»   » ಡಯಾನಾಗೆ ವಿಕಲ ಚೇತನ ಧ್ರುವ ನಾಯಕ

ಡಯಾನಾಗೆ ವಿಕಲ ಚೇತನ ಧ್ರುವ ನಾಯಕ

Posted By:
Subscribe to Filmibeat Kannada

ಗೆದ್ದು ಬಾ ಇಂಡಿಯಾ ಎಂಬ ಘೋಷಣೆಯೊಂದಿಗೆ ಒಲಂಪಿಕ್ ಕ್ರೀಡಾಕೂಟದ ಕಥೆಯನ್ನಾಧರಿಸಿದ 'ಡಯಾನ' ಚಿತ್ರ ಮೇ 17 ರಿಂದ ಆರಂಭವಾಗಲಿದೆ. ಕವಿರಾಜೇಶ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದು, ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿದ್ದಾರೆ.

ಬೆಂಗಳೂರು, ಉಡುಪಿ, ಸೆಂಟ್‌ಮೇರಿಸ್ ದ್ವೀಪ ಮುಂತಾದಕಡೆ ಮೊದಲಹಂತದ ಚಿತ್ರೀಕರಣ ನಡೆಯಲಿದ್ದು, ದ್ವಿತೀಯ ಹಂತದ ಚಿತ್ರೀಕರಣ ಮಾರಿಷಸ್ ಹಾಗೂ ಸಿಂಗಾಪುರದಲ್ಲಿ ನಡೆಯಲಿದೆ. ಜುಲೈ ವೇಳೆಗೆ ಚಿತ್ರದ ಪ್ರಥಮಪ್ರತಿ ಹೊರತರುವ ಉದ್ದೇಶ ಹೊಂದಿದ್ದು, ಅದಕ್ಕಾಗಿ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಕವಿರಾಜೇಶ್ ತಿಳಿಸಿದ್ದಾರೆ.

ಯುವಪ್ರತಿಭೆ ಧ್ರುವ ಚಿತ್ರದ ನಾಯಕನಾಗಿ ಆಯ್ಕೆಯಾಗಿದ್ದು, ಇಬ್ಬರು ನಾಯಕಿಯರ ಆಯ್ಕೆ ಪ್ರಗತಿಯಲ್ಲಿದೆ. ಕನ್ನಡ ಚಿತ್ರರಂಗದ ಪ್ರಖ್ಯಾತ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಐದು ಗೀತೆಗಳನ್ನೊಳಗೊಂದಿರುವ ಈ ಚಿತ್ರಕ್ಕೆ ಎ.ಟಿ.ರವೀಶ್ ಸಂಗೀತ ಸಂಯೋಜಿಸುತ್ತಿದ್ದಾರೆ. ಚಿತ್ರದ ಒಂದು ಗೀತೆಗೆ ಹೈದರಾಬಾದ್‌ನ ರಮ್ಯ ಹೆಜ್ಜೆ ಹಾಕಲಿದ್ದಾರೆ. ಎಂ.ಆರ್.ಚೌಹಾಣ್ ಛಾಯಾಗ್ರಹಣ, ಶ್ರೀನಿವಾಸ ಪಿ ಬಾಬು ಸಂಕಲನ, ಮತ್ತು ಥಾಮಸ್ ಅವರ ನಿರ್ಮಾಣನಿರ್ವಹಣೆ 'ಡಯಾನ' ಚಿತ್ರಕ್ಕಿದೆ.

ಕಿವುಡ ಹಾಗೂ ಮೂಕ ಕಲಾವಿದ ಧ್ರುವ ಈ ಹಿಂದೆ 'ಸ್ನೇಹಾಂಜಲಿ' ಎಂಬ ಚಿತ್ರದಲ್ಲಿ ಅಭಿನಯಿಸಿದ್ದರು. ಸ್ನೇಹಾಂಜಲಿ ಚಿತ್ರ ಗಿನ್ನಿಸ್ ದಾಖಲೆ ಪುಸ್ತಕದಲ್ಲಿ ಸ್ಥಾನ ಪಡೆದಿತ್ತು. ಗಿರೀಶ್ ಕಮಾಲಾಪುರನಿರ್ದೇಶನದ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಯೂ ವ್ಯಕ್ತವಾಗಿತ್ತು. ಅಂಜು ವರ್ಮಾಸ್ನೇಹಾಂಜಲಿ ಚಿತ್ರದ ನಾಯಕಿಯಾಗಿದ್ದರು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada