»   » ಮಾತಿನ ಮನೆಯಲ್ಲಿ ಧೂಳಪ್ಪೋ 'ಧೂಳ್'

ಮಾತಿನ ಮನೆಯಲ್ಲಿ ಧೂಳಪ್ಪೋ 'ಧೂಳ್'

Posted By:
Subscribe to Filmibeat Kannada

'ಧೂಳ್' ಚಿತ್ರಕ್ಕೆ ಆಕಾಶ್ ಸ್ಟುಡಿಯೋದಲ್ಲಿ ಮಾತುಗಳ ಜೋಡಣೆ ನಡೆಯುತ್ತಿದೆ. 'ದುನಿಯಾ" ಚಿತ್ರದ ಮೂಲಕ ನೋಡುಗರ ಮನಗೆದ್ದ ಯೋಗೀಶ್ ಈ ಚಿತ್ರದ ನಾಯಕನ ಪಾತ್ರ ನಿರ್ವಹಣೆ ಮಾಡುತ್ತಿದ್ದು, 'ಮೆರವಣಿಗೆ"ಯ ಬೆಡಗಿ ಐಂದ್ರಿತಾ ರೇ ನಾಯಕಿಯಾಗಿ ನಟಿಸುತ್ತಿದ್ದಾರೆ.

ಖ್ಯಾತ ನಿರ್ದೇಶಕ ಎಂ.ಎಸ್.ರಾಜಶೇಖರ್ ಅವರ ಪುತ್ರ ಧರಣಿ ಈ ವಿಭಿನ್ನ ಪ್ರೇಮ ಕಥಾನಕವನ್ನು ನಿರ್ದೇಶಿಸುತ್ತಿದ್ದಾರೆ. ವಿ.ಹರಿಕೃಷ್ಣ ಅವರ ರಾಗ ಸಂಯೋಜನೆಯಲ್ಲಿ ಮೂಡಿ ಬಂದಿರುವ ಚಿತ್ರದ ಐದು ಹಾಡುಗಳು ಕೇಳಲು ಇಂಪಾಗಿದ್ದು, ಸದ್ಯದಲೇ ಧ್ವನಿಸುರುಳಿ ಬಿಡುಗಡೆಯಾಗಲಿದೆ ಎನ್ನುತ್ತಾರೆ ನಿರ್ಮಾಪಕರು.

ಶ್ರೀಸೇವಾಲಾಲ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಎಂ.ಎಚ್.ಸುನೀಲ್ ನಿರ್ಮಿಸುತ್ತಿರುವ, ಕೆ.ಎಚ್.ದತ್ತು ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಕೆ.ರಾಮ್‌ನಾರಾಯಣ್ ಸಂಭಾಷಣೆ ಬರೆದಿದ್ದಾರೆ. ಮೋಹನ್ ಪಂಡಿತ್ ಕಲೆ ಹಾಗೂ ರವಿವರ್ಮ ಅವರ ಸಾಹಸವಿರುವ ಈ ಚಿತ್ರದ ತಾರಾಬಳಗದಲ್ಲಿ ಯೋಗೀಶ್, ಐಂದ್ರಿತಾ ರೇ, ಪ್ರಕಾಶ್ ರೈ, ಓಂಪ್ರಕಾಶ್‌ರಾವ್ ಮುಂತಾದವರಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada