರಾಧ್ಯ ಭಕ್ತರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು.

ಸದ್ಯಕ್ಕೆ ಮದುವೆಯಾಗುವ ಮನಸ್ಸಿಲ್ಲ. ಸೂಕ್ತ ಹುಡುಗನನ್ನು ಹುಡುಕುತ್ತಿದ್ದೇನೆ. ಅಲ್ಲಿಯ ತನಕ ತಾನು ಬೆಳ್ಳಿತೆರೆಯ ಮೇಲೆ ತಮ್ಮ ರಂಜಿಸುವ ಭರವಸೆ ನೀಡಿತ್ತೇನೆ ಎಂದು ಹೇಳಿ ಆಕೆಯ ಅಪಾರ ಅಭಿಮಾನಿಗಳನ್ನು ಸಮಾಧಾನಪಡಿಸಿದ್ದರು. ನಿಜ ಜೀವನದಲ್ಲಿ ಪ್ರೇಮಿಸಿ ವಿಫಲರಾಗಿರುವ ನಮಿತಾ ಈಗಾಗಲೆ ಭಗ್ನ ಪ್ರೇಮಿ ಎನಿಸಿಕೊಂಡಿದ್ದಾರೆ. ಸದ್ಯಕ್ಕೆ ಆ ತಪ್ಪನ್ನು ಮತ್ತೆ ಮಾಡುವ ಕೆಲಸಕ್ಕೆ ಕೈಹಾಕುವುದಿಲ್ಲ ಎಂದು ಶಪಥ ಸಹ ಮಾಡಿದ್ದಾರೆ.

ಏನೇ ಆಗಲಿ ಹೆಣ್ಣುಮಕ್ಕಳಿಗೆ ಮುವ್ವತ್ತು ಎಂದರೆ ಗಂಡು ಸಿಗುವುದು ಕಷ್ಟ. ಆದರೆ ನಮಿತಾ ವಿಷಯದಲ್ಲಿ ಹಾಗಲ್ಲ. ಅಂದಚೆಂದ, ಐಶ್ವರ್ಯ ಯಾವುದರಲ್ಲೂ ಕಮ್ಮಿ ಇಲ್ಲ. ಬಾಳಸಂಗಾತಿಗಾಗಿ ಆಕೆ ಹುಡುಕಬೇಕಿಲ್ಲ.ಸ್ವಯಂವರ ಅಂತ ಏರ್ಪಟಿಸಿದರೆ ಆಕೆಯನ್ನು ವರಿಸಲು ಸಾಲುಗಟ್ಟಿ ನಿಲ್ಲಿತ್ತದೆ ಯುವ ಪಡೆ ಎಂಬುದು ಅಷ್ಟೇ ದಿಟ!

ಅಂದಹಾಗೆ ನಮಿತಾ ಹಾಗೂ ಕ್ರೇಜಿ ಸ್ಟಾರ್ ರವಿಚಂದ್ರ ಅಭಿನಯದ 'ಹೂ' ಚಿತ್ರ ತೆರೆಕಾಣಬೇಕಾಗಿದೆ. ನೀಲಕಂಠ ಚಿತ್ರದಲ್ಲಿ ರವಿಚಂದ್ರನ್ಅಮಿತವಾಗಿ ನಮಿತಾಳ ಮೇಲೆ ಹಾವಿನಂತೆ ಹರಿದಾಡಿದ್ದನ್ನು ಕನ್ನಡಿಗರು ಇನ್ನೂ ಮರೆತಿಲ್ಲ. ಈ ಸಲ ತೆರೆಕಾಣಲಿರುವ ಹೂ ಚಿತ್ರದ ವರಸೆಗಳು ಹೇಗಿವೆಯೇ ಕಾದುನೋಡಬೇಕು. ನಮಿತಾಗೆ ಹುಟ್ಟುಹಬ್ಬದ ಹೃತ್ಪೂರ್ವಕ ಶುಭಾಶಯಗಳು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada