»   »  ಕನ್ನಡ 'ಯುವರಾಜ' ಚಿತ್ರದ ನಟಿ ಲಿಸಾಗೆ ಕ್ಯಾನ್ಸರ್

ಕನ್ನಡ 'ಯುವರಾಜ' ಚಿತ್ರದ ನಟಿ ಲಿಸಾಗೆ ಕ್ಯಾನ್ಸರ್

Subscribe to Filmibeat Kannada

ಬಾಲಿವುಡ್ ನಟಿ, ರೂಪದರ್ಶಿ ಲಿಸಾ ರೇ(37) ಅವರಿಗೆ ಕ್ಯಾನ್ಸರ್ ರೋಗ ಇರುವ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. ಲಿಸಾ ಅವರೇ ಈ ವಿಷಯವವನ್ನು ತನ್ನ ಬ್ಲಾಗಿನಲ್ಲಿ ಬಹಿರಂಗಪಡಿಸಿದ್ದಾರೆ. 'ಮಲ್ಟಿಪಲ್ ಮೈಲೋಮಾ' ಎಂಬ ಬಿಳಿರಕ್ತ ಕಣಗಳ ಕ್ಯಾನ್ಸರ್ ನಿಂದ ಬಳಲುತ್ತಿರುವುದಾಗಿ ಸೆ.7ರಂದು ಅವರು ತಮ್ಮ ಬ್ಲಾಗಿನಲ್ಲಿ ಹೇಳಿಕೊಂಡಿದ್ದಾರೆ.

ತಮಗೆ ಕ್ಯಾನ್ಸರ್ ಇರುವ ಸಂಗತಿ ಜೂ.23ರಂದು ಗೊತ್ತಾಯಿತು. ಜುಲೈ 2ರಿಂದ ಮೊದಲ ಸುತ್ತಿನ ಚಿಕಿತ್ಸೆ ಆರಂಭಿಸಿದ್ದಾಗಿ ಲಿಸಾ ಹೇಳಿಕೊಂಡಿದ್ದಾರೆ. ಈ ಸಂಗತಿಯಿಂದ ಅವರಸ್ನೇಹಿತರು, ಬಂಧುಗಳು ಹಾಗೂ ಅಭಿಮಾನಿಗಳು ತೀವ್ರಆಘಾತಕ್ಕೆ ಒಳಗಾಗಿದ್ದಾರೆ. ಆದರೆ ಲಿಸಾ ರೇ ಮಾತ್ರ ವಿಚಲಿತರಾಗದೆ ಚಿತ್ರೋತ್ಸವಗಳಲ್ಲಿ ಹಾಯಾಗಿ ಕಾಲಕಳೆಯುತ್ತಿದ್ದಾರೆ.

ಕೆಲ ತಿಂಗಳ ಹಿಂದೆ ಬೆನ್ನುಮೂಳೆ ನೋಯುತ್ತಿತ್ತು. ಜೊತೆಗೆ ವಿಪರೀಪ ಸುಸ್ತಾಗಲು ಪ್ರಾರಂಭವಾಯಿತು. ವೈದ್ಯರ ಬಳಿ ಪರೀಕ್ಷಿಸಿದಾಗ ತಮಗೆ ಕ್ಯಾನ್ಸರ್ ಇರುವುದಾಗಿ ತಿಳಿಯಿತು ಎಂದು ವಿವರ ನೀಡಿದ್ದಾರೆ. ಮಲ್ಟಿಪಲ್ ಮೆಲೋಮಾ ವಾಸಿಯಾಗದ ಕ್ಯಾನ್ಸರ್ ಎನ್ನಲಾಗಿದೆ. ಧೃತಿಗೆಡದಲಿಸಾ ತಾವು ಬೇಗ ಗುಣಮುಖರಾಗುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕನ್ನಡ ಚಿತ್ರರಂಗದ ನಂಟು!
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಯುವರಾಜ' ಚಿತ್ರದಲ್ಲಿ ಲಿಸಾ ರೇ ಅಭಿನಯಿಸಿದ್ದರು. ಆದಾದ ನಂತರ ಅವರು ಮತ್ತೆ ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿಲ್ಲ. ಇವರ ತಂದೆ ಬಂಗಾಳಿ ಮೂಲದವರಾದರೆ ತಾಯಿ ಪೋಲೆಂಡಿನವರು. ಬೆಳೆದದ್ದು ಟೊರೆಂಟೋದಲ್ಲಿ. ಮೂಲತಃ ರೂಪದರ್ಶಿಯಾದ ಈಕೆ 2001ರಲ್ಲಿ ತೆರೆಕಂಡ ಹಿಂದಿ ಚಿತ್ರ 'ಕಸೂರ್' ಮೂಲಕ ಬೆಳ್ಳಿತೆರೆಗೆ ಅಡಿಯಿಟ್ಟಿದ್ದರು.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada