»   »  ಶಿಶಿರಕ್ಕೆ ತೆಲುಗಿನ ಅರುಂಧತಿ ತಾಂತ್ರಿಕ ವರ್ಗ

ಶಿಶಿರಕ್ಕೆ ತೆಲುಗಿನ ಅರುಂಧತಿ ತಾಂತ್ರಿಕ ವರ್ಗ

Posted By:
Subscribe to Filmibeat Kannada
Actress Prema
ತನ್ನ ತಾಂತ್ರಿಕತೆಯಿಂದಲೇ ದೇಶದಾದ್ಯಂತ ಹೆಸರಾಗಿರುವ ಚಿತ್ರ ತೆಲುಗಿನ 'ಅರುಂಧತಿ'. ಅದ್ಭುತವಾದ ಗ್ರಾಫಿಕ್ಸ್ ಜೊತೆಗೆ ಸೌಂಡ್ ಎಫೆಕ್ಟ್‌ನಿಂದ ಈ ಚಿತ್ರ ಅಪಾರ ಜನಮನ್ನಣೆ ಗಳಿಸಿದೆ. ಮಂಜು ಸ್ವರಾಜ್ ನಿರ್ದೇಶನದ 'ಶಿಶಿರ' ಚಿತ್ರದಲ್ಲಿ ಹೆಜ್ಜೆಹೆಜ್ಜೆಗೂ ಕುತೂಹಲ ಕೆರಳಿಸುವ ದೃಶ್ಯಗಳು ಹೆಚ್ಚಾಗಿದ್ದು, ಚಿತ್ರದಲ್ಲಿ ವಿಶೇಷ ಶಬ್ದ ಜೋಡಣೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ.

'ಅರುಂಧತಿ'ಗೆ ಸ್ಪೆಷಲ್ ಎಫೆಕ್ಟ್ಸ್ ಮಾಡಿದ್ದ ರಾಜಶೇಖರ ರಾವ್ ಮತ್ತು ರಘು ಈಗ ಶಿಶಿರ ಚಿತ್ರಕ್ಕೂ ವಿಶೇಷ ಶಬ್ದ ಜೋಡಿಸುವ ಕೆಲಸ ನಿರ್ವಹಿಸಲಿದ್ದಾರೆ. ತೆಲುಗಿನಲ್ಲಿ 25ಕ್ಕೂ ಹೆಚ್ಚು ಚಿತ್ರಗಳಿಗೆ ಕೆಲಸ ಮಾಡಿರುವ ಇವರು ಹೈದರಾಬಾದ್‌ನಲ್ಲಿ ಶಿಶಿರ ಚಿತ್ರದ ಡಿ.ಐ. ಕಾರ್ಯ ನಡೆಯುತ್ತಿದ್ದಾಗ ಚಿತ್ರದ ತುಣುಕುಗಳನ್ನು ನೋಡಿ ಪ್ರಭಾವಿತರಾಗಿ ಈ ಚಿತ್ರಕ್ಕೆ ಕೆಲಸ ಮಾಡುವ ಆಸಕ್ತಿ ತೋರಿಸಿದ್ದಾರೆ.

ಈಗಾಗಲೇ ಪ್ರಸಾದ್ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಚಿತ್ರದ ರೀ-ರೆಕಾರ್ಡಿಂಗ್ ಕಾರ್ಯ ನಡೆಯುತ್ತಿದೆ. ನಟಿ ಪ್ರೇಮ ವಿಶೇಷ ಪಾತ್ರದಲ್ಲಿ ನಟಿಸಿರುವ ಈ ಚಿತ್ರದ 5 ಹಾಡುಗಳಿಗೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಸುರೇಶ್ ಬಾಬುರವರ ಛಾಯಾಗ್ರಹಣ, ಕೆ.ಎಂ. ಪ್ರಕಾಶ್‌ರ ಸಂಕಲನ ಇದೆ. ಬಿ.ಮಹದೇವ್ ಹಾಗೂ ಬಿ.ಟಿ. ಮಂಜು ನಿರ್ಮಾಣದ ಈ ಚಿತ್ರದಲ್ಲಿ ಯಶಸ್-ಮೇಘನಾ, ಯುವ ಜೋಡಿಯಾಗಿ ಅಭಿನಯಿಸಿದ್ದು, ಜೊತೆಗೆ 2 ಪುಟಾಣಿಗಳು ಹಾಗೂ 7.5 ಅಡಿ ಎತ್ತರದ ಸಂತೋಷ್ ಎಂಬ ಯುವಕ ವಿಶೇಷವಾಗಿ ಅಭಿನಯಿಸಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಒಂಬತ್ತು ಪಾತ್ರಗಳ ಕಥಾ ಹಂದರವೇ ಶಿಶಿರ
ಶಿಶಿರದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಪ್ರೇಮಾ
ಬೆಂಗಳೂರಿನಲ್ಲಿ ಅರ್ಧ ಶತಕ ಬಾರಿಸಿದ ಅರುಂಧತಿ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada