»   » ಮಚ್ಚು, ಲಾಂಗಿಗೆ ಗುಡ್ ಬೈ ಹೇಳಿದ್ದಾನೆ ಡೆಡ್ಲಿ ಸೋಮ

ಮಚ್ಚು, ಲಾಂಗಿಗೆ ಗುಡ್ ಬೈ ಹೇಳಿದ್ದಾನೆ ಡೆಡ್ಲಿ ಸೋಮ

Posted By:
Subscribe to Filmibeat Kannada

'ಡೆಡ್ಲಿ ಸೋಮ' ಚಿತ್ರದ ಕೊನೆಯ ದೃಶ್ಯದಲ್ಲಿ ನಾಯಕ ಸತ್ತು ಹೋಗುತ್ತಾನೆ. ಆದರೆ ನಾಯಕ ಸತ್ತ ನಂತರ ಕತೆ ಮುಂದುವರಿಯಲು ಸಾಧ್ಯವೆ? ಕತೆ ಎಲ್ಲಿಂದ ಆರಂಭವಾಗುತ್ತದೆ? ಹೇಗೆ ಮುಂದುವರಿಯುತ್ತದೆ? ಸತ್ತವನು ಬದುಕಿಬರಲು ಸಾಧ್ಯವೆ? ಎಂಬ ಪ್ರಶ್ನೆಗಳಿಗೆ ಈ ವಾರ ತೆರೆಕಾಣುತ್ತಿರುವ 'ಡೆಡ್ಲಿ 2' ಚಿತ್ರ ತಕ್ಕ ಉತ್ತರ ನೀಡಲಿದೆ.

ಚಿತ್ರದ ನಿರ್ದೇಶಕ ರವಿ ಶ್ರೀವತ್ಸ ಚಿತ್ರಕಥೆಗಾಗಿ ನಾಲ್ಕು ತಿಂಗಳು ಶ್ರಮಿಸಿದ್ದಾರೆ. ಅಷ್ಟೆ ಚೆನ್ನಾಗಿ ಕತೆಯನ್ನು ಹೆಣೆದು ತೆರೆಗೆ ತರುತ್ತಿದ್ದಾರೆ ಎಂಬ ವಿಶ್ವಾಸವನ್ನು 'ಡೆಡ್ಲಿ 2' ಚಿತ್ರತಂಡ ವ್ಯಕ್ತಪಡಿಸಿದೆ. ಬಿಗ್ ಸಿನಿಮಾಸ್ ಮೂಲಕ ಈ ಚಿತ್ರವನ್ನು ತೆರೆಗೆ ತರಲಾಗುತ್ತಿದೆ.

ಯಾವುದೇ ಚಿತ್ರದ ಭಾಗ 2 ಎಂದರೆ ಪ್ರೇಕ್ಷಕರು ಇಷ್ಟಪಡುತ್ತಾರಾ? ಎಂಬ ಪ್ರಶ್ನೆಗೆ ಉತ್ತರ ಹುಡುಕುವುದು ಕಷ್ಟ. ಚಿತ್ರದ ನಾಯಕ ನಟ ಆದಿತ್ಯ ಈ ಚಿತ್ರಕ್ಕಾಗಿ ಬಹಳಷ್ಟು ಶ್ರಮಪಟ್ಟು ಅಭಿನಯಿಸಿದ್ದಾರೆ. ಚಿತ್ರದ ದೃಶ್ಯವೊಂದರಲ್ಲಿ ಸ್ವತಃ ಆದಿತ್ಯ ಎಪ್ಪತ್ತು ಅಡಿ ಎತ್ತರದಿಂದ ಜಿಗಿದು ಸೊಂಟಕ್ಕೆ ಪೆಟ್ಟು ಮಾಡಿಕೊಂಡಿದ್ದರು.

ಸಾಹಸ, ಸೆಂಟಿಮೆಂಟ್ ಪ್ರಧಾನವಾದ ಈ ಚಿತ್ರದಲ್ಲಿ ಸಮಾಜಕ್ಕೆ ಸಂದೇಶವೂ ಇದೆಯಂತೆ. ಚಿತ್ರದಲ್ಲಿ ಮಚ್ಚು, ಲಾಂಗ್ ಗಳಿಗೆ ಗುಡ್ ಬೈ ಹೇಳಲಾಗಿದೆ. ನೈಜತೆಗೆ ಹೆಚ್ಚು ಒತ್ತು ಕೊಟ್ಟು ಚಿತ್ರವನ್ನು ರೂಪಿಸಲಾಗಿದೆ. ಒಟ್ಟಿನಲ್ಲಿ ಈ ಚಿತ್ರ ಹೇಗೆ ಪ್ರೇಕ್ಷಕರ ಹೃದಯ ತಟ್ಟುತ್ತದೆ ಎಂಬುದನ್ನು ಕಾದುನೋಡಬೇಕು.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada