»   »  ವಿಭಿನ್ನ ಪ್ರೇಮಕಥಾನಕ ಹೃದಯದಲಿ ಇದೇನಿದು

ವಿಭಿನ್ನ ಪ್ರೇಮಕಥಾನಕ ಹೃದಯದಲಿ ಇದೇನಿದು

Posted By:
Subscribe to Filmibeat Kannada

ಕನ್ನಡದಲ್ಲಿ ಮತ್ತೊಂದು ಪ್ರೇಮಕಥಾ ಚಿತ್ರವೊಂದು ನವೆಂಬರ್ ನಲ್ಲಿ ತೆರೆಗೆ ಅಪ್ಪಳಿಸಲು ಸಿದ್ಧವಾಗಿದೆ. 'ಹೃದಯದಲಿ ಇದೇನಿದು' ಚಿತ್ರದಲ್ಲಿ ಪ್ರೇಮದ ವಿಭಿನ್ನ ಆಯಾಮಗಳನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ. ರಾಹುಲ್ ಚಿತ್ರದ ನಾಯಕ ನಟ. ಈ ಹಿಂದೆ ರಾಹುಲ್ 'ಚಂಕಾಯ್ಸಿ ಚಿಂದಿ ಉಡಾಯ್ಸಿ' ಚಿತ್ರದಲ್ಲಿ ನಟಿಸಿದ್ದರು.

ಚಿತ್ರದ ನಿರ್ದೇಶಕ ಸೇವನ್ ಅವರು ಚಿತ್ರಕತೆ ಹೇಳಿದಾಗ ಕುತೂಹಲಕಾರಿಯಾಗಿತ್ತು. ಅದರಲ್ಲೂ ಚಿತ್ರದ ನಾಯಕನ ಮೊದಲ ಪ್ರೇಮದ ಸನ್ನಿವೇಶಗಳಂತೂ ರೋಮಾಂಚಕವಾಗಿದ್ದವು ಎನ್ನುತ್ತಾರೆ ಚಿತ್ರದ ನಿರ್ಮಾಪಕರಾದ ದರ್ಶನ್ ಪ್ರಿಯಾ. ಒಳಾಂಗಣ ವಿನ್ಯಾಸಕಾರರಾದ ಅವರು ಇದೇ ಮೊದಲ ಬಾರಿಗೆ ಚಿತ್ರ ನಿರ್ಮಾಣಕ್ಕೆ ಕೈಹಾಕಿದ್ದಾರೆ. ಚಿತ್ರಕತೆ ಕೇಳಿದಾಗ ಇದರಲ್ಲಿ ಏನೋ ವಿಶೇಷತೆ ಇದೆ ಎನ್ನಿಸಿತು ಎನ್ನುತ್ತ್ತಾರೆ ಪ್ರಿಯಾ.

ರಾಹುಲ್ ನಟನೆಯ ಚಿತ್ರಗಳ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದ ಸುದ್ದಿಯನ್ನು ನೋಡಿ ತಮ್ಮ ಚಿತ್ರಕ್ಕೆ ಅವರೇ ನಾಯಕ ಎಂದು ಆಯ್ಕೆ ಮಾಡಿದೆ. ಹದಿಹರೆಯದ ಪ್ರೇಮಕತೆಯುಳ್ಳ ಚಿತ್ರವಾದ ಕಾರಣ ಅವರು ಮುಖ ಸಹ ಹೊಂದಾಣಿಕೆಯಾಗುತ್ತದೆ. ಹಾಗಾಗಿ ಅವರನ್ನು ಕೂಡಲೆ ತಮ್ಮ ಚಿತ್ರಕ್ಕೆ ಆಯ್ಕೆ ಮಾಡಿದೆವು ಎಂದು ದರ್ಶನ್ ಪ್ರಿಯಾ ತಿಳಿಸಿದರು.

ಚಿತ್ರದಲ್ಲಿ ಮೂವರು ನಾಯಕಿಯರು, ತೆಲುಗಿನ ಮೋನಿಕಾ, ಅರ್ಚನಾ ಗುಪ್ತ ಅವರ ಸಹೋದರಿ ವಂದನಾ ಗುಪ್ತ ಮತ್ತು ರೂಪಾಲಿ ಸೂದ್. ತಮ್ಮ ಚಿತ್ರದ ವಿಶಿಷ್ಟತೆ ಏನು ಎಂದರೆ, ಚಿತ್ರಕತೆ ವಿಭಿನ್ನವಾಗಿದೆ. ಇದಕ್ಕಿಂತಲೂ ಹೆಚ್ಚಾಗಿ ನಾನೇನು ಹೇಳುವುದಿಲ್ಲ ಎಂದರು ದರ್ಶನ್ ಪ್ರಿಯಾ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada