For Quick Alerts
  ALLOW NOTIFICATIONS  
  For Daily Alerts

  ಡಿಸೆಂಬರ್ ನಲ್ಲಿ ಡಾ. ರಾಜ್ ಸ್ಮಾರಕ ಜನವೀಕ್ಷಣೆಗೆ!?

  |
  ಡಾ. ರಾಜ್ ಕುಮಾರ್ ಸ್ಮಾರಕ ಡಿಸೆಂಬರ್ ವೇಳೆಗೆ ಸಿದ್ಧವಾಗಲಿದೆ ಎಂದು ಸಚಿವ ಆರ್. ಅಶೋಕ್ ಭರವಸೆ ನೀಡಿದ್ದಾರೆ. ಡಾ. ರಾಜ್ ಕುಮಾರ್ ಪ್ರತಿಷ್ಠಾನದ ಉಸ್ತುವಾರಿಯಲ್ಲಿ ಕಂಠೀರವ ಸ್ಟುಡಿಯೋದಲ್ಲಿ ನಿರ್ಮಿಸಲಾಗುತ್ತಿರುವ ಸ್ಮಾರಕ ಕಾಮಗಾರಿ ವೀಕ್ಷಿಸಿದ ನಂತರ ಆರ್. ಅಶೋಕ್ ಹೇಳಿರುವ ಈ ಮಾತು ಡಾ. ರಾಜ್ ಅಭಿಮಾನಿಗಳಲ್ಲಿ ಮಿಂಚಿನ ಸಂಚಾರಕ್ಕೆ ಕಾರಣವಾಗಿದೆ.

  "ಸ್ಮಾರಕ ನಿರ್ಮಾಣ ಕಾರ್ಯ, ಪ್ರಗತಿ ಹಾಗೂ ಅಗತ್ಯ ಕುರಿತು ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ಜೊತೆ ಚರ್ಚಿಸಿದ್ದೇನೆ. 10 ಕೋಟಿ ರು. ವೆಚ್ಚದ ಕಾಮಗಾರಿಗೆ ಈಗಾಗಲೇ 7 ಕೋಟಿ ರು. ಬಿಡುಗಡೆ ಮಾಡಲಾಗಿದ್ದು ಅಂತಿಮ ರೂಪ ನೀಡುವ ಮುನ್ನ ಹಲವು ಬದಲಾವಣೆಗಳನ್ನು ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮುಖ್ಯವಾಗಿ ಸ್ಮಾರಕ್ ಗೋಪುರದ ರೂಪ ಬದಲಾಗಬೇಕಾಗಿದೆ. ಮತ್ತು ಪ್ರವಾಸಿಗರಿಗೆ ಸೂಕ್ತ ಆಸನ ವ್ಯವಸ್ಥೆ ಮಾಡಬೇಕಾಗಿದೆ"

  ಮುಖ್ಯಮಂತ್ರಿ ಸದಾನಂದ ಗೌಡ ಹಾಗೂ ಡಾ. ರಾಜ್ ಕುಟುಂಬದ ಸದಸ್ಯರೊಡನೆ ಚರ್ಚಿಸಿ ಉದ್ಘಾಟನೆಯ ದಿನಾಂಕವನ್ನು ನಿಗದಿಪಡಿಸಲಾಗುವುದು. ಯಾವುದೇ ಕಾರಣಕ್ಕೂ ಡಿಸೆಂಬರ್ ಅಂತ್ಯಕ್ಕಿಂತ ಮುಂದಕ್ಕೆ ಹೋಗಲಾರದು" ಎಂದು ಅಶೋಕ್ ತಿಳಿಸಿದ್ದಾರೆ. ಡಾ. ರಾಜ್ ಸ್ಮಾರಕ ಡಿಸೆಂಬರಿನಲ್ಲಿ ತಲೆಎತ್ತಿ ನಿಲ್ಲಲಿ. ಸರ್ಕಾರ ನುಡಿದಂತೆ ನಡೆಯಲಿ ಎಂಬುದು ಕನ್ನಡ ಚಿತ್ರರಂಗ ಹಾಗೂ ಅಭಿಮಾನಿಗಳೆಲ್ಲರ ಆಶಯವಾಗಿದೆ.

  English summary
  Dr. Rajkumar Memorial near Kanteerava Stadium is under construction. Minister R. Ashok tod that It completes in December. Date of Inauguration will announce very soon by discussing with Chief Minster Sadananda Gowda and Family Members of Dr. Rajkumar.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X