»   » ಸನ್ ನೆಟ್ವರ್ಕ್ ನಿಂದ ಮತ್ತೊಂದು ಚಾನೆಲ್

ಸನ್ ನೆಟ್ವರ್ಕ್ ನಿಂದ ಮತ್ತೊಂದು ಚಾನೆಲ್

Posted By: Staff
Subscribe to Filmibeat Kannada

ಕನ್ನಡದಲ್ಲಿನ ಟಿವಿ ಚಾನಲ್ ಗಳಲ್ಲಿ ತನ್ನ ಪ್ರಾಬಲ್ಯತೆಯನ್ನು ಮುಂದುವರಿಸಿರುವ ಸನ್ ನೆಟ್ವರ್ಕ್ ಮತ್ತೊಂದು ಚಾನಲನ್ನು ನಿನ್ನೆಯಿಂದ (ಏಪ್ರಿಲ್ 12) ಪ್ರಾರಂಭಿಸಿದೆ. ಸಂಪೂರ್ಣವಾಗಿ ಮತ್ತು ದಿನದ 24 ಘಂಟೆಗಳ ಕಾಲ ಈ ಚಾನಲ್ ಮಕ್ಕಳ ಮನೋರಂಜನೆಗಾಗಿ ಮೀಸಲು. ಚಾನಲ್ ಹೆಸರು "ಚಿಂಟು".

ಸನ್ ಸಮೂಹ ಸಂಸ್ಥೆ ಕನ್ನಡದಲ್ಲಿ ಪ್ರಸಾರ ಮಾಡುತ್ತಿರುವ ಏಳನೇ ಚಾನಲ್ ಇದಾಗಿದ್ದು ಒಟ್ಟಾರೆ ಕನ್ನಡದಲ್ಲಿನ 16ನೇ ಚ್ಯಾನಲ್. ಮಕ್ಕಳನ್ನು ಖುಷಿಪಡಿಸಲು ಈ ಹೊಸ ವಾಹಿನಿ ಆರಂಭಿಸಲಾಗಿದ್ದು, ಕೇಬಲ ಮೂಲಕವೇ ಇನ್ಸಾಟ್ 3ಎ ಮತ್ತು 4ಬಿ, 4045 ತರಂಗಾತಂರದ ಮೂಲಕ ಪ್ರಸಾರವಾಗಲಿದೆ ಎಂದು ಉದಯ ಕಚೇರಿ ತಿಳಿಸಿದೆ.

ಈಗಾಗಲೇ ಹಿಂದಿ, ಇಂಗ್ಲಿಷ್ ನಲ್ಲಿ ಮಕ್ಕಳ ಮನರಂಜನೆಗಾಗಿ ಸಾಕಷ್ಟು ಚಾನಲ್ ಗಳಿವೆ. ಆದರೆ ಕನ್ನಡದಲ್ಲಿ ಮಾತ್ರ ಈ ರೀತಿಯ ಚಾನೆಲ್ ಇರಲಿಲ್ಲ. ಸನ್ ನೆಟ್ವರ್ಕ್ ಈಗ ಆ ಕೊರತೆಯನ್ನು ನೀಗಿಸಿದೆ. ಸನ್ ನೆಟ್ ವರ್ಕ್ ಕನ್ನಡದಲ್ಲಿ ಉದಯ, ಯು2, ಉದಯ ಮೂವೀಸ್, ಉದಯ ವಾರ್ತೆಗಳು ಮತ್ತು ಉದಯ ನ್ಯೂಸ್ ಚಾನೆಲ್ ಗಳನ್ನು ಪ್ರಸಾರ ಮಾಡುತ್ತಿದೆ. ಈಗ ಈ ಸಾಲಿನಲ್ಲಿ ಚಿಂಟು ಹೊಸದಾಗಿ ಸೇರ್ಪಡೆಯಾಗಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಸನ್ ನೆಟ್ ವರ್ಕ್ ನಿಂದ ಮತ್ತೊಂದು ಕನ್ನಡ ಟಿವಿ
ಅದಿತಿ ಗೋವಿತ್ರಿಕರ್ ಗೆ ಕನ್ನಡದಲ್ಲಿ ನಟಿಸುವಾಸೆ
ವಿಜಯ್ ಮತ್ತು ಶುಭಾ ನಡುವಿನ ಗಾಸಿಪ್ ನಿಜವೇ?
ಅಭಿಮಾನಿ ದೇವರುಗಳ ಭಕ್ತ ಮರೆಯಾಗಿ 3ವರ್ಷ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada