»   » ಉಪೇಂದ್ರ 'ಸೂಪರ್' ಹವಾ ಶುರು

ಉಪೇಂದ್ರ 'ಸೂಪರ್' ಹವಾ ಶುರು

By: *ಮಂಡಕ್ಕಿ ರಾಜ
Subscribe to Filmibeat Kannada

ಉಪೇಂದ್ರ ವರಸೆ ಮತ್ತೆ ಶುರುವಾಗಿದೆ! ಮುಹೂರ್ತಕ್ಕೆ ಮೊದಲೇ ಸೂಪರ್ ಹವಾ ಸೃಷ್ಟಿಸುವ ಪ್ರಯತ್ನ ಸಾಗಿದೆ. ಉಪೇಂದ್ರ ಹೊಸ ಚಿತ್ರ ನಿರ್ದೇಶಿಸುತ್ತಾರಂತೆ? ಆ ಚಿತ್ರದ ಹೆಸರು 'ಸೂಪರ್' ಅಂತೆ? ಕಥೆ ಏನಂತೆ? ಶೂಟಿಂಗ್ ಯಾವಾಗಂತೆ? ಹೀಗೆ ಹರಡುತ್ತಿದ್ದ ವದಂತಿಗಳಿಗೆಲ್ಲ ಉತ್ತರ ಕಂಡುಕೊಳ್ಳೋಣವೆಂದು ಪತ್ರಕರ್ತರು ಉಪೇಂದ್ರ ಅವರಿಗೆ ಫೋನ್ ಮಾಡಿದರೆ, ಅತ್ತಲಿಂದ ನೋ ಆನ್ಸರ್!

ಅಲ್ಲಿ ಇಲ್ಲಿ ಎದುರಿಗೆ ಸಿಕ್ಕಾಗಲೂ ಉಪೇಂದ್ರ ಅವರದ್ದು ನಗುವಿನ ಉತ್ತರ. ಪಟ್ಟು ಬಿಡದೆ ಹೋದರೆ ಇನ್ನೂ ಯಾವುದೂ ಫೈನಲ್ ಆಗಿಲ್ಲ ಎನ್ನುವ ಪ್ರತಿಕ್ರಿಯೆ. ಈಗ ನೋಡಿ: ಉಪೇಂದ್ರ ಅವರ ಸಂದರ್ಶನ ಮಾಡಿ ಸಾರ್ ಎಂದು ಸಿನಿಮಾ ಪ್ರಚಾರಕರ್ತರು ಪತ್ರಕರ್ತರಿಗೆ ಫೋನ್ ಮಾಡುತ್ತಿದ್ದಾರೆ! ಇದಲ್ಲವೇ ಸೂಪರ್ ವರಸೆ!

ಉಪೇಂದ್ರ ವಿಷಯ ಬಿಟ್ಟು ಸೂಪರ್ ಬಗ್ಗೆ ಮಾತಾಡೋಣ. ಚಿತ್ರದ ಮುಹೂರ್ತ ಮುಂದಿನ ವಾರ ನಡೆಯುವುದು ಹೆಚ್ಚೂಕಮ್ಮಿ ನಿಶ್ಚಯವಾಗಿದೆ. ಆದರೆ ಮುಹೂರ್ತದ ದಿನಾಂಕವನ್ನು ಸದ್ಯಕ್ಕೆ ಗುಟ್ಟಾಗಿಡಲಾಗಿದೆ. ಮುಹೂರ್ತಕ್ಕೆ ಮುನ್ನುಡಿ ಎನ್ನುವಂತೆ ಚಿತ್ರದ ಫೋಟೊಗಳು ಈಗಾಗಲೇ ಮಾಧ್ಯಮಗಳ ಕಚೇರಿಗಳನ್ನು ತಲುಪಿವೆ.

ದಕ್ಷಿಣದ ಜನಪ್ರಿಯ ನಟಿಯರಲ್ಲಿ ಒಬ್ಬರಾದ ನಯನತಾರಾ 'ಸೂಪರ್' ನಾಯಕಿ. ಫೋಟೊ ಸೆಷನ್‌ಗೆಂದು ಅವರು ಈಗಾಗಲೇ ಬೆಂಗಳೂರಿಗೆ ಬಂದುಹೋಗಿದ್ದಾರೆ. ಫೋಟೊ ಸೆಷನ್‌ಗಾಗಿಯೇ ದುಬಾರಿ ಮೊತ್ತವನ್ನು ಖರ್ಚು ಮಾಡಲಾಗಿದೆ. ವಿಶೇಷ ಸೆಟ್, ಸಹ ನೃತ್ಯಗಾರರ ಪಡೆ- ಹೀಗೆ ಜೋರಾಗಿದೆ ಸೂಪರ್ ವೈಭವ.

ಅಂದಹಾಗೆ, ಸೂಪರ್ ಚಿತ್ರದ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್. ದುಬಾರಿ ಎನ್ನುವ ಕಾರಣಕ್ಕೆ ಯೋಗರಾಜ ಭಟ್‌ರ ಲಗೋರಿ ಚಿತ್ರವನ್ನು ಕೈಬಿಟ್ಟಿದ್ದ ರಾಕ್‌ಲೈನ್, ಈಗ ಉಪೇಂದ್ರ ನಿರ್ದೇಶನದ ಚಿತ್ರಕ್ಕೆ ಬಿಡುಗೈಯಾಗಿರುವುದು ಕುತೂಹಲ ಹುಟ್ಟಿಸಿದೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada