ಕಾರ್ಮಿಕರ ದಿನದಂದು ಉಪೇಂದ್ರ ಸೂಪರ್ ವಿಜಯೋತ್ಸವ
ಹತ್ತು ವರ್ಷಗಳ ಬಳಿಕ ರಿಯಲ್ ಸ್ಟಾರ್ ಉಪೇಂದ್ರ ಆಕ್ಷನ್, ಕಟ್‌ನಲ್ಲಿ ಮೂಡಿಬಂದ 'ಸೂಪರ್' ಚಿತ್ರ ಶತಕ ಪೂರೈಸಿ ಮುನ್ನುಗ್ಗುತ್ತಿದೆ. ಈ ಸಂಭ್ರಮವನ್ನು ಚಿತ್ರದ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅದ್ದೂರಿಯಾಗಿ ಆಚರಿಸಲು ಸಿದ್ಧತೆ ನಡೆಸಿದ್ದಾರೆ. ಕಾರ್ಮಿಕರ ದಿನಾಚರಣೆಯಂದು (ಮೇ.1) ಅರಮನೆ ಮೈದಾನದಲ್ಲಿ ಗಾಯತ್ರಿ ವಿಹಾರದಲ್ಲಿ 'ಸೂಪರ್' ಶತದಿನೋತ್ಸವ ಸಂಭ್ರಮ ನಡೆಯಲಿದೆ.
ಈ ಅದ್ದೂರಿ ಕಾರ್ಯಕ್ರಮದ ಸಂಪೂರ್ಣ ಮಾಹಿತಿ ಶೀಘ್ರದಲ್ಲೆ ಬಿಡುಗಡೆಯಾಗಲಿದ್ದು ಚಿತ್ರರಂಗದ ಹಲವರು ಗಣ್ಯರು ಭಾಗವಹಿಸಲಿದ್ದಾರೆ. ಸೂಪರ್ ಚಿತ್ರದ ತೆಲುಗು ಹಾಗೂ ತಮಿಳು ಭಾಷೆಗೂ ಡಬ್ ಆಗಿದ್ದು ಅಲ್ಲಿನ ಕೆಲವು ತಾರೆಗಳನ್ನೂ ಕರೆಸುವ ಪ್ರಯತ್ನವನ್ನು ರಾಕ್ ಲೈನ್ ಮಾಡುತ್ತಿದ್ದಾರೆ. ಈ ಹಿಂದೆ ಏಪ್ರಿಲ್‌ನಲ್ಲಿ ಶತದಿನೋತ್ಸವ ಆಚರಿಸಲಾಗುತ್ತದೆ ಎಂದು ಹೇಳಲಾಗಿತ್ತು.
ಇದೇ ಸಂದರ್ಭದಲ್ಲಿ ರಾಕ್ ಲೈನ್ ವೆಂಕಟೇಶ್ ತಮ್ಮ ಚಿತ್ರಗಳಲ್ಲಿ ಕೆಲಸ ಮಾಡಿದ ನಿರ್ದೇಶಕರು, ನಟ ನಟಿಯರು, ಸಂಗೀತ ನಿರ್ದೇಶಕರು ಹಾಗೂ ಛಾಯಾಗ್ರಾಹಕರನ್ನು ಅಭಿನಂದಿಸಲಿದ್ದಾರೆ. ಒಟ್ಟಾರೆಯಾಗಿ ಉಪೇಂದ್ರ ಅಭಿಮಾನಿಗಳಿಗೆ ಈ ಕಾರ್ಯಕ್ರಮ ಮರಯಲಾಗದ ಅನುಭವ ನೀಡಲಿದೆ.


Click it and Unblock the Notifications











