»   » ಕಾಲ್ಗೆಜ್ಜೆ ತಾಳಕೆ, ಕೈಬಳೆಯ ನಾದಕೆ

ಕಾಲ್ಗೆಜ್ಜೆ ತಾಳಕೆ, ಕೈಬಳೆಯ ನಾದಕೆ

Posted By:
Subscribe to Filmibeat Kannada

ಹೆಸರೇ ಹೇಳುವ ಹಾಗೆ ಸಂಗೀತಮಯ ಪ್ರೇಮಕಥೆ ಹೊಂದಿರುವ ಕಾಲ್ಗೆಜ್ಜೆ ಚಿತ್ರವನ್ನು ಎ. ಬಂಗಾರು ಕಥೆ-ಚಿತ್ರಕಥೆ- ಸಂಭಾಷಣೆ- ನಿರ್ದೇಶನ ಮಾಡಿದ್ದಾರೆ. ನವಿರಾದ ಪ್ರೇಮಕಥೆಯೊಂದನ್ನು ವಿಭಿನ್ನ ರೀತಿಯಲ್ಲಿ ನಿರೂಪಿಸುವ ಪ್ರಯತ್ನ ಮಾಡಿರುವ ನಿರ್ದೇಶಕ ಬಂಗಾರು ಕರ್ನಾಟಕದ ಮೇಲುಕೋಟೆ, ಭದ್ರಾವತಿ, ಬೆಂಗಳೂರು, ಕುಂದಾಪುರ, ಮೊದಲಾದ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಿದ್ದಾರೆ.

ಶೂಟಿಂಗ್‌ಮುಗಿಸಿ ಎಡಿಟಿಂಗ್ ಕೂಡ ಮುಗಿದು, ಕಳೆದ ಶುಕ್ರವಾರದಿಂದ ಪ್ರಾರಂಭಿಸಿ 8 ದಿನಗಳ ಕಾಲ ಚಾಮುಂಡೇಶ್ವರಿ ಧ್ವನಿ ಗ್ರಹಣ ಕೇಂದ್ರದಲ್ಲಿ ಮಾತುಗಳ ಮರುಲೇಪನ ಕಾರ್ಯ ನಡೆಯಿತು. ಚಿತ್ರದ 6 ಹಾಡುಗಳಿಗೆ ಗಂಧರ್ವ ಸಾಹಿತ್ಯ ಬರೆದು ಸಂಗೀತ ಸಂಯೋಜನೆ ಮಾಡಿದ್ದಾರೆ. ವೀನಸ್ ಮೂರ್ತಿ ಛಾಯಾಗ್ರಹಣ ಕೆಲಸ ನಿರ್ವಹಿಸಿದ್ದಾರೆ.

ಬ್ರೈಟ್ ಎಂಟರ್‌ಟೈನ್‌ಮೆಂಟ್ ಲಾಂಛನದಲ್ಲಿ ಉದ್ಯಮಿ ನಾಗಭೂಷಣ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಎಂ. ಭೈರೇಗೌಡ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ವಿಶ್ವಾಸ್, ರೂಪಿಕಾ, ನಾಯಕ-ನಾಯಕಿ ಪಾತ್ರ ನಿರ್ವಹಿಸಿದ್ದು, ಅನಂತ್‌ನಾಗ್ ಸುಮಿತ್ರ, ಶರಣ್, ತಬಲ ನಾಣಿ, ರಂಗಾಯಣ ರಘು, ಪವಿತ್ರಾ ಲೋಕೇಶ್, ಪ್ರಮುಖ ತಾರಾಗಣದಲ್ಲಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada