»   » ಅರ್ಧ ಶತಕ ಬಾರಿಸಿದ ಭಟ್ಟರ 'ಮನಸಾರೆ'

ಅರ್ಧ ಶತಕ ಬಾರಿಸಿದ ಭಟ್ಟರ 'ಮನಸಾರೆ'

Subscribe to Filmibeat Kannada

ಯೋಗರಾಜ್ ಭಟ್ ರ ಸ್ವಮೇಕ್ ಚಿತ್ರ 'ಮನಸಾರೆ' ರಿಮೇಕ್ ಚಿತ್ರಗಳಿಗೆ ಸಡ್ಡು ಹೊಡೆದುಅರ್ಧ ಶತಕ ಬಾರಿಸಿದೆ. ಗಾಂಧಿನಗರದ ಸಿದ್ಧ ಸೂತ್ರಗಳಿಗೆ ಒಂದು ರೀತಿ ಕೊಡಲಿ ಪೆಟ್ಟು ಕೊಟ್ಟಿದೆ 'ಮನಸಾರೆ' ಚಿತ್ರ. ರಾಜ್ಯಾದ್ಯಂತ 15ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ 'ಮನಸಾರೆ' ಐವತ್ತು ದಿನಗಳನ್ನು ಪೂರೈಸಿದೆ.

ಬಿಡುಗಡೆಯಾಗಿರುವ ಕೇಂದ್ರಗಳಲ್ಲೆಲ್ಲಾ ಮನಸಾರೆ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕನಿಷ್ಠ ಹತ್ತು ಕೇಂದ್ರಗಳಲ್ಲಾದರೂ ಶತಕ ಬಾರಿಸಲಿದೆ ಎಂಬ ವಿಶ್ವಾಸದಲ್ಲಿ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಇದ್ದಾರೆ. ಪಕ್ಕಾ ತಂತ್ರಜ್ಞರ ಚಿತ್ರವಾದ 'ಮನಸಾರೆ'ಯನ್ನು ಪ್ರೇಕ್ಷಕರು ಮನಸಾರೆ ಸವಿಯುತ್ತಿರುವುದೇ ಇದಕ್ಕೆ ನಿದರ್ಶನ.

ಮನಸಾರೆ ಚಿತ್ರದ ಸೂತ್ರಧಾರ ಯೋಗರಾಜ್ ಭಟ್ ಇದೀಗ ಮತ್ತೊಂದು ಚಿತ್ರದ ಸಿದ್ಧತೆಯಲ್ಲಿದ್ದಾರೆ. ಡಿಸೆಂಬರ್ ನಲ್ಲಿ ಈ ಚಿತ್ರ ಸೆಟ್ಟೇರುವ ಸಾಧ್ಯತೆಯಿದೆ. ಈ ಚಿತ್ರಕ್ಕೂ ಭಟ್ಟರ ನೆಚ್ಚಿನ ನಟ ದಿಗಂತ್ ನಾಯಕ ನಟನಾಗುವ ಸಾಧ್ಯತೆಯಿದೆ. ಚಿತ್ರದ ನಾಯಕಿ ಸೇರಿದಂತೆ ಉಳಿದ ತಾರಾಗಣದ ವಿವರಗಳು ಶೀಘ್ರದಲ್ಲೇ ಹೊರಬೀಳಲಿವೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada