»   »  ವಿನೋದ್ ಪ್ರಭಾಕರ್ 'ಹೋರಿ' ಅಂತಿಮ ಹಂತಕ್ಕೆ

ವಿನೋದ್ ಪ್ರಭಾಕರ್ 'ಹೋರಿ' ಅಂತಿಮ ಹಂತಕ್ಕೆ

Posted By:
Subscribe to Filmibeat Kannada

ಭಕ್ತಿ ಪ್ರಧಾನ, ಸಾಮಾಜಿಕ, ಹಾಸ್ಯ ಪ್ರಧಾನ ಹೀಗೆ ಎಲ್ಲಾ ವಿಧದ ಚಿತ್ರಗಳನ್ನು ನಿರ್ದೇಶಿಸಿ ಸೈ ಎನಿಸಿಕೊಂಡಿರುವ ನಾಗೇಂದ್ರ ಮಾಗಡಿ (ಪಾಂಡು) ಈಗ ಆಕ್ಷನ್, ಕಾಮಿಡಿ ವಿತ್ ಲವ್ ಸಬ್ಜೆಕ್ಟ್‌ನ್ನು ಆರಿಸಿಕೊಂಡಿದ್ದಾರೆ. ಚಿತ್ರರಂಗದಲ್ಲಿ ತನ್ನದೇ ಆದ ವಿಶಿಷ್ಠ ಛಾಪು ಮೂಡಿಸಿದ್ದ ಟೈಗರ್ ಪ್ರಭಾಕರ್ ಅವರ ಪುತ್ರ ವಿನೋದ್ ಪ್ರಭಾಕರ್ ಅಭಿನಯದ ಹೋರಿ ಗೆ ಪಾಂಡು ಅವರೇ ಕ್ಯಾಪ್ಟನ್ ಆಫ್‌ದ ಷಿಪ್.

ಈಗಾಗಲೇ ಬೆಂಗಳೂರು ಸುತ್ತಮುತ್ತ ಸತತವಾಗಿ ಹಾಡು ಹಾಗೂ ಮಾತಿನ ಭಾಗದ ಚಿತ್ರೀಕರಣ ನಡೆಸಿ ಶೇಕಡ 50ರಷ್ಟು ಮುಕ್ತಾಯಗೊಳಿಸಿದ್ದಾರೆ. ಆಗಸ್ಟ್ ೧೫ ರಿಂದ ಅಂತಿಮ ಹಂತದ ಚಿತ್ರೀಕರಣ ಪ್ರಾರಂಭಿಸಲಿದ್ದು, ಬೆಂಗಳೂರಿನಲ್ಲಿ 2 ಸಾಹಸ ದೃಶ್ಯ ಗಳನ್ನು ಮುಗಿಸಿ 20 ರ ನಂತರ ಮೈಸೂರಿನಲ್ಲಿ ಬಾಕಿ ಉಳಿದ ಭಾಗ ಹಾಗೂ ಒಂದು ಹಾಡನ್ನು ಚಿತ್ರೀಕರಿಸಿ ಕ್ಯಾಮೆರಾ ಕೆಲಸಕ್ಕೆ ಗುಡ್‌ಬೈ ಹೇಳಲಿದ್ದಾರೆ.

ಕೆ.ಬಿ.ಎಸ್. ಕಂಬೈನ್ಸ್ ಲಾಂಛನದಲ್ಲಿ ಲಿಂಗೇಗೌಡರು ನಿರ್ಮಿಸುತ್ತಿರುವ ಈ ಚಿತ್ರಕ್ಕೆ ರೇಣು ಕುಮಾರ್‌ರ ಸಂಗೀತಸಂಯೋಜನೆ, ಎಂ.ಆರ್. ಸೀನು ಛಾಯಾಗ್ರಹಣ, ರಾಮ್ ನಾರಾಯಣ್‌ರ ಸಾಹಿತ್ಯ, ರವಿವರ್ಮರ ಸಾಹಸ, ಕೆ. ಮಲ್ಲಿಕಾರ್ಜುನರ ನಿರ್ಮಾಣ ನಿರ್ವಹಣೆ ಇದ್ದು, ವಿನೋದ್ ಪ್ರಭಾಕರ್, ಗೌರಿ ಮಂಜಾಲ್, ರಮಣೀತ್‌ಚೌಧರಿ ತಾರಾಗಣದಲ್ಲಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada