»   » ಸ್ನೇಹಾಳ ತುಟಿಬಟ್ಟಲಲ್ಲಿನ ಮಧು ಹೀರಿದ ಚಿಟ್ಟೆ; ಚೇರನ್

ಸ್ನೇಹಾಳ ತುಟಿಬಟ್ಟಲಲ್ಲಿನ ಮಧು ಹೀರಿದ ಚಿಟ್ಟೆ; ಚೇರನ್

Posted By: Staff
Subscribe to Filmibeat Kannada

ರವಿಚಂದ್ರನ್ ಜೊತೆ 'ರವಿಶಾಸ್ತ್ರಿ'ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಸ್ನೇಹಾ, ಕನ್ನಡದಲ್ಲಿ ನಟಿಸಿದ್ದು ಒಂದೇ ಒಂದು ಚಿತ್ರದಲ್ಲಿ ಆದರೂ ಪ್ರೇಕ್ಷಕರ ಮನದಲ್ಲಿ ಮರೆಯಾಗಿಲ್ಲ. ಈವರೆಗೆ ಸಭ್ಯ ಪಾತ್ರಗಳಲ್ಲಿಯೇ ಕಾಣಿಸಿಕೊಂಡಿದ್ದ ಸ್ನೇಹಾ, ಮೈತೋರಿಸಲು ಅಡ್ಡಡ್ಡ ತಲೆಯಾಡಿಸುತ್ತಲೇ ಬಂದಿದ್ದರು. ಅಂಥಾ(?)ಪಾತ್ರಗಳ ನಾನು ಒಪ್ಪುವುದಿಲ್ಲ ಎಂದಿದ್ದ ಸ್ನೇಹಾ, ಗೌರಮ್ಮನ ಗೆಟಪ್ಪನ್ನು ಸಮರ್ಥಿಸಿದ್ದರು. ಆದರೆ ಈಗ?

'ಸ್ನೇಹಾ ಮಾಡಬೇಕಿಂಥವಳ'ಎನ್ನುವಂಥಾ ಹೇಳಿಕೆಗಳ ನೀಡುತ್ತಿದ್ದ ಸ್ನೇಹಾ ಎಂಬ ಈ ದಕ್ಷಿಣ ಭಾರತದ ಮೋಹಕ ಕಣ್ಗಳ ನಟಿ, ಇದೀಗ ಸ್ವಲ್ಪ ಮಾಡ್ರನ್ ಆಗಿದ್ದಾರೆ. ತುಟಿಯನ್ನೇ ಬಟ್ಟಲು ಮಾಡಿಕೊಂಡು ತೆರೆ ಮೇಲೆ 6ಸೆಕೆಂಟುಗಳ ಚುಂಬನ ದೃಶ್ಯದಲ್ಲಿ ಕಾಣಿಸಿಕೊಂಡಿದ್ದಾರೆ.

Cheran sucks Sneha lips!

'ಪಿರಿವೋಂ ಸಾಂತಿಪೋಂ' ತಮಿಳು ಚಿತ್ರದಲ್ಲಿ ಈರೀತಿ ಕಾಣಿಸಿಕೊಂಡಿರುವ ಸ್ನೇಹಾ, ತಮ್ಮ ಇಮೇಜ್ ಬದಲಿಸಿಕೊಳ್ಳಲು ನಿರ್ಧರಿದ್ದಾರೆ. ಸ್ನೇಹಾಳ ತುಟಿಗೆ ತುಟಿ ಬೆಸೆದು ಮಧು ಹೀರಿದ್ದು, ನಟ ಚೇರನ್. ಈ ದೃಶ್ಯದಿಂದ ಸ್ನೇಹಾಗಿಂತಲೂ ಚೇರನ್ ಹೆಚ್ಚು ತಲ್ಲಣಕ್ಕೆ ಗುರಿಯಾದರು ಎಂದು ಚಿತ್ರತಂಡದ ಹುಡುಗರು ಹೇಳುತ್ತಿದ್ದಾರೆ. ಯಾಕೆಂದರೆ ಚೇರನ್ ಗೆ ಇದು ಮೊದಲ ಅನುಭವ. ಚುಂಬನದ ಶಾಟ್ ಓಕೆಯಾಗಲು ಸುಮಾರು ಏಳು ಸಲ ಟೇಕ್ ಮಾಡಲಾಯಿತು. ಸ್ನೇಹಾ ಸಹಕರಿಸಿದರಂತೆ.

ಚಿತ್ರದಲ್ಲಿನ ಮೊದಲ ರಾತ್ರಿಯ ದೃಶ್ಯಕ್ಕಾಗಿ ಚುಂಬನವನ್ನು ಚಿತ್ರೀಕರಿಸಲಾಗಿದೆ. ಆರಂಭದಲ್ಲಿ ಚೇರನ್ ಈ ದೃಶ್ಯದಲ್ಲಿ ಪಾಲ್ಗೊಳ್ಳಲು ಮುಜುಗರಕ್ಕೆ ಸಿಲುಕಿದರು. ಆದರೆ ಸ್ನೇಹಾ ಅವರ ಸಹಕಾರದಿಂದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಯಿತು ಎನ್ನಲಾಗಿದೆ. ಈ ಮೊದಲು ಕಮಲ್ ಹಾಸನ್ ಅಭಿನಯದ 'ವಸೂಲ್ ರಾಜ ಎಂಬಿಬಿಎಸ್' ಚಿತ್ರದಲ್ಲಿ ತುಟಿ ಚುಂಬನವನ್ನು ಸ್ನೇಹಾ ನಿರಾಕರಿಸಿದ್ದರು.

(ದಟ್ಸ್ ಕನ್ನಡ ಸಿನಿವಾರ್ತೆ)

ಬಳುಕುವ ಸ್ನೇಹಾಳ ಸೌಂದರ್ಯದ ಗುಟ್ಟು ಈಗ ರಟ್ಟು!

Read more about: kannada news, kannada films, bangalore
English summary
Cheran sucks Sneha lips!
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada