»   » 'ಗಂಡೆದೆ'ಯ ನಾಯಕನಾಗಿ ಚಿರಂಜೀವಿ ಸರ್ಜಾ

'ಗಂಡೆದೆ'ಯ ನಾಯಕನಾಗಿ ಚಿರಂಜೀವಿ ಸರ್ಜಾ

Subscribe to Filmibeat Kannada

'ವಾಯುಪುತ್ರ' ಚಿತ್ರದ ನಂತರ ನಟ ಚಿರಂಜೀವಿ ಸರ್ಜಾ ಮತ್ತೊಂದು ಚಿತ್ರಕ್ಕೆ ಆಯ್ಕೆಯಾಗಿದ್ದಾರೆ. ರಾಮು ಎಂಟರ್ ಪ್ರೈಸಸ್ ನಿರ್ಮಿಸುತ್ತಿರುವ ಚಿತ್ರಕ್ಕೆ 'ಗಂಡೆದೆ' ಎಂದು ಹೆಸರಿಡಲಾಗಿದೆ. ತೆಲುಗಿನ ಪ್ರಸಿದ್ಧ ಬರಹಗಾರಆಕುಲ ಶಿವ ಚಿತ್ರದ ನಿರ್ದೇಶಕರು. ಅಧಿಕೃತವಾಗಿ ಚಿತ್ರ ಜನವರಿ 22ರಂದು ಸೆಟ್ಟೇರಲಿದೆ.

'ವೀರಮದಕರಿ' ಚಿತ್ರದಲ್ಲಿ ಸುದೀಪ್ ಜತೆ ಅಭಿನಯಿಸಿದ್ದ ರಾಗಿಣಿ 'ಗಂಡೆದೆ'ಯ ನಾಯಕಿ. 'ವೀರಮದಕರಿ' ಚಿತ್ರದ ಬಳಿಕ ರಾಗಿಣಿ ಅವರನ್ನು ಹೆಚ್ಚಿನ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. 'ಶಂಕರ್ ಐಪಿಎಸ್' ಚಿತ್ರಕ್ಕೆ ವಿಜಯ್ ಜತೆಯಾಗಿ ಅಭಿನಯಿಸಿದ್ದಾರೆ.

ವಿಜಯ ರಾಘವೇಂದ್ರ ಅಭಿನಯದ'ಗೋಕುಲ' ಚಿತ್ರದಲ್ಲಿ ಐಟಂ ಸಾಂಗ್ ನಲ್ಲಿ ರಾಗಿಣಿ ಕಾಣಿಸಿದ್ದರು. ಐಟಂ ಹಾಡಲ್ಲಿ ಕುಣಿದ ನಟಿ ಎಂಬ ಕಾರಣಕ್ಕೆ ರಾಗಿಣಿಯನ್ನು ಛಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಚಿತ್ರದಿಂದ ತಿರಸ್ಕರಿಸಿದ್ದರು. ರಾಗಿಣಿಗೆ ತಮಿಳು ಚಿತ್ರರಂಗ ಸಹ ಬಾಗಿಲು ತೆರೆದಿದೆ. 'ಆರ್ಯನ್' ಎಂಬ ತಮಿಳು ಚಿತ್ರಕ್ಕೆ ರಾಗಿಣಿ ಆಯ್ಕೆಯಾಗಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada