For Quick Alerts
ALLOW NOTIFICATIONS  
For Daily Alerts

ಡಬ್ಬಿಂಗ್ : ಕನ್ನಡಿಗರಿಗೆ ಕನ್ನಡದಲ್ಲಿ ಮನರಂಜನೆ

By * ಅಮರನಾಥ್ ಶಿವಶಂಕರ್, ಬೆಂಗಳೂರು
|

ಪ್ರಪಂಚದಲ್ಲಿ ಎಲ್ಲವನ್ನೂ ನಾವೇ ಖುದ್ದಾಗಿ ಮಾಡುತ್ತೀವಿ ಅಥವಾ ಮಾಡಕ್ಕೆ ಹೋಗುತ್ತೀವಿ ಅನ್ನೋದು ಸುಳ್ಳು. ಒಳ್ಳೆ ಊಟ ಇರಲಿ, ಒಳ್ಳೆಯ ಪುಸ್ತಕ ಇರಲಿ, ಒಳ್ಳೆ ಬಟ್ಟೆ ಇರಲಿ, ಚೆಂದವಾಗಿರೋದು ಸಿಕ್ಕಿದಾಗ ಅದನ್ನ ತೆಗೆದುಕೊಳ್ಳುವವನು ಬುದ್ದಿವಂತ.

ಮಾರುತಿ ಹಾಗು ಟಾಟ ಕಂಪನಿಗಳಿಗೆ ಪೊಳ್ಳು ಪ್ರತಿಷ್ಠೆ ಇದ್ದಿದ್ರೆ ಉದ್ಧಾರವಾಗುತ್ತಿದ್ದರಾ ? ಪ್ರಪಂಚದ ಅತ್ಯಂತ ವೇಗವಾಗಿ ಚಲಿಸೋ ಫೆರಾರಿ ಕಾರಿನ ಬಗ್ಗೆ ಯಾರಿಗೆ ತಾನೆ ತಿಳಿದಿಲ್ಲ. ಈ ಕಾರು ತಯಾರಕರು ಇಟಲಿ ದೇಶದ ಫಿಯಟ್ ಕಂಪನಿ.

ಈ ಕಂಪನಿಯ ಕಾರುಗಳು ಪ್ರಪಂಚದಲ್ಲೇ ಉತ್ತಮವಾದದ್ದು. ಇದೇ ಫಿಯಟ್ ಕಂಪನಿಯವರು ತಯಾರಿಸಿರುವ ಇಂಜಿನ್ ನಮ್ಮ ಭಾರತ ದೇಶದ ಮಾರುತಿ ಸ್ವಿಫ್ಟ್ ಮತ್ತೆ ಟಾಟ ಇಂಡಿಕಾ ವಿಸ್ಟಾ ಕಾರುಗಳಲ್ಲಿ ಅಳವಡಿಸಲಾಗಿದೆ. ಭಾರತದಲ್ಲಿನ ರಸ್ತೆಗಳು,

ತೈಲ ಬೆಲೆ ಮುಂತಾದ ಕೆಲವು ಅಂಶಗಳನ್ನು ಮನಸಿನಲ್ಲಿಟ್ಟುಕೊಂಡು ಮಾರುತಿ ಮತ್ತೆ ಟಾಟ ಕಂಪನಿಗಳು ಚಿಕ್ಕ ಪುಟ್ಟ ಬದಲಾವಣೆಗಳನ್ನು ಮಾಡಿಕೊಂಡಿದ್ದಾರೆ.

ಫಿಯಟ್ ನವರೇ ಇಂಜಿನ್ ಮಾಡಿರುವಾಗ ಅದು ಬೇಡ, ನಮ್ಮದೇ ತಯಾರಿಸುತ್ತೀವಿ ಅಂತ ಮಾರುತಿ ಮತ್ತೆ ಟಾಟ ಸಂಸ್ಥೆಗಳು ಮೊಂಡಿಗೆ ಬಿದ್ದಿದ್ದರೆ, ಇವತ್ತು ಸ್ವಿಫ್ಟ್ ಮತ್ತೆ ಇಂಡಿಕಾ ವಿಸ್ಟಾ ತರದ ಉತ್ತಮ ಕಾರುಗಳು ನಮ್ಮ ಪಾಲಿಗಿರುತ್ತಿರಲಿಲ್ಲ.

ಕನ್ನಡಿಗರಿಗೆ ಕನ್ನಡದಲ್ಲಿ ಮನರಂಜನೆ - ನಮ್ಮ ಮೂಲಭೂತ ಹಕ್ಕು: ಇಷ್ಟೆಲ್ಲಾ ಪೀಠಿಕೆ ಹಾಕುವಾಗ ನಾನು ಯಾವ ವಿಷಯದ ಬಗ್ಗೆ ಮತನಾಡುತ್ತಿದ್ದೀನಿ ಅನ್ನೋದು ನಿಮಗೆ ಅರ್ಥವಾಗಿದೆ ಅನ್ಸತ್ತೆ.

ಹೌದು ಅದೇ ಉತ್ತಮ ಮನರಂಜನೆಯನ್ನು ಕನ್ನಡದಲ್ಲಿ ಪಡೆದುಕೊಳ್ಳುವುದರ ಬಗ್ಗೆ ನನ್ನೀ ಮಾತು. ಇವತ್ತು ನಮ್ಮ ಕನ್ನಡ ಚಿತ್ರರಂಗವಾಗಲೀ, ಕನ್ನಡ ಕಿರುತೆರೆಯಾಗಲಿ ಚಿಕ್ಕ ಮಾರುಕಟ್ಟೆಯನ್ನು ಹೊಂದಿದ್ದು ಕಡಿಮೆ ಬಂಡವಾಳದಲ್ಲಿ ಕಾರ್ಯಕ್ರಮಗಳನ್ನು ರೂಪಿಸಬೇಕಿದೆ.

ಇದು ನಮ್ಮ ದುರಂತ: ಇಂಗ್ಲೀಷ್ ಚಿತ್ರಗಳ ರೀತಯಲ್ಲಿ ಅತಿ ವೈಭವದ ಚಿತ್ರೀಕರಣ ಮಾಡಲು ಇವತ್ತು ನಮಗೆ ಸಾಧ್ಯವಿಲ್ಲ. ಹಾಗಿದ್ದಾಗ ಬೇರೆಡೆ ತಯಾರಾಗುವ ಉತ್ತಮ ಇಂಗ್ಲೀಷ್ ಚಿತ್ರಗಳನ್ನು ಕನ್ನಡಕ್ಕೆ ಡಬ್ ಮಾಡಲೂ ನಮ್ಮ ಚಿತ್ರರಂಗದ ಹಿತಾಸಕ್ತಿ(ಅಲ್ಲ ಅಲ್ಲಾ, ಸ್ವಹಿತಾಸಕ್ತಿ) ಕಾಪಾಡಿಕೊಳ್ಳುವ ಜಾಣರು ಬಿಡುತ್ತಿಲ್ಲ.

ಆದರೆ ತಮಾಷೆ ಅಂದರೆ, ಅಂತಹ ಹಲವು ಚಿತ್ರಗಳು ಹಿಂದಿ, ತಮಿಳು ಮತ್ತು ತೆಲುಗಿಗೆ ಡಬ್ ಆಗಿ ಕರ್ನಾಟಕದಲ್ಲೇ ಬಿಡುಗಡೆ ಆಗಿತ್ತುದೆ.

Real Steel ಮತ್ತೆ The Rise of the Planet of the Apes ಅನ್ನುವ ಇಂಗ್ಲೀಷ್ ಚಿತ್ರಗಳು ಹಿಂದಿ, ತಮಿಳು ಹಾಗು ತೆಲುಗಿಗೆ ಡಬ್ ಆಗಿ ಎಲ್ಲೆಡೆ ಬಿಡುಗಡೆಯಾಗಿದೆ.

ಅಂದ್ರೆ, ಕರ್ನಾಟಕದಲ್ಲಿರುವ ಹಿಂದಿ, ತಮಿಳು ಮತ್ತೆ ತೆಲುಗು ಭಾಷಿಕರು ಪ್ರಪಂಚದ ಎಲ್ಲ ಉತ್ತಮ ಮನರಂಜನೆಯನ್ನು ತಮ್ಮ ಭಾಷೆಯಲ್ಲಿ ಪಡೆದುಕೊಳ್ಳುತ್ತಿದ್ದಾರೆ. ಆದರೆ ಕನ್ನಡಿಗರು ಮಾತ್ರ ಹ್ಯಾಪಮೋರೆ ಹಾಕಿಕೊಂಡು ಅದದೇ ಅಕ್ಕಚ್ಚಮ್ಮನ ಚಿತ್ರಗಳನ್ನ, ಕಾರ್ಯಕ್ರಮಗಳನ್ನ ನೋಡಿ ತೃಪ್ತರಾಗಬೇಕಿದೆ.

ಒಳ್ಳೊಳ್ಳೆ ತಂತ್ರಜ್ಞಾನ ಬಳಸಿರುವ, ರಾಕೆಟ್ಟು, ಹೆಲಿಕಾಪ್ಟರ್ ಮುಂತಾದವುಗಳನ್ನು ಕಂಪ್ಯೂಟರ್ ಗ್ರಾಫಿಕ್ಸ್ ಮಾಡಿ ಕಣ್ಣಿಗೆ ಹಬ್ಬವಾಗಿಸುವ ಆ ಚಿತ್ರಗಳು ಕನ್ನಡಿಗರು ಕನ್ನಡದಲ್ಲಿ ಸಿಗುವಂತೆ ಆಗಬೇಕು.

ಮಕ್ಕಳ ಮನಸ್ಸು ಉಲ್ಲಾಸಗೊಳಿಸುವ ಕಾರ್ಟೂನ್ ವಾಹಿನಿಗಳಾದ ಪೋಗೋ, ಕಾರ್ಟೂನ್ ನೆಟ್ವರ್ಕ್, ವಿಜ್ಞಾನ-ತಂತ್ರಜ್ಞಾನವನ್ನು,ಪ್ರಕೃತಿ, ಪ್ರಾಣಿಸಂಕುಲ ಮುಂತಾದವುಗಳನ್ನ ಬಿಡಿಸಿ ಬಿಡಿಸಿ ತೋರಿಸುವ ಡಿಸ್ಕವರಿ ಚಾನಲ್, ನ್ಯಾಟನಲ್ ಜಿಯೋಗ್ರಫಿಕ್, ಅನಿಮಲ್ ಪ್ಲಾನೆಟ್ ಮುಂತಾದ ವಾಹಿನಿಗಳನ್ನು ಕನ್ನಡದ ಮಂದಿ ಕನ್ನಡದಲ್ಲಿಯೇ ನೋಡುವಂತಾಗಬೇಕು.

ಕನ್ನಡಿಗರಿಗೆ ಇದ್ಯಾವ ಒಳ್ಳೆಯ ಕಾರ್ಯಕ್ರಮವೂ ಬೇಡ ಅಂತ ಹೇಳುವವರ ಹಿಟ್ಲರ್ ಸಾಮ್ರಾಜ್ಯ ಅಂತ್ಯಗೊಳ್ಳಲಿ.

English summary
Let Public decide on whether they need dubbing in Kannada film Industry or not. Compared to automobile industry even big guns Tata and Maruthi are getting engines any many parts from foreign and re assemble here. Customer satisfaction is must in film industry also says citizen journalist Amaranath Shivashankar.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more