For Quick Alerts
  ALLOW NOTIFICATIONS  
  For Daily Alerts

  ಗರ್ಭಿಣಿಯಾಗಿ ಪ್ರಚಾರಕ್ಕೆ ಬಂದ ವಿದ್ಯಾ ಬಾಲನ್

  |

  ನಟಿ ವಿದ್ಯಾ ಬಾಲನ್ ಈಗ ಆಕಾಶದಲ್ಲಿ ಹಾರಾಡುತ್ತಿದ್ದಾರೆ. ಕಾರಣ ಕಳೆದ ವರ್ಷ ಬಿಡುಗಡೆಯಾದ ಚಿತ್ರಗಳಿಂದ ಅವರು ಸಂಪಾದಿಸಿದ ತಾರಾಮೌಲ್ಯ. ವಿದ್ಯಾ ಬಾಲನ್ ನಟನೆಯ 'ನೋ ಒನ್ ಕಿಲ್ಡ್ ಜೆಸ್ಸಿಕಾ' ಮತ್ತು 'ದಿ ಡರ್ಟಿ ಪಿಕ್ಚರ್' ಎರಡೂ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿವೆ.

  ಇದೀಗ ವಿದ್ಯಾ ಬಾಲನ್ ಯಾವುದೇ ಪಾತ್ರವನ್ನು ಅಳೆದು, ತೂಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಬರಲಿರುವ 'ಕಹಾನಿ' ಚಿತ್ರದಲ್ಲಿ ವಿದ್ಯಾ ಬಾಲನ್ 'ಗರ್ಭಿಣಿ' ಹೆಂಗಸಿನ ಪಾತ್ರವನ್ನು ಮಾಡಿ ಗಮನಸೆಳೆಯಲಿದ್ದಾರೆ. ಸಾಮಾನ್ಯ ಪಾತ್ರ ಮಾಡಿ ಸಾಮಾನ್ಯ ಎನಿಸಿಕೊಳ್ಳಲು ಒಪ್ಪದ ವಿದ್ಯಾ ಅಸಾಮಾನ್ಯ ಪಾತ್ರಗಳನ್ನು ಮಾಡಿ 'ಅಸಾಮಾನ್ಯಳು' ಎನಿಸಿಕೊಳ್ಳುವತ್ತ ಹೆಜ್ಜೆ ಇಡುತ್ತಿದ್ದಾರೆ.

  ಕಹಾನಿ ಚಿತ್ರದ ಪ್ರಚಾರಕ್ಕೆ ವಿದ್ಯಾ ಹೊಟ್ಟೆ ಹೊತ್ತುಕೊಂಡೇ ಬಂದಿದ್ದರು. ಈ ಚಿತ್ರವನ್ನು ಮಾರ್ಚ್ 9ರಂದು ಬಿಡುಗಡೆ ಮಾಡಲು ನಿರ್ಧರಿಸಿದ್ದು, ಚಿತ್ರ ಯಶಸ್ವಿಯಾಗಲಿದೆಯೆಂಬ ವಿಶ್ವಾಸ ಚಿತ್ರತಂಡಕ್ಕಿದೆ. ವಿದ್ಯಾ ಇದೇ ರೀತಿಯ ಪಾತ್ರವನ್ನು ಈ ಮೊದಲು 'ಪಾ' ಮತ್ತು 'ಹೆವ್ವಿ ಬೇಬಿ' ಚಿತ್ರದಲ್ಲಿ ನಿರ್ವಹಿಸಿದ್ದರು. (ಏಜೆನ್ಸೀಸ್)

  English summary
  Vidya Balan said that her pregnancy act in the movie Kahaani is a cakewalk and an easy job for her. She plays a pregnant woman who search for her missing husband in Kolkata. Vidya has appeared with a baby bump at the Kahaani promotional event.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X