»   » ಅರ್ಜುನ್ ಸರ್ಜಾ ಗ್ಲಾಡಿಯೇಟರ್

ಅರ್ಜುನ್ ಸರ್ಜಾ ಗ್ಲಾಡಿಯೇಟರ್

Posted By:
Subscribe to Filmibeat Kannada

ಅರ್ಜುನ್ ಸರ್ಜಾ ಕನ್ನಡದ ಚಿತ್ರಕ್ಕೆ ಮತ್ತೆ ಬಣ್ಣಹಚ್ಚುವುದು ಖಾತರಿಯಾಗಿದೆ. ಅವರು ಕಸುವುಳ್ಳ ವಸ್ತುವಿನ ಹುಡುಕಾಟದಲ್ಲಿದ್ದಾರೆ. ಸದ್ಯಕ್ಕೆ ಅವರು ನಂಬಿರುವುದು ನಿರ್ದೇಶಕ ನಾಗಾಭರಣ ಅವರನ್ನು. ನಾಗಾಭರಣ 'ಗ್ಲಾಡಿಯೇಟರ್" ಚಿತ್ರವನ್ನು ಅರ್ಧ ಡಜನ್ ಸಲ ಈಗಾಗಲೇ ನೋಡಿದ್ದು, ಅದಕ್ಕೆ ಹೋಲುವ ಕನ್ನಡದ ಜಾಯಮಾನದ ಕಥೆಯ ಹುಡುಕಾಟದಲ್ಲಿದ್ದಾರೆ.

ಯಾವುದೂ ಸಿಗದೇಹೋದರೆ ಅದನ್ನೇ ಆಧರಿಸಿ ಚಿತ್ರಕಥೆ ಮಾಡುವ ಉದ್ದೇಶ ಅವರದ್ದು. ಈ ಬಾರಿ ಚಿತ್ರಕಥೆ ಬಲವಾಗಿರಬೇಕೆಂಬುದು ಅವರ ನಿರ್ಧಾರ. ಅದಕ್ಕೇ ಇತಿಹಾಸ ತಜ್ಞರ ಜೊತೆ ಅವರು ಈಗಾಗಲೇ ಚರ್ಚೆ ನಡೆಸತೊಡಗಿದ್ದಾರೆ.

ಬುಧವಾರ (ನ.11) ನಾಗಾಭರಣ ಮನೆಯಲ್ಲಿ 'ಗ್ಲಾಡಿಯೇಟರ್" ಚಿತ್ರ ನೋಡಿದ ಅರ್ಜುನ್ ಸರ್ಜಾಗೆ ಆ ವಸ್ತು ತುಂಬಾ ಹಿಡಿಸಿದೆಯಂತೆ. ಎಲ್ಲವೂ ಅಂದುಕೊಂಡಂತೆ ಆದರೆ ಇನ್ನು ಕೆಲವೇ ತಿಂಗಳಲ್ಲಿ ಅರ್ಜುನ್ ಸರ್ಜಾ ಕನ್ನಡ ಚಿತ್ರ ನೋಡುವ ಭಾಗ್ಯ ಕನ್ನಡಿಗರದ್ದಾಗಲಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada