»   »  ವೆಂಕಟನೊಂದಿಗೆ ನಂ ಯಜಮಾನ್ರ ತೀವ್ರ ಸ್ಪರ್ಧೆ

ವೆಂಕಟನೊಂದಿಗೆ ನಂ ಯಜಮಾನ್ರ ತೀವ್ರ ಸ್ಪರ್ಧೆ

Subscribe to Filmibeat Kannada
ರಮೇಶ್ ಅರವಿಂದರ ಹಾಸ್ಯಪ್ರಧಾನ ಚಿತ್ರ 'ವೆಂಕಟ ಇನ್ ಸಂಕಟ' ಆರ್ಥಿಕ ಹಿಂಜರಿತಕ್ಕೆ ಸಡ್ಡುಹೊಡೆದಿದೆ. ಬಾಕ್ಸಾಫೀಸ್ ಗಳಿಕೆಯಲ್ಲಿ ಉಳಿದ ಕನ್ನಡ ಚಿತ್ರಗಳನ್ನು ಓವರ್ ಟೇಕ್ ಮಾಡಿ ಭರ್ಜರಿ ಗಳಿಕೆಯತ್ತ ಮುನ್ನುಗ್ಗುತ್ತಿದೆ. ಶರ್ಮಿಳಾ ಮಾಂಡ್ರೆ, ಮೇಷನಾ ಮತ್ತು ಅನುಷಾ ಮೂವರು ನಾಯಕಿಯರೊಂದಿಗೆ ರಮೇಶ್ ಅರವಿಂದ್ ಅಭಿನಯದ ಚಿತ್ರ ಪ್ರೇಕ್ಷಕರನ್ನು ಸೆಳೆಯುತ್ತಿದೆ.

ಕಳೆದ ವಾರ ಬಿಡುಗಡೆಯಾದ ವಿಷ್ಣವರ್ಧನ್ ಅಭಿನಯದ 'ನಂ ಯಜಮಾನ್ರು' ಚಿತ್ರ'ವೆಂಕಟ ಇನ್ ಸಂಕಟ'ದ ಸಮೀಪ ಸ್ಪರ್ಧಿ ಚಿತ್ರವಾಗಿದೆ. ದಿನದಿಂದ ದಿನಕ್ಕೆ ನಂ ಯಜಮಾನ್ರು ಪ್ರೇಕ್ಷಕರನ್ನು ಹೆಚ್ಚು ಹೆಚ್ಚು ಸೆಳೆಯುತ್ತಿದೆ. ಮನೋವೈಜ್ಞಾನಿಕ ಕಥಾ ಹಂದರವನ್ನು ಹೊಂದಿರುವ ಈ ಚಿತ್ರ ವೆಂಕಟನ ಜೊತೆ ಸ್ಪರ್ಧಿಸುತ್ತಿದೆ.

ವಿಜಯ್, ಅಂದ್ರಿತಾ ರೇ ಅಭಿನಯದ ಜಂಗ್ಲಿ ಮತ್ತು ಜಾಲಿ ಡೇಸ್ ಚಿತ್ರಗಳು ನಂತರದ ಸ್ಥಾನದಲ್ಲಿವೆ. ಜಂಗ್ಲಿ ಚಿತ್ರದ ಹಳೆ ಪಾತ್ರೆ, ಹಳೆ ಕಬ್ಬಿಣ...ಹಾಡಿನ ಮೋಡಿ ಮುಂದುವರಿದಿದೆ. ಹದಿಹರೆಯದ ಹುಡುಗರ 'ಜಾಲಿ ಡೇಸ್' ಮತ್ತು ಪೂಜಾಗಾಂಧಿ ನಟನೆಯ 'ಅನು' ಗಳಿಕೆಯಲ್ಲಿ ಕ್ರಮವಾಗಿ ನಾಲ್ಕು ಮತ್ತು ಐದನೆ ಸ್ಥಾನದಲ್ಲಿವೆ.

ಲೂಸ್ ಮಾದ ಖ್ಯಾತಿಯ ಯೋಗೇಶ್ ಅಭಿನಯದ 'ಅಂಬಾರಿ' ಚಿತ್ರ ಮೇಲಿನ ಎಲ್ಲ ಚಿತ್ರಗಳ ದಾಖಲೆಯನ್ನು ಮುರಿಯುವ ಭರವಸೆಯನ್ನು ಹುಟ್ಟಿಸಿದೆ. ಪ್ರೇಕ್ಷಕರ ಮೆಚ್ಚುಗೆಗಳಿಸುತ್ತಿರುವ ಅಂಬಾರಿ ಚಿತ್ರ ತನ್ನ ಗಳಿಕೆಯನ್ನು ದಿನದಿಂದ ದಿನಕ್ಕೆ ಏರಿಸಿಕೊಳ್ಳುತ್ತಿದೆ.

(ದಟ್ಸ್ ಕನ್ನಡ ಸಿನಿವಾರ್ತೆ)

ಪೂಜಾಗಾಂಧಿ ನಟನೆಯ ಅನು ಟ್ರೈಲರ್
ಸೂರಿ ಮಹತ್ವಾಕಾಂಕ್ಷೆಯ ಜಂಗ್ಲಿ ಚಿತ್ರದ ಟ್ರೈಲರ್
ಸೈಕಲ್ ಮೇಲೆ ಅಂಬಾರಿ ಹೊತ್ತ ಯೋಗೀಶ್!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada