For Quick Alerts
  ALLOW NOTIFICATIONS  
  For Daily Alerts

  ಸೀಮಿತ ಮಾರುಕಟ್ಟೆ: ಇಂದು ಕೋ.ಕೋ. vs ಸಿದ್ಲಿಂಗು

  |

  ಕರ್ನಾಟಕದಲ್ಲಿ ಕನ್ನಡ ಚಿತ್ರಕ್ಕಿರುವ ನಿಯಮಿತ ಮಾರುಕಟ್ಟೆಯ ನಡುವೆ ಇಂದು ಎರಡು ಬಹು ನಿರೀಕ್ಷಿತ ಚಿತ್ರಗಳು ತೆರೆಕಾಣಲಿವೆ. ಶ್ರೀನಗರ ಕಿಟ್ಟಿ, ಪ್ರಿಯಾಮಣಿ ಅಭಿನಯದ ಕೋ.ಕೋ. ಮತ್ತು ಯೋಗೀಶ್, ರಮ್ಯ ಅಭಿನಯದ ಸಿದ್ಲಿಂಗು ಚಿತ್ರಗಳು ಬಿಡುಗಡೆಗೊಳ್ಳುತ್ತಿವೆ.

  ತಾಜ್ ಮಹಲ್, ಪ್ರೇಂ ಕಹಾನಿ ಮತ್ತು ಮೈಲಾರಿ ಚಿತ್ರ ನಿರ್ದೇಶಿಸಿದ ಆರ್ ಚಂದ್ರು ಕೋ.ಕೋ. ಚಿತ್ರ ನಿರ್ದೇಶಕರು. 200ಕ್ಕೂ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಲು ಉದ್ದೇಶಿಸಿದ್ದ ಈ ಚಿತ್ರಕ್ಕೆ ಕೊನೆ ಕ್ಷಣದಲ್ಲಿ ಅಂದರೆ ಪರಭಾಷಾ ಚಿತ್ರಗಳ ಹಾವಳಿಗಳ ನಡುವೆ ಚಿತ್ರಮಂದಿರದ ಸಮಸ್ಯೆ ಎದುರಾಗಿದೆ.

  ಲೂಸ್ ಮಾದ ಯಾನೆ ಯೋಗೀಶ್ ತಂದೆ ಟಿ ಪಿ ಸಿದ್ದರಾಜು ನಿರ್ಮಿಸಿ ತೆರೆಗೆ ಬರುತ್ತಿರುವ ಇನ್ನೊಂದು ಚಿತ್ರ ಸಿದ್ಲಿಂಗು. ಯೋಗಿಗೆ ಜೊತೆಯಾಗಿ ರಮ್ಯಾ ನಟಿಸುತ್ತಿದ್ದಾರೆ ಮತ್ತು ಚಿತ್ರದ ಸಂಭಾಷಣೆ ಈಗಾಗಲೇ ಭಾರೀ ಕುತೂಹಲ ಮೂಡಿಸಿದೆ. ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ನಿರ್ದೇಶನದ ಜವಾಬ್ದಾರಿಯನ್ನು ವಿಜಯ್ ಪ್ರಸಾದ್ ಹೊತ್ತಿದ್ದಾರೆ. ಇದು ಅವರ ಚೊಚ್ಚಲ ನಿರ್ದೇಶನದ ಚಿತ್ರ.

  ಶುಕ್ರವಾರ (ಜ 13) ಮಧ್ಯಾಹ್ನ 3 ಗಂಟೆ ಹೊತ್ತಿಗೆ ಎರಡೂ ಚಿತ್ರದ ಮಿಮರ್ಶೆ ನಮ್ಮ ತಾಣದಲ್ಲಿ ಪ್ರಕಟವಾಗಲಿದೆ. ನಿರೀಕ್ಷಿಸಿ.

  English summary
  Two much awaited Kannada movies releasing today. Srinagara Kitty, Priyamani starring Ko. Ko and Yogesh, Ramya starring Sidlingu.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X