For Quick Alerts
  ALLOW NOTIFICATIONS  
  For Daily Alerts

  ಕೇಳರಿಯದ ದಾಖಲೆ ಮೊತ್ತಕ್ಕೆ ಪರಮಾತ್ಮ ಟಿವಿ ರೈಟ್ಸ್ ಸೇಲ್

  By Rajendra
  |

  ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಮುಟ್ಟಿದೆಲ್ಲಾ ಚಿನ್ನ. ಅವರು ಇದುವರೆಗೆ ನಟಿಸಿದ ಎಲ್ಲೋ ಕೆಲವು ಚಿತ್ರಗಳು ಗಲ್ಲಾ ಪೆಟ್ಟಿಗೆಯಲ್ಲಿ ನಷ್ಟ ಅನುಭವಿಸಿದ್ದು ಬಿಟ್ಟರೆ ಪುನೀತ್ ಈಗಲೂ ನಿರ್ಮಾಪಕರ ಪಾಲಿನ ಪರಮಾತ್ಮನೇ ಸರಿ. ಕನ್ನಡ ಚಿತ್ರರಂಗ ಇದುವರೆಗೆ ಕಂಡು ಕೇಳರಿಯದ ದಾಖಲೆ ಮೊತ್ತಕ್ಕೆ ಪರಮಾತ್ಮ ಚಿತ್ರದ ಸ್ಯಾಟಲೈಟ್ ಪ್ರಸಾರದ ಹಕ್ಕು ಬಿಕರಿಯಾಗಿದೆ. ಸುಮಾರು ರು.3.5 ಕೋಟಿ ಮೊತ್ತಕ್ಕೆ ಈ ಡೀಲ್ ಕುದುರಿದೆ ಎನ್ನುತ್ತವೆ ಮೂಲಗಳು.

  ಚಿತ್ರದ ನಿರ್ಮಾಪಕರೊಲ್ಲಬ್ಬರಾದ ಜಯಣ್ಣ ಅಧಿಕೃತವಾಗಿ ಇದನ್ನು ಪ್ರಕಟಿಸದಿದ್ದರೂ ಎರಡು ದಿನಗಳಿಂದ ಗಾಂಧಿನಗರದಲ್ಲಿ ಬರೀ ಇದೇ ಸುದ್ದಿ. ಜಯಣ್ಣ ಕಂಬೈನ್ಸ್ ನೊಂದಿಗೆ ಯೋಗರಾಜ್ ಭಟ್ ನಿರ್ಮಿಸಿ, ನಿರ್ದೇಶಿಸುತ್ತಿರುವ ಚಿತ್ರ ಸುಮಾರು ರು.22 ಕೋಟಿ ರೂಪಾಯಿ ವ್ಯವಹಾರ ನಡೆಸ ಬಹುದೆಂದು ಅಂದಾಜಿಸಲಾಗಿದೆ. ಹಾಗೆಯೇ, ಪ್ರೇಮ್ ನಿರ್ದೇಶನದ ಶಿವಣ್ಣ ಅಭಿನಯದ 100ನೇ ಚಿತ್ರ 'ಜೋಗಯ್ಯ' ಚಿತ್ರದ ಟಿವಿ ರೈಟ್ಸ್ ಮೂಲ ಬೆಲೆಯೇ ಎರಡು ಕೋಟಿ ಎನ್ನಲಾಗಿದೆ.

  ಕಳೆದ ಕೆಲವು ತಿಂಗಳಿನಿಂದ ಕನ್ನಡ ಚಿತ್ರಗಳ ಟಿವಿ ರೈಟ್ಸ್ ಬೆಲೆ ಗಗನಕ್ಕೇರುತ್ತಿದೆ. ಸುಮಾರು 300 ಹಳೆ ಚಿತ್ರಗಳ ರೈಟ್ಸ್ ಕೆಲವು ತಿಂಗಳಿನಿಂದ ಮಾರುಕಟ್ಟೆಗೆ ಬರುತ್ತಿದೆ. ಈ ಎಲ್ಲಾ ಚಿತ್ರಗಳು ಕಳೆದ 10 ವರ್ಷಗಳಿಂದ ಒಂದೇ ಚಾನೆಲ್ ಹಿಡಿತದಲ್ಲಿತ್ತು.

  ಚಿತ್ರಗಳ ರೈಟ್ಸ್ ಶಾಶ್ವತವಾಗಿ ಮಾರದೆ ಕೆಲವು ವರ್ಷಗಳಿಗೆ ಮಾತ್ರ ನಿಗದಿ ಪಡಿಸುವ ಸ್ಯಾಂಡಲ್ ವುಡ್ ನಿಯಮವನ್ನು ಬಾಲಿವುಡ್ ನಿರ್ಮಾಪಕರು ಕೂಡ ಪಾಲಿಸಲು ಈಗ ಮುಂದಾಗಿದ್ದಾರೆ. ಇತ್ತೇಚೆಗೆ ರಾಷ್ಟ್ರ ಪ್ರಶಸ್ತಿ ಪಡೆದ ಪುಟ್ಟಕ್ಕನ ಹೈವೇ ಚಿತ್ರದ ಟಿವಿ ರೈಟ್ ಕೇವಲ ಐದು ವರ್ಷಗಳಿಗೆ ಮಾತ್ರ ಮಾರಾಟವಾಗಿದೆ. (ವಿವಿಧ ಮೂಲಗಳಿಂದ)

  English summary
  According to the Karnataka film industry sources satellite telecast rights of Puneeth Rajkumar starrer Paramathma are said to have been sold for a record Rs 3.5 crore the biggest deal ever for a Kannada film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X