»   » ಸುಗ್ರೀವನ ಆರ್ಭಟಕ್ಕೆ ಸೆನ್ಸಾರ್ ಅಸ್ತು

ಸುಗ್ರೀವನ ಆರ್ಭಟಕ್ಕೆ ಸೆನ್ಸಾರ್ ಅಸ್ತು

Posted By:
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟಿಸಿರುವ 'ಸುಗ್ರೀವ' ಚಿತ್ರ ಸಾಕಷ್ಟು ಸುದ್ದಿ ಮಾಡತ್ತಲೇ ಬಂದಿದೆ. ಎಲ್ಲ ಸರಿ ಹೋಗಿದ್ದರೆ ಇಷ್ಟೋತ್ತಿಗೆ ಚಿತ್ರಮಂದಿರದಲ್ಲಿ ತುಂಬಿದ ಪ್ರದರ್ಶನ ಕಾಣಬೇಕಿತ್ತು. ಆದರೆ, ಅಕಾರಣವಾಗಿ ತಡವಾಯಿತು. ಆದರೆ, ಸೆನ್ಸಾರ್ ಮಂಡಳಿ ಯು/ಎ ಪ್ರಮಾಣ ಪತ್ರ ನೀಡಿದ್ದು ಶೀಘ್ರದಲ್ಲೇ ಬೆಳ್ಳಿತೆರೆ ಮೇಲೆ ಸುಗ್ರೀವನ ಆರ್ಭಟ ನೋಡಲಿದ್ದೀರಿ ಎನ್ನುತ್ತಾರೆ ನಿರ್ಮಾಪಕ ಅಣಜಿ ನಾಗರಾಜ್.

ಒಂದೇ ದಿನದ ಕೇವಲ 18 ಗಂಟೆಗಳಲ್ಲಿ ಚಿತ್ರೀಕರಿಸಿದ ಕೀರ್ತಿ ಹೊಂದಿರುವ ಸುಗ್ರೀವ ಚಿತ್ರಕ್ಕೆ'ಯು' ಸರ್ಟಿಫಿಕೇಟ್ ಸಿಗಬೇಕಿತ್ತು. ಆದರೆ, ಚಿತ್ರದಲ್ಲಿ ಸ್ವಲ್ಪ ಹೊಡೆದಾಟ, ಬಡಿದಾಟ, ರಕ್ತಪಾತ ಇರುವ ಕಾರಣದಿಂದ ಯು/ಎ ಪ್ರಮಾಣ ಪತ್ರ ಸಿಕ್ಕಿದೆ. ಸೆನ್ಸಾರ್ ಮಂಡಳಿ ಮೆಚ್ಚುಗೆ ಸೂಚಿಸಿದೆ. ಇಡೀ ಕುಟುಂಬ ಸಮೇತ ಚಿತ್ರವನ್ನು ಯಾವುದೇ ಮುಜುಗರವಿಲ್ಲದೆ ನೋಡಬಹುದು ಎಂದು ಅಣಜಿ ಹೇಳಿದರು.

ಫೆ.19 ರಂದೇ ಬಿಡುಗಡೆ ಮಾಡಲು ಮನಸ್ಸು ಮಾಡಿದ್ದೇವೆ. ಆದರೆ, ಇತರೆ ಚಿತ್ರಗಳ ಪೈಪೋಟಿಯನ್ನು ಎದುರಿಸಬೇಕು. ಆದರೆ ಶಿವಣ್ಣ ಅವರ ಚಿತ್ರವನ್ನು ಜನ ಎಂದೂ ಕೈಬಿಟ್ಟಿಲ್ಲ. ಉತ್ತಮ ಪ್ರತಿಕ್ರಿಯೆ ಸಿಗುವ ನಿರೀಕ್ಷೆ ಇದೆ ಎಂದು ಅಣಜಿ ಭರವಸೆ ವ್ಯಕ್ತಪಡಿಸಿದರು. 18 ಗಂಟೆಗಳಲ್ಲಿ ಚಿತ್ರೀಕರಣದ ದಾಖಲೆ ಜೊತೆಗೆ ಚಿತ್ರರಂಗದ 10 ನಿರ್ದೇಶಕರು ಹಾಗೂ 12 ಜನ ಕ್ಯಾಮೆರಮನ್ ಗಳು ಈ ಚಿತ್ರದಲ್ಲಿ ಒಟ್ಟಿಗೆ ಕೆಲಸ ನಿರ್ವಹಿಸಿದ್ದು ವಿಶೇಷ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada