»   » ಕನ್ನಡದ ಹೊಸ ಜೇಮ್ಸ್ ಬಾಂಡ್ ..ಶಿವಣ್ಣ

ಕನ್ನಡದ ಹೊಸ ಜೇಮ್ಸ್ ಬಾಂಡ್ ..ಶಿವಣ್ಣ

Posted By:
Subscribe to Filmibeat Kannada

ಯಪ್ಪಾ..! ಯಾರು ಈ ಐಡಿಯಾ ಕೊಟ್ರೋ ಗೊತ್ತಿಲ್ಲ. ಒಂದಂತೂ ನಿಜ. ಚಿತ್ರ ಗೆಲುತ್ತೋ ಬಿಡುತ್ತೋ. ಆದ್ರೆ ಕನ್ನಡ ಚಿತ್ರರಂಗದಲ್ಲಿ ಹೊಸ ಹೊಸ ಪ್ರಯೋಗಕ್ಕೆ ತಮ್ಮನ್ನು ತಾವು ತೋಡಗಿಸಿಕೊಂಡು ವಿಭಿನ್ನತೆಯಿಂದಲೇ ಕನ್ನಡ ಸಿನಿಮಾಗಳನ್ನು ಉಳಿಸುತ್ತಿರುವ ನಟ ಶಿವರಾಜ್ ಕುಮಾರ್ ಎಂದರೆ ತಪ್ಪಾಗಲಾರದು.

'ಹ್ಯಾಟ್ರಿಕ್ ಹೀರೋ' ಎಂದು 90ರ ದಶಕದಲ್ಲಿ ಪಡೆದ ಬಿರುದಿಗೆ ಬದಲಿಗೆ ಶಿವಣ್ಣನಿಗೆ 'ಡಿಫೆರೆಂಟ್ ಹೀರೋ' ಎಂದರೆ ಹೇಗಿರುತ್ತದೆ ಎಂದು ಈಗಾಗಲೇ ಅಭಿಮಾನಿಗಳು ಚಿಂತನೆ ನಡೆಸಿದ್ದಾರೆ.

ಜೋಗಯ್ಯನ ವಾಲ್ ಪೋಸ್ಟರ್ ಗಳು ನೋಡಿ ಜೈಕಾರ ಹಾಕಿದ ಅಭಿಮಾನಿಗಳು ಇನ್ನೂ ಕೆಲವು ದಿನಗಳಲ್ಲಿ ಶಿವಣ್ಣನ ಹುಟ್ಟುಹಬ್ಬ(ಜು.12)ದಂದು ಬಾಂಡ್ ಶೈಲಿಯ ನಾಯಕನನ್ನು ಬರಮಾಡಿಕೊಳ್ಳಬೇಕಾಗುತ್ತದೆ.

ಹೌದು, ಅಣ್ಣಾವ್ರು ಮಾಡಿದ ಜೇಮ್ಸ್ ಬಾಂಡ್ ಶೈಲಿಯ ಚಿತ್ರವನ್ನು ಮತ್ತೊಮ್ಮೆ ತೆರೆಗೆ ತರಲು ಶಿವರಾಜ್ ಕುಮಾರ್ ಸಿದ್ಧತೆ ನಡೆಸಿದ್ದಾರೆ. 1968 ರಲ್ಲಿ ದೊರೈ ಭಗವಾನ್ ಎಂಬ ಯುವ ನಿರ್ದೇಶಕರುಗಳು ಬಾಂಡ್ ಶೈಲಿಯ ಸಾಹಸವನ್ನು ಡಾ.ರಾಜ್ ಕುಮಾರ್ ಅವರ ಕೈಲಿ ಮಾಡಿಸಿ ಸೈ ಎನಿಸಿಕೊಂಡಿದ್ದರು.

ಜೇಡರಬಲೆ, ಗೋವಾದಲ್ಲಿ ಸಿಐಡಿ 999, ಅಪರೇಷನ್ ಜಾಕ್ ಪಾಟ್ ನಲ್ಲಿ ಸಿಐಡಿ 999 ಹಾಗೂ ಅಪರೇಷನ್ ಡೈಮಂಡ್ ರಾಕೆಟ್ ಬಾಂಡ್ ಶೈಲಿ ಚಿತ್ರಗಳು, ಧೂಮಕೇತು ಚಿತ್ರವನ್ನು ಬೇಕಾದರೆ ಈ ಪಟ್ಟಿಗೆ ಸೇರಿಸಬಹುದು.

ಸುಮಾರು 32 ವರ್ಷಗಳ ನಂತರ ಕನ್ನಡ ಚಿತ್ರರಂಗದಲ್ಲಿ ಮತ್ತೊಬ್ಬ ಬಾಂಡ್ ಉದಯವಾಗಲಿದ್ದಾರೆ. 'ಆಪರೇಷನ್ ಗೋಲ್ಡನ್ ಗ್ಯಾಂಗ್' ಹೆಸರಿನ ಚಿತ್ರದ ಮೂಲಕ ಶಿವರಾಜ್ ಕುಮಾರ್ ಹೊಸ ಬಾಂಡ್ ಆಗಿ ಮಿಂಚಲು ತಯಾರಿ ನಡೆಸಿದ್ದಾರೆ.

ಚಿತ್ರದ ಹೆಸರನ್ನು ಕೆಎಫ್ ಸಿಸಿಯಲ್ಲಿ ನೋಂದಾಯಿಸಲಾಗಿದೆ. ಮುಂದಿನ ವರ್ಷ ಜನವರಿಯಿಂದ ಚಿತ್ರೀಕರಣ ಆರಂಭ ಎಂದು ನಿರ್ಮಾಪಕ ಬಸವ ರೆಡ್ಡಿ ಹೇಳುತ್ತಾರೆ.

ಅಂದಿನ ಕಾಲದ ದುಬಾರಿ ಚಿತ್ರವಾಗಿದ್ದ(ಸುಮಾರು 38 ಲಕ್ಷ) ಆಪರೇಷನ್ ಡೈಮಂಡ್ ರಾಕೆಟ್, ನ ಯಶಸ್ಸಿನ ನಂತರ ಗೋಲ್ಡನ್ ಗ್ಯಾಂಗ್ ಹೆಸರಿನ ಮುಂದಿನ ಭಾಗ ತೆಗೆಯಲು ನಿರ್ಧರಿಸಲಾಗಿತ್ತು. ಆದರೆ, ಅದಕ್ಕೆ ಈಗ ಕಾಲ ಕೂಡಿ ಬಂದಿರುವುದು ಸಂತೋಷ ಎನ್ನುತ್ತಾರೆ ಜೇಡರಬಲೆ ಹೆಣೆದ ಹಿರಿಯ ನಿರ್ದೇಶಕ ಭಗವಾನ್.

ಏನಿವೇ.. ನೇಮ್ ಈಸ್ ಬಾಂಡ್ .. ಜೇಮ್ಸ್ ಬಾಂಡ್ ಎನ್ನುವಂತೆ ನೇಮ್ ಈಸ್ ರಾಜ್... ಶಿವರಾಜ್ ಎನ್ನುತ್ತಾ ಶಿವಣ್ಣ ತೆರೆ ಮೇಲೆ ವಿಜೃಂಭಿಸಲಿ..

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada