For Quick Alerts
  ALLOW NOTIFICATIONS  
  For Daily Alerts

  ಈ ವಾರ ದೇವರು ಕೊಟ್ಟ ತಂಗಿ ಜತೆಗೆ ಎರಡು

  |

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ದೇವರು ಕೊಟ್ಟ ತಂಗಿ' ಈ ವಾರ ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ವಿಜಯ ರಾಘವೇಂದ್ರ ಅಭಿನಯದ 'ಐಪಿಸಿ ಸೆಕ್ಷನ್ 300' ಜತೆಗೆ 'ಭಯ ಡಾಟ್ ಕಾಂ' ಸಹ ಈ ವಾರ ಬಿಡುಗಡೆಯಾಗುತ್ತಿರುವ ಮತ್ತೆರಡು ಚಿತ್ರಗಳು.

  'ದೇವರು ಕೊಟ್ಟ ತಂಗಿ' ಚಿತ್ರವನ್ನು ಸ್ವತಃ ಸಾಯಿ ಪ್ರಕಾಶ್ ಅವರೇ ಬಿಡುಗಡೆ ಮಾಡುತ್ತಿದ್ದಾರೆ. ಸತ್ಯ ಇನ್ ಲವ್, ಭಾಗ್ಯದ ಬಳೆಗಾರ, ಬಂಧು ಬಳಗ, ಮಾದೇಶ, ಪರಮೇಶ ಪಾನ್ ವಾಲ, ಹೊಡಿಮಗ, ನಂದ ಚಿತ್ರಗಳು ಬಾಕ್ಸಾಫೀಸಲ್ಲಿ ಸದ್ದು ಮಾಡಿರಲಿಲ್ಲ. ಹಾಗಾಗಿ ಶಿವರಾಜ್ ಕುಮಾರ್ ಸಹ ಬಹಳಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿರುವ ಚಿತ್ರ. ಹಂಸಲೇಖ ಅವರ ಸಾಹಿತ್ಯ ಮತ್ತು ಸಂಗೀತವಿರುವ ಈ ಚಿತ್ರಕ್ಕೆ ನಾಯಕಿ ಮೋನಿಕಾ. ರಾಧಿಕಾ ಇಲ್ಲದತಂಗಿಯ ಸ್ಥಾನವನ್ನು ಮೀರಾ ಜಾಸ್ಮಿನ್ ತುಂಬಿದ್ದಾರೆ.

  'ಐಪಿಸಿ ಸೆಕ್ಷನ್ 300" ತಮ್ಮ ವೃತ್ತಿ ಜೀವನದಲ್ಲಿ ಬ್ರೇಕ್ ನೀಡುವ ನಿರೀಕ್ಷೆಯಲ್ಲಿ ವಿಜಯ ರಾಘವೇಂದ್ರ ಇದ್ದಾರೆ. ಸುದೀರ್ಘ ಸಮಯದ ಬಳಿಕ ವಿಜಯ ರಾಘವೇಂದ್ರ ಚಿತ್ರ ಬಿಡುಗಡೆಯಾಗುತ್ತಿದೆ. ವಿಶೇಷ ಪಾತ್ರದಲ್ಲಿ ದೇವರಾಜ್ ಕಾಣಿಸಲಿದ್ದು ಪ್ರಿಯಾಂಕಾ ಈ ಚಿತ್ರದ ನಾಯಕಿ.ಪ್ರೇಕ್ಷಕರನ್ನು ರಂಜಿಸಲು ಸುಮನ್ ರಂಗನಾಥ್ ಸಹ ಇದ್ದಾರೆ. ಸೃಜನ್ ಲೋಕೇಶ್, ಯತಿರಾಜ್ ಪೋಷಕ ಪಾತ್ರದಲ್ಲಿದ್ದಾರೆ.

  ಕಳೆದ ವಾರವೇ ಬಿಡುಗಡೆಯಾಗಬೇಕಿದ್ದ 'ಭಯ ಡಾಟ್ ಕಾಂ' ಕಾರಣಾಂತರಗಳಿಂದ ಈ ವಾರ ಬಿಡುಗಡೆಯಾಗುತ್ತಿದೆ. ಅನುನಾರಾಯಣ್ ನಿರ್ಮಿಸಿರುವ ಈ ಚಿತ್ರ ಮೂವರು ನಾಯಕ,ನಾಯಕಿಯರ ಸುತ್ತ ಹೆಣೆದಿರುವ ವಿಶಿಷ್ಟ ಕಥಾನಕ. ಸಂತೋಷ, ಮಧುಸಾಗರ್, ವಿಕ್ರಂಸೂರಿ, ಮೇಘನ, ರೋಷಿನಿ, ಜಿ.ಕೆ.ಗೋವಿಂದರಾವ್, ಸುಂದರರಾಜ್, ಶಂಕರ್‌ಅಶ್ವತ್, ಸಿದ್ದರಾಜು, ಕಲ್ಯಾಣ್‌ಕರ್, ಭರತ್‌ಭಾಗವತರ್ ಮುಂತಾದವರ ಅಭಿನಯವಿದೆ.

  ಈ ಚಿತ್ರವನ್ನು ವೇಮಗಲ್ ಜಗನ್ನಾಥರಾವ್ ನಿರ್ದೇಶಿಸಿದ್ದಾರೆ. ನಿರ್ದೇಶಕರೇ ಕತೆ, ಚಿತ್ರಕತೆ, ಸಂಭಾಷಣೆ ಬರೆದಿರುವ ಈ ಚಿತ್ರಕ್ಕೆ ಉದಯಹೆಗ್ಡೆ ಅವರ ಸಂಕಲನವಿದೆ. ಸುರೇಶ್, ಚಂದ್ರಕುಮಾರ್ ನೃತ್ಯ, ರಾಜೇಶ್‌ರಾಮನಾಥ್ ಸಂಗೀತ ಹಾಗೂ ರಾಜಶೇಖರ್ ಛಾಯಾಗ್ರಹಣ 'ಭಯ ಡಾಟ್ ಕಾಂಗಿದೆ.

  (ದಟ್ಸ್ ಕನ್ನಡ ಚಿತ್ರವಾರ್ತೆ)

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X