»   »  ಅಂಬಿ ಮುಖದಲ್ಲಿ ಬೆವರಿಳಿಸಿದ ಪತ್ರಕರ್ತ

ಅಂಬಿ ಮುಖದಲ್ಲಿ ಬೆವರಿಳಿಸಿದ ಪತ್ರಕರ್ತ

Subscribe to Filmibeat Kannada

ಕನ್ನಡದ ಖ್ಯಾತ ಪತ್ರಕರ್ತರಲ್ಲಿ ಒಬ್ಬರಾಗಿದ್ದ ವೈಎನ್ ಕೆ ಬಹಳ ಕಟ್ಟುನಿಟ್ಟಿನ ಮನುಷ್ಯ ಎಂದೇ ಹೆಸರಾದವರು. ಇನ್ನೊಬ್ಬರನ್ನು ಮೆಚ್ಚಿಸುವ ಸಲುವಾಗಿ ಎಂದೂ ಸುಳ್ಳು ಹೇಳದ ವೈಎನ್ ಕೆ ಅದೊಮ್ಮೆ ಅಂಬರೀಷ್ ನಟಿಸಿದ್ದ ಚಿತ್ರವೊಂದನ್ನು ನೋಡಲು ಹೋದರು.

ಚಿತ್ರ ಮುಗಿಯಿತು. ಅವತ್ತು ಚಿತ್ರದ ನಾಯಕ ನಟ ಅಂಬರೀಷ್ ಕೂಡ ಅಲ್ಲಿದ್ದರು. ಚಿತ್ರ ಮುಗಿದ ಕೂಡಲೆ ವೈಎನ್ ಕೆ ಅವರ ಬಳಿ ಬಂದ ಅಂಬರೀಷ್ ಫಿಲಂ ಹೇಗಿತ್ತು ಸಾರ್? ಎಂದು ಕೇಳಿದರು. ಅವರಿಗೋ ಇಂತಹ ಹಿರಿಯ ಪತ್ರಕರ್ತರಿಂದ ಪ್ರಶಂಸೆ ಸಿಗುತ್ತದೆ ಎಂಬ ನಿರೀಕ್ಷೆ!

ಅಂಬರೀಷ್ ಅವರ ನಿರೀಕ್ಷೆಯನ್ನು ಒಂದೇ ಏಟಿಗೆ ವೈಎನ್ ಕೆ ಹುಸಿಗೊಳಿದ್ದರು. ವೈಎನ್ ಕೆ ಹೇಳಿದ್ದಿಷ್ಟು; ಚಿತ್ರ ತುಂಬ ಚೆನ್ನಾಗಿತ್ತು. ಆದರೆ ನಾನು ಮಲಗಿಬಿಟ್ಟಿದ್ದೆ ಎಂದು ಬಿಟ್ಟರು. ವೈಎನ್ ಕೆ ಪ್ರತಿಕ್ರಿಯೆ ಕೇಳಿ ಅಂಬರೀಷ್ ಸುಸ್ತೋ ಸುಸ್ತು!

(ಕೃಪೆ: ಹಾಯ್ ಬೆಂಗಳೂರು)

Please Wait while comments are loading...