For Quick Alerts
  ALLOW NOTIFICATIONS  
  For Daily Alerts

  ಗೊಂದಲದ ಗೂಡಾದ ಚಂದ್ರಮುಖಿ ನಯನತಾರಾ

  By Rajendra
  |

  ನಟಿ ನಯನತಾರಾ ಚಿತ್ರರಂಗಕ್ಕೆ ವಿದಾಯ ಹೇಳಿದ್ದು ಗೊತ್ತೆ ಇದೆ. ತೆಲುಗಿನ 'ಶ್ರೀರಾಮರಾಜ್ಯಂ' ಚಿತ್ರವೇ ತಮ್ಮ ಅಭಿನಯದ ಕೊನೆಯ ಚಿತ್ರ ಎಂದು ಸ್ವತಃ ನಯನಿ ಘೋಷಿಸಿದ್ದರು. ಡ್ಯಾನ್ಸ್ ರಾಜ ಪ್ರಭುದೇವ ಅವರನ್ನು ಮದುವೆಯಾಗುತ್ತಿರುವ ಉದ್ದೇಶದಿಂದ ನಯನತಾರಾ ಈ ನಿರ್ಧಾರಕ್ಕೆ ಬಂದಿದ್ದರು.

  'ಶ್ರೀರಾಮರಾಜ್ಯಂ' ಚಿತ್ರದ ಬಳಿಕ ಆಕೆಗೆ ತೆಲುಗು, ತಮಿಳಿನಿಂದ ಸಾಲು ಸಾಲು ಆಫರ್‌ಗಳು ಬರುತ್ತಿವೆ. ಇತ್ತೀಚೆಗೆ 'ಶ್ರೀರಾಮರಾಜ್ಯಂ' ಚಿತ್ರದ 50 ಡೇಸ್ ಕಾರ್ಯಕ್ರಮ ನಡೆಯಿತು. ನಯನತಾರಾ ಕೂಡ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ನಯನತಾರಾಗೆ ತೆಲುಗು ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಹಾಗೂ ನಿರ್ಮಾಪಕ ದಾಸರಿ ನಾರಾಯಣ ರಾವ್ ಕಿವಿಮಾತು ಹೇಳಿದರು.

  "ಇದೇ ಕೊನೆಯ ಚಿತ್ರ ಎಂದು ಕೊಳ್ಳಬೇಡ. ಮದುವೆಯಾದ ಬಳಿಕವೂ ಅಭಿನಯಿಸಬಹುದು" ಎಂದಿದ್ದಾರೆ ದಾಸರಿ. ಅವರು ಹಾಗೆ ಹೇಳಿದ್ದೇ ತಡ ತಮಿಳಿನ ವಿಜಯ್, ವೆಂಕಟ್ ಹಾಗೂ ಲಿಂಗುಸ್ವಾಮಿ ಎಂಬ ನಿರ್ಮಾಪಕರು ನಯನತಾರಾ ಮುಂದೆ ಕಾಲ್‌ಶೀಟ್ ಹಿಡಿದಿದ್ದಾರೆ. ಆದರೆ ನಯನತಾರಾ ಮಾತ್ರ ಮೌನಕ್ಕೆ ಶರಣಾಗಿದ್ದಾರೆ. ಮತ್ತೆ ಬಣ್ಣ ಹಚ್ಚು ಬೇಕೆ ಬೇಡವೆ ಎಂಬ ಗೊಂದಲದಲ್ಲಿ ನಯನತಾರಾ ಇದ್ದಾರೆ. (ಏಜೆನ್ಸೀಸ್)

  English summary
  Nayantara was cynosure of all eyes during the 50-day success celebration of Sri Rama Rajyam. The gorgeous girl was seen in public after quite a long time and questions on her future plans obviously were thrown at her

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X