»   »  ವಿಮರ್ಶಕರ ಆಯ್ಕೆ ಪ್ರಶಸ್ತಿ ಬಾಚಿಕೊಂಡ ಸ್ಲಂ ಡಾಗ್

ವಿಮರ್ಶಕರ ಆಯ್ಕೆ ಪ್ರಶಸ್ತಿ ಬಾಚಿಕೊಂಡ ಸ್ಲಂ ಡಾಗ್

Subscribe to Filmibeat Kannada
Slum Dog Millionaire bags 5 critics choice awards
ಮುಂಬೈನ ಕೊಳಚೆ ಪ್ರದೇಶದಲ್ಲಿ ಬೆಳೆದ ಹುಡುಗನೊಬ್ಬ ಲಕ್ಷಾಧಿಪತಿಯಾಗುವ ಕಥೆಯಿರುವ ಆಂಗ್ಲ ಚಿತ್ರ 'ಸ್ಲಂ ಡಾಗ್ ಮಿಲಿಯನೇರ್' 5 ವಿಮರ್ಶಕರ ಆಯ್ಕೆ ಪ್ರಶಸ್ತಿಗಳನ್ನು ಮಡಿಲಿಗಿಳಿಸಿಕೊಂಡಿದೆ.

ಕಾಲಿಫ್‌ನಲ್ಲಿ ಗುರುವಾರ ರಾತ್ರಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಡ್ಯಾನಿ ಬಾಯ್ಲ್ ನಿರ್ದೇಶಿಸಿದ ಚಿತ್ರ 'ಅತ್ಯುತ್ತಮ ಚಿತ್ರ', ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ಚಿತ್ರಕಥೆ (ಸೈಮನ್ ಬ್ಯುಫಾಯ್), ಉತ್ತಮ ಬಾಲ ನಟ (ದೇವ್ ಪಟೇಲ್) ಮತ್ತು ಅತ್ಯುತ್ತಮ ಸಂಗೀತ ಸಂಯೋಜನೆ (ಎಆರ್ ರೆಹಮಾನ್) ಪ್ರಶಸ್ತಿ ಗಳಿಸಿದೆ.

ಇದು ಆಂಗ್ಲ ಚಿತ್ರವಾದರೂ ಚಿತ್ರೀಕರಣ ನಡೆಯುವುದು ಭಾರತದಲ್ಲೇ. ಕೌನ್ ಬನೇಗ ಕರೋಡ್ ಪತಿ ಮಾದರಿಯಲ್ಲಿ ನಡೆಯುವ ಹೂ ವಾಂಟ್ಸ್ ಟು ಬಿ ಎ ಮಿಲಿಯನೇರ್ ಕಾರ್ಯಕ್ರಮದಲ್ಲಿ ಸ್ಲಂನಲ್ಲಿ ಬೆಳೆದ ಹುಡುಗ ಗೆಲ್ಲುವ ಹಂತ ತಲುಪಿದಾಗ ಆತ ಶಂಕೆಗೆ ಒಳಪಡುತ್ತಾನೆ. ಆತ ಮೋಸ ಮಾಡಿಯೇ ಕೊನೆಯ ಹಂತ ತಲುಪಿದ್ದಾನೆಂಬ ಸಂದೇಹಗಳೇಳುತ್ತವೆ. ಅದನ್ನು ಪಡೆಯಲು ಆತ ಎದುರಿಸಿದ ಸಂಕಷ್ಟ, ಸಂದೇಹದ ದೃಷ್ಟಿಯಿಂದ ನೋಡುವ ಕೊಳಕು ಸಮಾಜ, ಪೊಲೀಸರು ಇದಕ್ಕೆ ಸ್ಪಂದಿಸುವ ರೀತಿ.. ಇದೇ ಚಿತ್ರದ ಕಥಾವಸ್ತು. ಇದು ವಿಕಾಸ್ ಸ್ವರೂಪ್ ಬರೆದ ಕಾದಂಬರಿಯನ್ನು ಆಧರಿಸಿದೆ.

ಖ್ಯಾತ ಬಾಲಿವುಡ್ ನಟರಾದ ಅನಿಲ್ ಕಪೂರ್ ಮತ್ತು ಇರ್ಫಾನ್ ಖಾನ್ ಬಿಟ್ಟು ಯಾವ ಖ್ಯಾತನಾಮರೂ ಈ ಚಿತ್ರದಲ್ಲಿ ನಟಿಸಿಲ್ಲ. ಮುಂಬೈನ ಕೊಳಚೆ ಪ್ರದೇಶದ ಹುಳುಕುಗಳನ್ನು ಜಗತ್ತಿನ ಎದಿರು ಇಟ್ಟ ರೀತಿ ಕೆಲವರ ಟೀಕೆಗಳಿಗೂ ಕಾರಣವಾಗಿತ್ತು. ಈಗ ಎಲ್ಲ ಅಡೆತಡೆಗಳನ್ನು ಮೀರಿ ಸ್ಲಂ ಡಾಗ್ ಮಿಲಿಯನೇರ್ 5 ಪ್ರಶಸ್ತಿಗಳನ್ನು ಪಡೆದಿದೆ.

ಮಿಲ್ಕ್ ಚಿತ್ರದಲ್ಲಿ ನೀಡಿದ ಅಭಿನಯಕ್ಕಾಗಿ ಸೀನ್ ಪೆನ್ ಅತ್ಯುತ್ತಮ ನಟ ಪ್ರಶಸ್ತಿ ಗಳಿಸಿದರೆ, ರಾಚೆಲ್ ಗೆಟಿಂಗ್ ಮ್ಯಾರಿಡ್ ಚಿತ್ರದಲ್ಲಿ ನಟಿಸಿರುವ ಆನಿ ಹಾತ್ವೇ ಮತ್ತು ಡೈಟ್ ಚಿತ್ರದ ಅಭಿನಯಿಸಿರುವ ಮಿರಿಲ್ ಸ್ಟೀಪ್ ಜಂಟಿಯಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ.

ಎಂಎಸ್ ನಟರಾಜ್ ಅವರಿಂದ ಚಿತ್ರದ ವಿಮರ್ಶೆ : ಕೊಳಚೆ ನಾಯಿ ಕೋಟೀಶ್ವರ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada