»   »  ಸೆಪ್ಟೆಂಬರ್ 25ಕ್ಕೆ ಭಟ್ಟರ ಮನಸಾರೆ ತೆರೆಗೆ

ಸೆಪ್ಟೆಂಬರ್ 25ಕ್ಕೆ ಭಟ್ಟರ ಮನಸಾರೆ ತೆರೆಗೆ

Subscribe to Filmibeat Kannada

ಯೋಗರಾಜ್ ಭಟ್ ನಿರ್ದೇಶನದಲ್ಲಿ ಬರುತ್ತ್ತಿರುವ ಐದನೇ ಚಿತ್ರ 'ಮನಸಾರೆ' ಸೆಪ್ಟೆಂಬರ್ 25ರಂದು ತೆರೆಕಾಣಲಿದೆ. ಮನಸಾರೆ ಚಿತ್ರದಲ್ಲಿನ ಹಾಡುಗಳು ಈಗಾಗಲೇ ಸಾಕಷ್ಟು ಜನಪ್ರಿಯವಾಗಿದ್ದು ಪ್ರೇಕ್ಷಕರು ಕುತೂಹಲದಿಂದ ನಿರೀಕ್ಷಿಸುವಂತಾಗಿದೆ.

ಮನೋಮೂರ್ತಿ ಸಂಗೀತಕ್ಕೆ ಜಯಂತ ಕಾಯ್ಕಿಣಿ ಸಾಹಿತ್ಯ ಜುಗಲ್ ಬಂದಿಯಾಗಿದ್ದು, ಸೋನು ನಿಗಂ, ಶ್ರೇಯಾ ಘೋಷಾಲ್ ಕಂಠಸಿರಿಗೆ ಪ್ರೇಕ್ಷಕರು ತಲೆತೂಗುವಂತಾಗಿದೆ. ಸೋನು ನಿಗಂ ಹಾಡಿರುವ 'ಎಲ್ಲೋ ಮಳೆಯಾಗಿದೆಯೆಂದು' ಮತ್ತೊಮ್ಮೆ ಮುಂಗಾರು ಮಳೆ ಹಾಡುಗಳನ್ನು ನೆನಪಿಸುವಂತಿದೆ.

ಶ್ರೇಯಾ ಘೋಷಾಲ್ ಹಾಡಿರುವ 'ನಾ ನಗುವ ಮೊದಲೇನೆ...' ಹಾಗೂ ಸೋನು ಅವರ ಕಂಠದಲ್ಲಿ ಬಂದ 'ಒಂದೇ ಒಂದು ನೋಟ ಸಾಕು...' ಮೊದಲಾದ ಹಾಡುಗಳು ಈಗಾಗಲೇ ಪ್ರೇಕ್ಷಕರ ಬಾಯಲ್ಲಿ ನಲಿದಾಡುತ್ತಿವೆ. ಒಟ್ಟಿನಲ್ಲಿ ಚಿತ್ರದ ಹಾಡುಗಳನ್ನು ಪ್ರೇಕ್ಷಕರು ಮನಸಾರೆ ಸವಿಯುತ್ತಿದ್ದಾರೆ.

ಇನ್ನು ಚಿತ್ರದ ನಾಯಕ ನಟ ದಿಗಂತ್ ಗೆ ಈ ಚಿತ್ರ ಹೊಸ ಜೀವನ ಕೊಡಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಚಿತ್ರದ ಮೂಲಕ ಪ್ರೇಕ್ಷಕರಿಗೆ ತಾನು ಮತ್ತಷ್ಟು ಹತ್ತಿರವಾಗಲಿದ್ದೇನೆ ಎನ್ನುತ್ತಾರೆ ಐಂದ್ರಿತಾ ರೇ. ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಸಹ 'ಮನಸಾರೆ' ಚಿತ್ರ ಬಗ್ಗೆ ತೀವ್ರ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada