»   » ಪಾರ್ವತಮ್ಮ ರಾಜ್‌ಕುಮಾರ್ ಜತೆ ಸಂವಾದ

ಪಾರ್ವತಮ್ಮ ರಾಜ್‌ಕುಮಾರ್ ಜತೆ ಸಂವಾದ

Subscribe to Filmibeat Kannada

ಕರ್ನಾಟಕ ಚಲನಚಿತ್ರ ಅಕಾಡೆಮಿ ತನ್ನ ವಿನೂತನ ಕಾರ್ಯಕ್ರಮವಾದ "ಬೆಳ್ಳಿಹೆಜ್ಜೆ" ಕಾರ್ಯಕ್ರಮವನ್ನು ಹಿರಿಯ ಚಲನಚಿತ್ರ ನಿರ್ಮಾಪಕಿ ಪಾರ್ವತಮ್ಮ ರಾಜ್‌ಕುಮಾರ್ ಅವರೊಂದಿಗೆ ಸಂವಾದ ಕಾರ್ಯಕ್ರಮದ ಮೂಲಕ ನವೆಂಬರ್ 14 ರಂದು ಆರಂಭಿಸಲಿದೆ.

ಕನ್ನಡ ಚಿತ್ರರಂಗದ ದಿಗ್ಗಜರನ್ನು ವಿಶಿಷ್ಟ ಬಗೆಯಲ್ಲಿ ಪರಿಚಯಿಸುವ ಹಾಗೂ ಅವರೊಂದಿಗೆ ಸಂವಾದ ನಡೆಸುವ ಬೆಳ್ಳಿಹೆಜ್ಜೆ ಕಾರ್ಯಕ್ರಮವನ್ನು ಈ ಮಾಹೆಯಿಂದ ಪ್ರಾರಂಭಮಾಡಲಿದೆ.
ನವೆಂಬರ್ 14 ರಂದು ಸಂಜೆ 4.30 ಗಂಟೆಗೆ ಬೆಂಗಳೂರಿನ ಜೆ.ಸಿ. ರಸ್ತೆಯಲ್ಲಿರುವ ಕನ್ನಡ ಭವನದ ನಯನ ಸಭಾಂಗಣದಲ್ಲಿ 'ಬೆಳ್ಳಿಹೆಜ್ಜೆ' ಪ್ರಥಮ ಕಾರ್ಯಕ್ರಮ ನಡೆಯಲಿದ್ದು ಇದರ ಅಂಗವಾಗಿ ಛಾಯಾಚಿತ್ರ ಹಾಗೂ ಕಿರುಚಿತ್ರ ಪ್ರದರ್ಶನವನ್ನು ಏರ್ಪಡಿಸಲಾಗಿದೆ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಪ್ರಕಟಣೆ ತಿಳಿಸಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada