»   »  ರಾಜ್ಯ ಚಲನಚಿತ್ರ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ

ರಾಜ್ಯ ಚಲನಚಿತ್ರ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ

Posted By:
Subscribe to Filmibeat Kannada

2008-09 ನೇ ಸಾಲಿನಲ್ಲಿ ಏಪ್ರಿಲ್ 1, 2008 ರಿಂದ ಮಾರ್ಚ್ 31, 2009 ರ ವರೆಗೆ ಸೆನ್ಸಾರ್ ಪ್ರಮಾಣ ಪತ್ರ ಪಡೆದಿರುವಂತಹ ಕನ್ನಡ ಹಾಗೂ ರಾಜ್ಯದ ಇತರೆ ಪ್ರಾದೇಶಿಕ ಭಾಷೆಯ ಚಲನಚಿತ್ರಗಳಿಗೆ ರಾಜ್ಯ ಪ್ರಶಸ್ತಿಗಳನ್ನು ನೀಡಲು ಸಂಬಂಧಪಟ್ಟ ಚಲನಚಿತ್ರ ನಿರ್ಮಾಪಕರುಗಳಿಂದ ಪ್ರವೇಶ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ನಿಗದಿಪಡಿಸಿದ ಅರ್ಜಿ ನಮೂನೆಗಳನ್ನು ನಿರ್ದೇಶಕರು, ವಾರ್ತಾ ಇಲಾಖೆ, ಚಲನಚಿತ್ರ ವಿಭಾಗ, ನಂ. 17, ಭಗವಾನ್ ಮಹಾವೀರ್ ರಸ್ತೆ, (ಇನ್‌ಫೆಂಟ್ರಿ ರಸ್ತೆ) ಬೆಂಗಳೂರು - 1 ಇವರಿಂದ ದಿನಾಂಕ ಮೇ 11, 2009 ರಿಂದ ಜೂನ್ 5, 2009 ರವರೆಗೆ ಪಡೆಯಬಹುದಾಗಿದೆ.

ಭರ್ತಿಮಾಡಿದ ಅರ್ಜಿ ನಮೂನೆಗಳನ್ನು ಇಲಾಖೆಯ ನಿರ್ದೇಶಕರ ವಿಳಾಸಕ್ಕೆ ದಿನಾಂಕ ಜೂನ್ 6,2009 ರೊಳಗಾಗಿ ತಲುಪುವಂತೆ ಕಳುಹಿಸಬೇಕು. ಅರ್ಜಿಯ ಜತೆ ಪ್ರವೇಶ ಶುಲ್ಕವಾಗಿ ರು. 5,770 ಗಳನ್ನು ನಿರ್ದೇಶಕರ ಹೆಸರಿನಲ್ಲಿ ತೆಗೆದ ಬ್ಯಾಂಕ್ ಡಿಮ್ಯಾಂಡ್ ಡ್ರಾಫ್ಟ್ ಮೂಲಕ ಸಲ್ಲಿಸಬೇಕು. ಹೆಚ್ಚಿನ ವಿವರಗಳನ್ನು ವಾರ್ತಾ ಇಲಾಖೆಯ ಚಲನಚಿತ್ರ ವಿಭಾಗದ ಉಪ ನಿರ್ದೇಶಕರ ಕಚೇರಿಯಿಂದ ಪಡೆಯಬಹುದಾಗಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಇದನ್ನೂ ಓದಿ
ಸದ್ಯಕ್ಕೆ ಬೀಸೋದೊಣ್ಣೆಯಿಂದ ಪಾರಾದ ಶ್ರುತಿ!
ಶತಕ ಬಾರಿಸಿದ ಅಂಬಾರಿ; ರು.5 ಕೋಟಿ ಲಾಭ!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada