ವಿಶೇಷ ತಂತ್ರಜ್ಞಾನದಲ್ಲಿ ಪಾಟೀಲ್ 'ಸೆಲ್ಯೂಟ್'

ನಿರ್ಮಾಪಕ ಬಿ.ಸಿ.ಪಾಟೀಲ್ ಅವರು ಈಗ ಸಂತಸದಲಿದ್ದಾರೆ. ಏಕೆಂದರೆ ಅವರ ನಿರ್ಮಾಣ, ನಿರ್ದೇಶನ ಹಾಗೂ ನಟನೆಯ 'ಸೆಲ್ಯೂಟ್ 'ಚಿತ್ರಕ್ಕೆ ಬಾಲಾಜಿ ಡಿಜಿಟಲ್ ಸ್ಟೂಡಿಯೋದಲ್ಲಿ ಡಿ.ಟಿ.ಎಸ್ ಅಳವಡಿಕೆ ಕಾರ್ಯ ಪೂರ್ಣಗೊಂಡಿದೆ. ಚಿತ್ರ ಅವರಂದುಕೊಂಡ ಹಾಗೆ ಮೂಡಿಬಂದಿದೆ. ಸದ್ಯದಲೇ ಚಿತ್ರಕ್ಕೆ ಚಿತ್ರದ ಪ್ರಥಮ ಪ್ರತಿ ಸಿದ್ದವಾಗಲಿದ್ದು ನಂತರ ಸೆನ್ಸಾರ್ ಮಂಡಳಿ ಚಿತ್ರವನ್ನು ವೀಕ್ಷಿಸಲಿದೆ ಎಂದು ಅವರು ತಿಳಿಸಿದ್ದಾರೆ.
ಓಂ ಶಕ್ತಿ ಫಿಲಂಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಬಿ.ಸಿ.ಪಾಟೀಲ್ ಅವರೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಸಾಯಿ ಕಾರ್ತಿಕ್ ಸಂಗೀತ, ನಿರಂಜನ ಬಾಬು ಛಾಯಾಗ್ರಹಣ, ರವಿವರ್ಮ ಸಾಹಸ, ಕೆ.ವಿ.ಮಂಜುನಾಥ ರೆಡ್ಡಿ, ಶಂಕರ್ ಸಹ ನಿರ್ದೇಶನವಿರುವ ಚಿತ್ರದ ತಾರಾಬಳಗದಲ್ಲಿ ಬಿ.ಸಿ.ಪಾಟೀಲ್, ಅಶ್ವಿನಿ, ಬಿ.ವಿ.ರಾಧ, ಶೋಭರಾಜ್, ಅನೂಪ್, ವಿಜಯ್ ಕೌಂಡಿನ್ಯ, ಕೃತಿಕಾ, ಪ್ರಕಾಶ್, ಸತ್ಯಜಿತ್, ಹರೀಶ್ ರಾಯ್, ಅಶೋಕ್ ಖೇಣಿ, ಲಕ್ಷ್ಮಣ್ ಮುಂತಾದವರಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)
ಕನ್ನಡ ಸಿನಿಮಾ kannada movies ಅಶೋಕ್ ಖೇಣಿ ashok kheni ಕೌರವ ಬಿ ಸಿ ಪಾಟೀಲ್ salute bc patil kaurava ಸೆಲ್ಯೂಟ್ ಚಿತ್ರ


Click it and Unblock the Notifications