For Quick Alerts
  ALLOW NOTIFICATIONS  
  For Daily Alerts

  ಈ ವಾರ ಆರು ಮಂದಿ ಆಮದು ಬೆಡಗಿಯರ ದರ್ಬಾರ್

  By Rajendra
  |

  ಈ ಶುಕ್ರವಾರ (ನ.12) ಚಿತ್ರಮಂದಿರದಲ್ಲಿ ಆಮದು ಬೆಡಗಿಯರ ದರ್ಬಾರ್ ನಡೆಯಲಿದೆ. ಅಂದರೆ ಈ ವಾರ ತೆರೆಕಾಣುತ್ತಿರುವ 'ಏನೋ ಒಂಥರಾ' ಹಾಗೂ 'ಹುಡುಗ ಹುಡುಗಿ' ಚಿತ್ರದ ನಾಯಕಿಯರು ಆಮದು ಬೆಡಗಿಯರು ಎಂಬುದು ವಿಶೇಷ. ಒಬ್ಬರು ಇಬ್ಬರು ಅಲ್ಲ ಆರು ಮಂದಿ ಪರಭಾಷಾ ನಟಿಯರು ತೆರೆಗೆ ಜಿಗಿಯುತ್ತಿದ್ದಾರೆ.

  ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಏನೋ ಒಂಥರಾ' ಚಿತ್ರದ ನಾಯಕಿ ಪ್ರಿಯಾಮಣಿ ಮೂಲತಃ ಮಲ್ಲು ಬೆಡಗಿ. ಆದರೆ ಓದಿದ್ದು, ಬೆಳೆದದ್ದು ಬೆಂಗಳೂರಿನಲ್ಲಿ. ಹಾಗಾಗಿ ಈಕೆಗೆ ಕನ್ನಡ ಚೆನ್ನಾಗಿ ಗೊತ್ತು. ತಮಿಳಿನ ಯಶಸ್ವಿ ಚಿತ್ರ 'ಖುಷಿ' ಚಿತ್ರದ ರಿಮೇಕ್. ಮೂಲ ತಮಿಳು ನಂತರ ತೆಲುಗು ಮತ್ತು ಹಿಂದಿ ಭಾಷೆಯಲ್ಲಿ ರಿಮೇಕ್ ಆದನಂತರ ಈಗ ಕನ್ನಡದಲ್ಲಿ ಬರುತ್ತಿರುವ ಚಿತ್ರ.

  'ಏನೋ ಒಂಥರಾ' ಚಿತ್ರಕ್ಕೆ ಮುಸ್ಸಂಜೆಮಾತು ಖ್ಯಾತಿಯ ಮಹೇಶ್ ನಿರ್ದೇಶಕರು. ತಮಿಳು ಟ್ಯೂನ್ ಗೆ ಸದ್ಯಕ್ಕೆ ಕನ್ನಡದ ನಂಬರ್ ಒನ್ ಸಂಗೀತ ನಿರ್ದೇಶಕ ಹರಿಕೃಷ್ಣ ಸ್ವಲ್ಪ ಪಾಲಿಷ್ ಮಾಡಿದ್ದಾರೆ. ತಾರಾಗಣದಲ್ಲಿ ಗಣೇಶ್, ಪ್ರಿಯಾಮಣಿ, ಜೈಜಗದೀಶ್, ಶರಣ್, ಶ್ರೀನಿವಾಸಮೂರ್ತಿ, ವಿಜಯಲಕ್ಷ್ಮಿ ಸಿಂಗ್, ತೇಜಸ್ವಿನಿ ಮುಂತಾದವರಿದ್ದಾರೆ.

  ಇನ್ನು ಸ್ಟಾರ್ ಡೈರೆಕ್ಟರ್ ಇಂದ್ರಜಿತ್ ಲಂಕೇಶ್ ಈ ಬಾರಿ ಐವರು ನಾಯಕಿಯರನ್ನು ಕನ್ನಡ ಬೆಳ್ಳಿಪರದೆಗೆ ಪರಿಚಯಿಸುತ್ತಿದ್ದಾರೆ. ಇವರೆಲ್ಲರೂ ಪರಭಾಷಾ ನಟಿಯರು ಎಂಬುದು ವಿಶೇಷ. ಲೇಖಾ ವಾಷಿಂಗ್ಟನ್ ಪ್ರಮುಖ ನಾಯಕಿ. ಸದಾ, ಇಲಿಯಾನಾ, ಅನಿತಾ ಹಾಗೂ ಬಿಯಾಂಕಾ ದೇಸಾಯಿ ಪ್ರಮುಖ ಪಾತ್ರಗಳನ್ನು ಪೋಷಿಸಿದ್ದಾರೆ.

  ಸಂದೇಶ್ ನಾಗರಾಜ್ ನಿರ್ಮಿಸಿರುವ ಈ ಚಿತ್ರದ ನಾಯಕ ನಟ ಧ್ಯಾನ್. ಬಿ ಎ ಮಧು ಅವರ ಸಂಭಾಷಣೆ, ಜೋಶುವಾ ಶ್ರೀಧರ್ ಅವರ ಸಂಗೀತ, ಗುಂಡ್ಲುಪೇಟೆ ಸುರೇಶ್ ಅವರ ಛಾಯಾಗ್ರಹಣ, ಪ್ರಕಾಶ್ ಅವರ ಸಂಕಲನ ಹುಡುಗ ಹುಡುಗಿ ಚಿತ್ರಕ್ಕಿದೆ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X