»   »  ಆಂಗ್ಲ ಹಾಗೂ ಹಿಂದಿ ಭಾಷೆಯಲ್ಲಿ ಕಾಫಿ ಶಾಪ್

ಆಂಗ್ಲ ಹಾಗೂ ಹಿಂದಿ ಭಾಷೆಯಲ್ಲಿ ಕಾಫಿ ಶಾಪ್

Subscribe to Filmibeat Kannada

ಬ್ಲೂ ಫಾಕ್ಸ್ ಸಿನಿಮಾ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ 'ಕಾಫಿ ಶಾಪ್' ಚಿತ್ರವನ್ನು ಆಂಗ್ಲ ಹಾಗೂ ಹಿಂದಿ ಭಾಷೆಗೆ ಡಬ್ಬಿಂಗ್ ಮಾಡುತ್ತಿರುವುದಾಗಿ ನಿರ್ಮಾಣದೊಂದಿಗೆ ನಿರ್ದೇಶನದ ಉಸ್ತುವಾರಿಯನ್ನು ಹೊತ್ತಿರುವ ಗೀತಾಕೃಷ್ಣ ತಿಳಿಸಿದ್ದಾರೆ.

ಕನ್ನಡ, ತಮಿಳು ಹಾಗೂ ತೆಲಗು ಭಾಷೆಯಲ್ಲೂ ನಿರ್ಮಾಣವಾಗುತ್ತಿರುವ 'ಕಾಫಿ ಶಾಪ್'ಚಿತ್ರದ ಚಿತ್ರೀಕರಣೇತರ ಚಟುವಟಿಕೆಗಳು ಬಿರುಸಿನಿಂದ ಸಾಗಿದೆ ಎಂದು ತಿಳಿಸಿರುವ ನಿರ್ಮಾಪಕರು ಮೇಲಿನ ಮೂರು ಭಾಷೆಗಳ ಜೊತೆಗೆ ಆಂಗ್ಲ ಹಾಗೂ ಹಿಂದಿ ಸೇರಿ ನಮ್ಮ ಚಿತ್ರ ಐದು ಭಾಷೆಗಳಲ್ಲಿ ಹೊರಹೊಮ್ಮಲಿದೆ ಎಂದಿದ್ದಾರೆ.

ನಿರ್ದೇಶಕರೇ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಸಂಗೀತ ನೀಡಿರುವ 'ಕಾಫಿ ಶಾಪ್ ಚಿತ್ರದಲ್ಲಿ ಶಶಾಂಕ್ ಹಾಗೂ ಬಿಯಾಂಕ ದೇಸಾಯಿ ನಾಯಕ,ನಾಯಕಿಯರಾಗಿ ನಟಿಸಿದ್ದಾರೆ. ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಜ್ಞಾನಪೀಠ ಪ್ರಶಸ್ತಿ ವಿಜೇತ ಗಿರೀಶ್ ಕಾರ್ನಾಡ್ ಅವರು ಮುಖ್ಯ ಪಾತ್ರ ನಿರ್ವಹಿಸುತ್ತಿದ್ದಾರೆ. ಮುರಳಿ ರಘು ಛಾಯಾಗ್ರಹಣದ ಜವಬ್ದಾರಿ ನಿರ್ವಹಿಸುತ್ತಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada