For Quick Alerts
  ALLOW NOTIFICATIONS  
  For Daily Alerts

  ಈ ವಾರ 'ನಮ್ಮಣ್ಣ ಡಾನ್' ಬರ್ತಿದ್ದಾನೆ ಬರಮಾಡಿಕೊಳ್ಳಿ

  By Rajendra
  |

  ರವಿಜೋಶಿ ಅವರು ನಿರ್ಮಿಸಿರುವ 'ನಮ್ಮಣ್ಣ ಡಾನ್' ಚಿತ್ರತಂಡ ಪ್ರಚಾರಕ್ಕಾಗಿ ಮೊದಲ ಹಂತದಲ್ಲಿ ಗುಲ್ಬರ್ಗ, ವಿಜಾಪುರ, ಬಾದಾಮಿ ಮುಂತಾದ ಕಡೆ ಹೋಗಿ ಬಂದಿತ್ತು. ನಂತರ ಹಾಸನ, ಮಂಗಳೂರು, ಚೆನ್ನರಾಯಪಟ್ಟಣಗಳ ತೆರೆಳಿದ್ದ ಚಿತ್ರತಂಡ ಕೊನೆಯದಾಗಿ ಧಾರವಾಡ, ಶಿವಮೊಗ್ಗ, ದಾವಣಗೆರೆ ಮುಂತಾದೆಡೆ ಪ್ರಯಾಣ ಬೆಳೆಸಿತು.

  ಶಿವಮೊಗ್ಗದ ವಿದ್ಯಾರ್ಥಿಗಳಿಗೆ ಬ್ಲೂಟೂತ್ ಮೂಲಕ ಹಾಡುಗಳ ರವಾನೆ, ಮೈಲಾರಲಿಂಗೇಶ್ವರನ ಜಾತ್ರೆಗೆ ಭೇಟಿ ಹಾಗೂ ತಿಪಟೂರಿನಲ್ಲಿ ಯುವಕರೊಂದಿಗೆ ನಟ ರಮೇಶ್‌ಅರವಿಂದ್ ಅವರಿಂದ ಬೈಕ್ ಸವಾರಿ. ಚಿತ್ರತಂಡ ಹೋದ ಕಡೆಯಲ್ಲಾ ಅಭಿಮಾನಿಗಳಿಂದ ಆದರದ ಸ್ವಾಗತ. ಈ ರೀತಿ ಬಿಡುಗಡೆಗೆ ಮುನ್ನವೇ ಜನರಲ್ಲಿ ಬಹು ನಿರೀಕ್ಷೆ ಹುಟ್ಟಿಸಿರುವ 'ನಮ್ಮಣ್ಣ ಡಾನ್' ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

  ಹಾಸ್ಯ ಪ್ರಧಾನ ಈ ಚಿತ್ರದ ನಿರ್ದೇಶನವನ್ನು ರಮೇಶ್‌ಅರವಿಂದ್ ಮಾಡಿದ್ದಾರೆ. ರಮೇಶ್ ಅರವಿಂದ್ ಮೋನಾ ಪರ್ವೇಶ್, ಸನಾತನಿ, ರಾಜುತಾಳಿಕೋಟೆ, ಎಂ.ಎಸ್.ಉಮೇಶ್, ಅಚ್ಯುತಕುಮಾರ್, ರಾಜೇಂದ್ರಕಾರಂತ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

  ಮ್ಯಾಥ್ಯೂಸ್ ಮನು ಸಂಗೀತ ನೀಡಿರುವ 'ನಮ್ಮಣ್ಣ ಡಾನ್'ಗೆ ಕೃಷ್ಣಕುಮಾರ್ ಅವರ ಛಾಯಾಗ್ರಹಣವಿದೆ. ಸೌಂದರ್‌ರಾಜ್ ಸಂಕಲನವಿರುವ ಈ ಚಿತ್ರಕ್ಕೆ ರಮೆಶ್‌ಅರವಿಂದ್ ಹಾಗೂ ಡಿ.ಬಿ.ಚಂದ್ರಶೇಖರ್ ಸಂಭಾಷಣೆ ಬರೆದಿದ್ದಾರೆ. ರಮೇಶ್ ದೇಸಾಯಿ ಕಲಾ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ. (ಒನ್ಇಂಡಿಯಾ ಕನ್ನಡ)

  English summary
  After two long years actor Ramesh Aravind back with Nammanna Don. The movie is all set to releases on February 17. The movie will have two leading ladies, besides a host of comedy stars.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X