»   » ಧ್ರುವತಾರೆ ಡಾ.ರಾಜ್ ಕುಮಾರ್ ಪುಣ್ಯಸ್ಮರಣೆ

ಧ್ರುವತಾರೆ ಡಾ.ರಾಜ್ ಕುಮಾರ್ ಪುಣ್ಯಸ್ಮರಣೆ

Posted By:
Subscribe to Filmibeat Kannada
ಸೋಮವಾರ ಏ.12ಕ್ಕೆ ವರನಟ ಡಾ. ರಾಜಕುಮಾರ್ ಅವರ 4ನೇಪುಣ್ಯತಿಥಿ. ಈ ಹಿನ್ನೆಲೆಯಲ್ಲಿ ನಗರದ ಕಂಠೀರವ ಸ್ಟುಡಿಯೋದಲ್ಲಿರುವ ಅವರ ಸಮಾಧಿಗೆ ಸಕಲ ರೀತಿಯ ಅಲಂಕಾರ ಮಾಡಲಾಗುತ್ತಿದ್ದು, ಕುಟುಂಬದ ಸದಸ್ಯರು ಬೆಳಗ್ಗೆ ಪೂಜೆ ಸಲ್ಲಿಸಲಿದ್ದಾರೆ.

ನಾಡಿನ ಪ್ರಮುಖ ಗಣ್ಯರು ಹಾಗೂ ಅಭಿಮಾನಿಗಳ ಮಹಾಪೂರವೇ ಹರಿದುಬರುವ ನಿರೀಕ್ಷೆಯಿದ್ದು, ರಾಜ್ ಸಮಾಧಿ ಬಳಿ ಸಕಲ ಬಂದೋಬಸ್ತ್ ಮಾಡಲಾಗಿದೆ. ಭದ್ರತಾ ವ್ಯವಸ್ಥೆಯನ್ನೂ ಬಿಗಿಗೊಳಿಸಲಾಗಿದೆ ಎಂದು ಸಮಾಧಿಯ ರಕ್ಷಣೆ ಹೊಣೆ ಹೊತ್ತಿರುವ ಲಕ್ಷ್ಮೀಪತಿ ತಿಳಿಸಿದರು.

ರಾಜಕುಮಾರ್ ಪುಣ್ಯತಿಥಿ ಹಿನ್ನೆಲೆಯಲ್ಲಿ ಅವರ ಸಮಾಧಿ ಇರುವ ಸ್ಥಳದಲ್ಲಿ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿದೆ. ಇದಕ್ಕಾಗಿ ಭರದ ಸಿದ್ಧತೆ ನಡೆಯುತ್ತಿದೆ. 'ನೇತ್ರದಾನ ಮಹಾದಾನ' ಎಂದು ಕರೆಕೊಟ್ಟಿದ್ದ ಡಾ.ರಾಜ್ ಅವರ ಆದರ್ಶ ಇಂದು ಹೆಚ್ಚು ಸಾಕಾರಗೊಳ್ಳಲಿದೆ.

ಇಷ್ಟು ವರ್ಷ ಡಾ.ರಾಜ್ ಅವರ ಪುಣ್ಯತಿಥಿ ಅವರ ಸದಾಶಿವನಗರ ಮನೆಯಲ್ಲಿ ನಡೆಯುತ್ತಿತ್ತು. ಇದೀಗ ಆ ಮನೆ ನವೀಕರಣಗೊಳ್ಳುತ್ತಿರುವ ಕಾರಣ ಈ ಬಾರಿ ಹೆಬ್ಬಾಳದಲ್ಲಿರುವ ಶಿವರಾಜ್ ಕುಮಾರ್ ಅವರ ಮನೆಯಲ್ಲಿ ನಡೆಯಲಿದೆ ಎಂದು ಡಾ.ರಾಜ್ ಕುಟುಂಬ ಮೂಲಗಳು ತಿಳಿಸಿವೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada