»   » ಅಪ್ಪು ಪಪ್ಪು ಚಮತ್ಕಾರಗಳು ಕ್ಯಾಮರಾದಲ್ಲಿ ಬಂಧಿ

ಅಪ್ಪು ಪಪ್ಪು ಚಮತ್ಕಾರಗಳು ಕ್ಯಾಮರಾದಲ್ಲಿ ಬಂಧಿ

Posted By:
Subscribe to Filmibeat Kannada

ಸೌಂದರ್ಯ ಜಗದೀಶ್ ಫಿಲಂಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಎರಡನೇ ಚಿತ್ರ 'ಅಪ್ಪು ಪಪ್ಪು'.ಹಾಲಿವುಡ್ ಚಿತ್ರಗಳಲ್ಲಿ ಅನಿಮೇಷನ್ ಉಪಯೋಗಿಸಿ ಡೈನೋಸಾರ್ ಮೊದಲಾದ ಪ್ರಾಣಿಗಳ ಸಾಹಸಗಳನ್ನು ತೆರೆಯ ಮೇಲೆ ತೋರಿಸುತ್ತಾರೆ. ಆದರೆ ಚಿತ್ರದಲ್ಲಿ ಯಾವುದೇ ಅನುಮೇಷನ್ ಬಳಸದೆ ಕಾಂಬೋಡಿಯಾದ ಓರಂಗಟಾನ್ ಮಾ. ಸ್ನೇಹಿತ್ ಎಂಬ ಮಗುವಿನೊಂದಿಗೆ ನಡೆಸುವ ಚಮತ್ಕಾರಗಳನ್ನು ಈ ಚಿತ್ರದಲ್ಲಿ ನಿರೂಪಿಸಲಾಗಿದೆ.

ಕಾಂಬೋಡಿಯಾದಲ್ಲಿ 35 ದಿನಗಳ ಕಾಲ ಆ ಪ್ರಾಣಿಯ ಭಾಗದ ಚಿತ್ರೀಕರಣ ಮುಗಿಸಿಕೊಂಡು ಬಂದು ಬೆಂಗಳೂರಿನಲ್ಲಿ ನಿರಂತರ ಚಿತ್ರೀಕರಣ ನಡೆಸಿ ಮುಕ್ತಾಯಗೊಳಿಸಲಾಗಿದೆ. ವರ್ತೂರು ಬಳಿ ಇರುವ ಗುಂಜೂರು ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಬೃಹತ್ ಸೆಟ್ ಹಾಕಿ ಮಾ.ಸ್ನೇಹಿತ್ ಆಂಜನೇಯನನ್ನು ಬೇಡಿಕೊಳ್ಳುವ ಹಾಡೊಂದನ್ನು ಚಿತ್ರೀಕರಿಸಲಾಗಿದೆ.

ಅಲ್ಲದೆ ಆ ಮಗುವಿನ ಇಂಟ್ರೊಡಕ್ಷನ್ ಸಾಂಗ್‌ವೊಂದನ್ನು ಬೆಂಗಳೂರು ಯೂನಿವರ್ಸಿಟಿಯ ಸಾಯಿಗ್ರೌಂಡ್ಸ್, ಮಿನಿರ್ವಮಿಲ್ ಆವರಣ, ಹಾಗೂ ಇನ್ನೋವೇಟಿವ್ ಫಿಲಂಸಿಟಿಯಲ್ಲಿ ಚಿತ್ರೀಕರಿಸುವುದರೊಂದಿಗೆ ಕ್ಯಾಮೆರಾ ಕೆಲಸಕ್ಕೆ ಮಂಗಳ ಹಾಡಲಾಗಿದೆ. ಈ ಹಾಡಿನ ಚಿತ್ರಣದಲ್ಲಿ 150 ಕ್ಕೂ ಹೆಚ್ಚು ಮಕ್ಕಳನ್ನು ಬಳಸಿಕೊಳ್ಳಲಾಗಿದೆ.

ಆರ್. ಅನಂತರಾಜು ಕಥೆ ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರವನ್ನು ವಿಜಯಕಿರಣ್ ಹಾಗೂ ಸೌಂದರ್ಯ ಜಗದೀಶ್ ನಿರ್ಮಿಸುತ್ತಿದ್ದಾರೆ. ಎಸ್. ಕೃಷ್ಣರಛಾಯಾಗ್ರಹಣ, ಹಂಸಲೇಖರ ಸಂಗೀತ ಹಾಗೂ ರಾಂನಾರಾಯಣರ ಸಾಹಿತ್ಯ ಈ ಚಿತ್ರಕ್ಕಿದೆ. ಅಬ್ಬಾಸ್, ರೇಖಾ, ರಂಗಾಯಣರಘು, ಕೋಮಲ್, ಜೆನ್ನೀಫರ್ ಹಾಗೂ ನಿರ್ಮಾಪಕ ಸೌಂದರ್ಯ ಜಗದೀಶ್‌ ಪುತ್ರ ಮಾ. ಸ್ನೇಹಿತ್ ಅಭಿನಯಿಸಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada