»   » ‘ಪ್ರೀತಿಯ ಹಂಗಾಮ’ ಚಿತ್ರಕ್ಕೆ ಡಬ್ಬಿಂಗ್ ಪೂರ್ಣ

‘ಪ್ರೀತಿಯ ಹಂಗಾಮ’ ಚಿತ್ರಕ್ಕೆ ಡಬ್ಬಿಂಗ್ ಪೂರ್ಣ

Posted By:
Subscribe to Filmibeat Kannada

ಪುಷ್ಪಾ ಹಾಗೂ ರಶ್ಮಿಏಕನಾಥ್ ಅವರು ನಿರ್ಮಿಸುತ್ತಿರುವ 'ಪ್ರೀತಿಯ ಹಂಗಾಮ" ಚಿತ್ರಕ್ಕೆ ಬಾಲಾಜಿ ಡಿಜಿಟಲ್ ಸ್ಟುಡಿಯೋದಲ್ಲಿ ಡಬ್ಬಿಂಗ್ ಮುಕ್ತಾಯವಾಗಿದೆ. ನಾಯಕ ವಿವೇಕ್ ಬಹುಮುಖ ಪ್ರತಿಭೆ. ತಮ್ಮ ಪ್ರತಿಭೆಯನ್ನು ನಟನೆಗೆ ಮೀಸಲಿಡದ ಅವರು ನಿರ್ದೇಶನದ ನಿರ್ವಹಣೆಯನ್ನು ಮಾಡಿದ್ದಾರೆ.

ಮುಂದಿನವಾರ ಚಿತ್ರಕ್ಕೆ ಹಿನ್ನಲೆ ಸಂಗೀತ ಅಳವಡಿಸಲಾಗುವುದೆಂದು ತಿಳಿಸಿದ ನಿರ್ದೇಶಕರು 'ಇದೊಂದು ಪರಿಶುದ್ಧ ಪ್ರೇಮ ಕಥಾನಕ" ಎನ್ನುತ್ತಾರೆ. ನಿವಾಸಿನಿ ಆರ್ಟ್ಸ್ ಲಾಂಛನದಲ್ಲಿ ಈ ಚಿತ್ರವನ್ನು ನಿರ್ಮಿಸಲಾಗಿದೆ.

ಕಿರಣ್ ಸಂಗೀತವಿರುವ ಈ ಚಿತ್ರಕ್ಕೆ ಚಂದ್ರಶೇಖರ್ ಛಾಯಾಗ್ರಹಣವಿದೆ. ಮದನ್-ಹರಿಣಿ ನೃತ್ಯ, ಎಂ.ಎಸ್.ರಮೇಶ್ ಸಂಭಾಷಣೆಯಿರುವ ಚಿತ್ರದ ತಾರಾಬಳಗದಲ್ಲಿ ವಿವೇಕ್‌ರಾಜ್, ಶುಭಾಪುಂಜಾ, ಅವಿನಾಶ್, ಊರ್ವಶಿ, ನಂದ, ಪ್ರಕಾಶ್ ಮುಂತಾದವರಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada