»   » ಕನ್ನಡ ಚಿತ್ರರಂಗದ ಹೊಸ ಅತಿಥಿ ಇಲಿಯಾನಾ

ಕನ್ನಡ ಚಿತ್ರರಂಗದ ಹೊಸ ಅತಿಥಿ ಇಲಿಯಾನಾ

Posted By:
Subscribe to Filmibeat Kannada
Ileana D'Cruz
ಸುದೀರ್ಘ ಸಮಯದಿಂದ ಗಾಂಧಿನಗರದಲ್ಲಿ ಸುತ್ತು ಹೊಡೆಯುತ್ತಿದ್ದ ಸಖತ್ ಹಾಟ್ ಸುದ್ದಿ ಕಡೆಗೂ ನಿಜವಾಗಿದೆ. ತೆಲುಗು ಚಿತ್ರರಸಿಕರ ಮನಗೆದ್ದ ನಟಿ ಇಲಿಯಾನಾ ಕನ್ನಡ ಚಿತ್ರರಂಗಕ್ಕೆ ದಯಮಾಡಿಸಿದ್ದಾರೆ. ತೆಲುಗಿನ ಪೋಕಿರಿ (ಕನ್ನಡದಲ್ಲಿ ಪೊರ್ಕಿ) ಚಿತ್ರದ ಮೂಲಕ ಇಲಿಯಾನಾ ಮನೆಮಾತಾಗಿದ್ದರು.

ಇಷ್ಟಕ್ಕೂ ಇಲಿಯಾನಾ ಕನ್ನಡಕ್ಕೆ ಬರುತ್ತಿರುವುದು ಪೂರ್ಣಪ್ರಮಾಣದ ನಾಯಕಿಯಾಗಿ ಅಲ್ಲ ಎಂಬುದು ವಿಶೇಷ. ಆಕೆ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇಲಿಯಾನಾರನ್ನು ಕನ್ನಡಕ್ಕೆ ಕರೆತರುತ್ತಿರುವವರು ನಿರ್ದೇಶಕ ಇಂದ್ರಜಿತ್ ಲಂಕೇಶ್. ಚಿತ್ರ 'ತುಂಟ ತುಂಟಿ'. ಚಿತ್ರದ ಹಾಡೊಂದರಲ್ಲಿ ಇಲಿಯಾನಾ ಕುಣಿದು ಪ್ರೇಕ್ಷಕರ ಹೃದಯ ತಣಿಸಲಿದ್ದಾರೆ ಎನ್ನುತ್ತವೆ ಮೂಲಗಳು.

ಅದಾಗಲೆ ಹಾಡಿನ ಚಿತ್ರೀಕರಣ ಗೋವಾದಲ್ಲಿ ಮುಗಿದಿದ್ದು ಇಲಿಯಾನಾ 'ತುಂಟ'ನ ಜೊತೆ ಕುಣಿದು ಹೋಗಿದ್ದಾರೆ. ಮೊನಾಲಿಸಾ ಖ್ಯಾತಿಯ ಸದಾ ಸಹ ಚಿತ್ರದಲ್ಲಿ ಅಭಿನಯಿಸಿದ್ದು ಅವರೂ ಚಿತ್ರದ ಮತ್ತೊಬ್ಬ ಅತಿಥಿ ನಟಿ ಎಂಬುದು ಇನ್ನೊಂದು ವಿಶೇಷ. ಹೀಗೆ ವಿಶೇಷಗಳ ಸರಮಾಲೆಗಳುಳ್ಳ ಚಿತ್ರದ ನಾಯಕ ನಟ ಧ್ಯಾನ್. ರೇಖಾ ವಾಷಿಂಗ್ಟನ್ ಹಾಗೂ ಇಶಿತಾ ಶರ್ಮಾ ಎಂಬ ಇಬ್ಬರು ಚಿತ್ರದ ನಾಯಕಿಯರು.

English summary
Actress Ileana D'Cruz
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada