»   »  ನೆನಪಿರಲಿ ಪ್ರೇಮ್ ಜತೆ ಅಮೂಲ್ಯ 'ಪ್ರೇಮಿಸಮ್'

ನೆನಪಿರಲಿ ಪ್ರೇಮ್ ಜತೆ ಅಮೂಲ್ಯ 'ಪ್ರೇಮಿಸಮ್'

Posted By:
Subscribe to Filmibeat Kannada
Amulya in Premism
ಈ ಬೇಸಿಗೆ ರಜೆಗಳಲ್ಲಿ ಅಮೂಲ್ಯ ಅವರನ್ನು ಮತ್ತೊಂದು ಚಿತ್ರ ಹುಡುಕಿಕೊಂಡು ಬಂದಿದೆ. ಅಮೂಲ್ಯ ನಟಿಸುತ್ತಿರುವ ಹೊಸ ಚಿತ್ರಕ್ಕೆ 'ಪ್ರೇಮಿಸಮ್' ಎಂದು ಹೆಸರಿಡಲಾಗಿದೆ. ಎಸ್ .ನಾರಾಯಣ್ ಮಗ ಪಂಕಜ್ ಈ ಚಿತ್ರದ ನಾಯಕ ಅಂದುಕೊಂಡರೆ ತಪ್ಪಾಗುತ್ತದೆ! ಅಮೂಲ್ಯ ಅವರಿಗೆ ಈ ಬಾರಿ ನೆನಪಿರಲಿ ಪ್ರೇಮ್ ಜತೆಯಾಗಿದ್ದಾರೆ.

'ನೆನಪಿರಲಿ' ಹಾಗೂ 'ಹೊಂಗನಸು' ಚಿತ್ರಗಳ ಖ್ಯಾತಿಯ ರತ್ನಜ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.ಚೆಲುವಿನ ಚಿತ್ತಾರದ ಮೂಲಕ ಬೆಳಕಿಗೆ ಬಂದ ಅಮೂಲ್ಯ ತನ್ನ ನಟನೆಯ ಮೂಲಕ ಗಮನ ಸೆಳೆದಿದ್ದರು. ಆದರೆ ಆಕೆ ನಟಿಸಿದ ಮತ್ತೊಂದು ಚಿತ್ರ 'ಚೈತ್ರದ ಚಂದ್ರಮ' ಇನ್ನಿಲ್ಲದಂತೆ ನೆಲಕಚ್ಚಿತ್ತು. ರತ್ನಜ, ಪ್ರೇಮ್ ಮತ್ತು ಅಮೂಲ್ಯ ಕಾಂಬಿನೇಷ ನ್ ಆಗಿರುವ ಕಾರಣ 'ಪ್ರೇಮಿಸಮ್' ಚಿತ್ರೋದ್ಯಮದಲ್ಲಿ ಕುತೂಹ ಮೂಡಿಸಿದೆ.

ಈಗಷ್ಟೇ ಪಿಯುಸಿ ಮುಗಿಸಿರುಕೊಂಡಿರುವ ನೀರನ್ ಮತ್ತು ಚೇತನ್ ಸಹ ಚಿತ್ರದಲ್ಲಿದ್ದಾರೆ. ಸದ್ಯ ಮೈಸೂರಿನಲ್ಲಿ ಚಿತ್ರೀಕರಣ ಭರದಿಂದ ಸಾಗುತ್ತಿದೆ. ನೆನಪಿರಲಿ ಚಿತ್ರ ನಿರ್ಮಿಸಿದ್ದ ಅಜಯ್ ಗೌಡ ಈ ಚಿತ್ರದ ನಿರ್ಮಾಪಕರು. ಈಗಾಗಲೇ ಎಸ್ಸೆಸ್ಸೆಲ್ಸಿ ಫಸ್ಟ್ ಕ್ಲಾಸ್ ನಲ್ಲಿ ಪಾಸಾದ ಖುಷಿಯಲ್ಲಿ ಅಮೂಲ್ಯ ಮುಳುಗಿದ್ದಾರೆ. ಇದೇ ಸಂದರ್ಭದಲ್ಲಿ ರತ್ನಜ ಚಿತ್ರದಲ್ಲಿ ಚಾನ್ಸ್ ಸಿಕ್ಕಿರುವುದು ಅವರ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಎಸ್ಸೆಸ್ಸೆಲ್ಸಿ ಫಸ್ಟ್ ಕ್ಲಾಸ್ ನಲ್ಲಿ ಅಮೂಲ್ಯ ಪಾಸು!
ಶಾಲಾ ಬಾಲಕಿ ಅಮೂಲ್ಯ ಈಗ ಕಾಲೇಜು ಹುಡುಗಿ
ಮರುಕಳುಹಿಸಿದ ಮಿನುಗು ತಾರೆ ಕಲ್ಪನಾ ನೆನಪು

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada