»   »  ಭಯ ಡಾಟ್ ಕಾಂಗೆ ಸೆನ್ಸಾರ್ ಆಯ್ತು

ಭಯ ಡಾಟ್ ಕಾಂಗೆ ಸೆನ್ಸಾರ್ ಆಯ್ತು

Subscribe to Filmibeat Kannada

ಎಸ್ ವಿ ಎಸ್ ಮೂವೀಸ್ ಲಾಂಛನದಲ್ಲಿ ನಿರ್ಮಾಣವಾಗಿರುವ 'ಭಯ ಡಾಟ್ ಕಾಂ' ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು\ಎ ಅರ್ಹತಾಪತ್ರವನ್ನು ನೀಡಿದೆ. ಕುತೂಹಲಕಾರಿ ಚಿತ್ರವಾಗಿರುವುದ್ದರಿಂದ ಸೌಂಡ್ ಎಫೆಕ್ಟ್ ಕಡೆ ಹೆಚ್ಚು ಮಹತ್ವ ಕೊಟ್ಟಿದೆ. ಹಾಗಾಗಿ ನಮ್ಮ ಚಿತ್ರಕ್ಕೆ ಮೇಲಿನ ಅರ್ಹತಾಪತ್ರ ದೊರೆಕಿದ್ದು ಉಳಿದಂತೆ ಚಿತ್ರದ ಉತ್ತಮ ಅಂಶಗಳನ್ನು ಮಂಡಳಿ ಶ್ಲಾಘಿಸಿದೆ ಎಂದು ನಿರ್ದೇಶಕ ವೇಮಗಲ್ ಜಗನ್ನಾಥರಾವ್ ತಿಳಿಸಿದ್ದಾರೆ.

ಮೇ ತಿಂಗಳಲ್ಲಿ ಈ ಚಿತ್ರ ನೋಡುಗರನ್ನು ರಂಜಿಸಲಿದೆ ಎಂದಿದ್ದಾರೆ ನಿರ್ಮಾಪಕಿ ಅನು ನಾರಾಯಣ್. ಈ ಚಿತ್ರ ಮೂವರು ನಾಯಕ,ನಾಯಕಿಯರ ಸುತ್ತ ಹೆಣೆದಿರುವ ವಿಶಿಷ್ಟ ಕಥಾನಕ. ಸಂತೋಷ, ಮಧು ಸಾಗರ್, ವಿಕ್ರಂ ಸೂರಿ, ಮೇಘನ, ರೋಷಿನಿ, ಜಿ.ಕೆ.ಗೋವಿಂದರಾವ್, ಸುಂದರರಾಜ್, ಶಂಕರ್ ಅಶ್ವತ್, ಸಿದ್ದರಾಜು, ಕಲ್ಯಾಣ್‌ಕರ್, ದಿ:ಭರತ್ ಭಾಗವತರ್ ಮುಂತಾದವರು ಅಭಿನಯವಿದೆ.

ಈ ಚಿತ್ರಕ್ಕೆ ನಿರ್ದೇಶಕರೇ ಕತೆ, ಚಿತ್ರಕತೆ, ಸಂಭಾಷಣೆ ಬರೆದಿದ್ದಾರೆ. ಉದಯಹೆಗ್ಡೆ ಸಂಕಲನ, ಸುರೇಶ್, ಚಂದ್ರಕುಮಾರ್ ನೃತ್ಯ, ರಾಜೇಶ್ ರಾಮನಾಥ್ ಸಂಗೀತ ಹಾಗೂ ರಾಜಶೇಖರ್ ಛಾಯಾಗ್ರಹಣ 'ಭಯ ಡಾಟ್ ಕಾಂ'ಗಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಇದನ್ನೂ ಓದಿ
ಗಿರೀಶ್ ಕಾಸರವಳ್ಳಿ ಪುಟಾಣಿ ಸಂದರ್ಶನ
ಅದಿತಿ ಗೋವಿತ್ರಿಕರ್ ಗೆ ಕನ್ನಡದಲ್ಲಿ ನಟಿಸುವಾಸೆ
ಅಭಿಮಾನಿ ದೇವರುಗಳ ಭಕ್ತ ಮರೆಯಾಗಿ 3ವರ್ಷ
ಬಿಸಿಲ ಹೊತ್ತು ಪಾರ್ವತಮ್ಮ ರಾಂಗಾದರು!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada