»   » ಮಮ್ಮುಟ್ಟಿ ಜೊತೆ ಅಭಯಸಿಂಹ 'ಶಿಕಾರಿ'

ಮಮ್ಮುಟ್ಟಿ ಜೊತೆ ಅಭಯಸಿಂಹ 'ಶಿಕಾರಿ'

Posted By:
Subscribe to Filmibeat Kannada

ಕಡೆಗೂ ಮಮ್ಮುಟ್ಟಿ ಅಭಿನಯಿಸಲಿರುವ ಕನ್ನಡಚಿತಕ್ಕೆ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಅಭಯಸಿಂಹ ಆಕ್ಷನ್, ಕಟ್ ಹೇಳುವ ಶುಭ ಸಂದರ್ಭ ಒದಗಿಬಂದಿದೆ. 'ಗುಬ್ಬಚ್ಚಿಗಳು' ಮಕ್ಕಳ ಚಿತ್ರಕ್ಕಾಗಿ ಅಭಯಸಿಂಹ ಅವರಿಗೆ 2008ನೇ ಸಾಲಿನ ರಾಷ್ಟ್ರ ಪ್ರಶಸ್ತಿ ಒಲಿದಿತ್ತು. ಈಗ ಇವರು ಕೈಗೆತ್ತಿಕೊಂಡಿರುವ ಚಿತ್ರಕ್ಕೆ 'ಶಿಕಾರಿ' ಎಂದು ಹೆಸರಿಡಲಾಗಿದೆ.

ಚಿತ್ರರಂಗದ ಮೂಲಗಳ ಪ್ರಕಾರ 'ಶಿಕಾರಿ'ಯಲ್ಲಿ ಮಮ್ಮುಟ್ಟಿ ದ್ವಿಪಾತ್ರಾಭಿನಯ ಮಾಡಲಿದ್ದಾರೆ. ಒಂದು ಸಾಫ್ಟ್ ವೇರ್ ತಂತ್ರಜ್ಞನ ಪಾತ್ರವಾದರೆ ಮತ್ತೊಂದು ಸ್ವಾತಂತ್ರ್ಯ ಹೋರಾಟಗಾರನ ಪಾತ್ರವಂತೆ. ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯೋತ್ತರ ಭಾರತದ ಕಥಾ ಹಂದರ 'ಶಿಕಾರಿ' ಚಿತ್ರಕ್ಕಿದೆ.

ನಿರ್ದೇಶನದ ಜೊತೆಗೆ ಕತೆ, ಚಿತ್ರಕತೆಯ ಜವಾಬ್ದಾರಿಯನ್ನು ಅಭಯಸಿಂಹ ಅವರೆ ಹೊತ್ತಿದ್ದಾರೆ. ಬಾಲಿವುಡ್ ನಟಿ ಕೊಂಕಣಸೇನ್ ಶರ್ಮಾ ಅವರನ್ನು ಕನ್ನಡಕ್ಕೆ ಕರೆತರುವ ಪ್ರಯತ್ನವನ್ನು ಅಭಯಸಿಂಹ ಮಾಡುತ್ತಿದ್ದಾರೆ. ಚಿತ್ರೀಕರಣ ಮೇ ತಿಂಗಳ ಮೊದಲ ವಾರದಲ್ಲಿ ಆರಂಭವಾಗಲಿದೆ.

ಕೆ ಮಂಜು ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಅನ್ ಮೋಲ್ ಭಾವೆ ಸಂಗೀತ, ವಿಕ್ರಂ ಶ್ರೀವತ್ಸ ಛಾಯಾಗ್ರಹಣವಿದೆ. ಒಟ್ಟಿನಲ್ಲಿ ಪ್ರತಿಭಾನಿತ್ವ ನಟ, ನಿರ್ದೇಶಕರು ಕೂಡಿ ಮಾಡುತ್ತಿರುವ ಚಿತ್ರ ಶಿಕಾರಿ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X