»   »  ಹುತ್ತೇಶ್ ಮಾಡ್ತಿದ್ದಾರೆ 'ಮೋಡಿ'

ಹುತ್ತೇಶ್ ಮಾಡ್ತಿದ್ದಾರೆ 'ಮೋಡಿ'

Subscribe to Filmibeat Kannada

ಜಗದಾಂಭ ಫಿಲಂಸ್ ಲಾಂಛನದಲ್ಲಿ ಹುತ್ತೇಶ್ ಅವರು ನಿರ್ಮಿಸುತ್ತಿರುವ ನೂತನ ಚಿತ್ರ 'ಮೋಡಿ'. ಈವರೆಗೂ ಎರಡು ಚಿತ್ರಗಳನ್ನು ನಿರ್ಮಿಸಿರುವ ಇವರು ಮೂರನೇ ಕಾಣಿಕೆಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ಕಳೆದವಾರ ನಾಮಕರಣಗೊಳದೇ ಆರಂಭವಾದ ಈ ಚಿತಕ್ಕೆ ನಿರ್ಮಾಪಕರು 'ಮೋಡಿ' ಎಂದು ನಾಮಕರಣ ಮಾಡಿದ್ದಾರೆ. ಈಗ ಚಿತ್ರದ ಚಿತ್ರೀಕರಣ ಬೆಂಗಳೂರಿನಲ್ಲಿ ಭರದಿಂದ ಸಾಗಿದೆ. ಕನ್ನಡದಲ್ಲಿ 'ಮೋಡಿ' ಎಂಬ ಶೀರ್ಷಿಕೆಯಿಂದ ನಿರ್ಮಾಣವಾಗುತ್ತಿರುವ ಈ ಚಿತ್ರ ಹಿಂದಿಯಲ್ಲಿ 'ಪಾನ್‌ಸುಪಾರಿ' ಹೆಸರಿನಿಂದ ತಯಾರಾಗುತ್ತಿದೆ.

ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಬಿ.ಆರ್.ಪಂತಲು ಅವರ ಸಂಬಂಧಿ ದ್ವಾರಕವಿಷ್ಣು ಈ ಚಿತ್ರದ ನಿರ್ದೇಶಕರು. ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಇವರೇ ಬರೆದಿದ್ದಾರೆ. ರಾಜುಲ್‌ಗಾಂಧಿ ಚಿತ್ರದ ನಾಯಕರಾಗಿ ಅಭಿನಯಿಸುತ್ತಿದ್ದು, ಮಂಜು ದೀಕ್ಷಿತ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಅತೀ ಕುಳ್ಳ ಯುವತಿ ಎಂದು ಖ್ಯಾತರಾಗಿ, ಗಿನ್ನಿಸ್ ದಾಖಲೆ ನಿರ್ಮಿಸಿರುವ ಜ್ಯೋತಿ ಆಮ್‌ಜೆ 'ಮೋಡಿ'ಯಲ್ಲಿ ನಟಿಸುತ್ತಿದ್ದಾರೆ. ವೇಣುಗೋಪಾಲ್, ಗೋಪಿ ಮುಂತಾದವರ ತಾರಾಬಳಗವಿರುವ ಈ ಚಿತ್ರಕ್ಕೆ ರಾಮ್‌ಸೆ ಧನು ಛಾಯಾಗ್ರಾಹಕರಾಗಿದ್ದಾರೆ. ಭರಣಿಶ್ರೀ ಸಂಗೀತ, ಹೊಸ್ಮನೆಮೂರ್ತಿ ಕಲೆ ಹಾಗೂ ಇಕ್ಸಾತ್ ಷಾನ್ ಅವರ ಗೀತರಚನೆ ಈ ನೂತನ ಚಿತ್ರಕ್ಕಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada