»   »  ಯೋಧನಾಗಿ ಯುದ್ಧ ಮುಗಿಸಿದ ದರ್ಶನ್

ಯೋಧನಾಗಿ ಯುದ್ಧ ಮುಗಿಸಿದ ದರ್ಶನ್

Posted By:
Subscribe to Filmibeat Kannada
Darshan
ಸಿನಿಮಾವೊಂದನ್ನು ಆರಂಭಿಸಿ ಅದರ ಚಿತ್ರೀಕರಣ ಮುಗಿಸುವುದೂ ಕೂಡ ಯುದ್ಧ ಮುಗಿಸಿ ಬಂದಷ್ಟೇ ತ್ರಾಸದಾಯಕ ಕೆಲಸ! ರಾಕ್ ಲೈನ್ ವೆಂಕಟೇಶ್ ನಿರ್ಮಾಣದ 'ಯೋಧ"ನಿಗಾಗಿ ಈಗ ಚಿತ್ರೀಕರಣದ ಕಾರ್ಯವನ್ನು ಸಂಪೂರ್ಣವಾಗಿ ಮುಕ್ತಾಯವಾಗಿದೆ.

ತಮಿಳಿನ 'ಬೋಸ್' ಚಿತ್ರದ ರೀಮೇಕ್ 'ಯೋಧ'. ಶ್ರೀಕಾಂತ್ ಮತ್ತು ಸ್ನೇಹಾ ತಮಿಳಿನಲ್ಲಿ ಅಭಿನಯಿಸಿದ್ದರು. ಯೋಧ ಚಿತ್ರದಲ್ಲಿ ದರ್ಶನ್ ಗೆ ನಾಯಕಿಯಾಗಿ ನಿಖಿತಾ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಓಂ ಪ್ರಕಾಶ್ ನಿರ್ದೇಶಿಸುತ್ತಿದ್ದು ಕನ್ನಡದ ಕಿರಣ್ ಬೇಡಿಗೆ ಕ್ಯಾಮೆರಾ ಹಿಡಿದಿದ್ದ ಕೆ ಎಂ ವಿಷ್ಣುವರ್ಧನ್ ಈ ಚಿತ್ರದ ಛಾಯಾಗ್ರಾಹಕ.

ಯೋಧನ ಜೊತೆಗೇ ರಾಕ್ ಲೈನ್ ಮತ್ತೆರಡು ಚಿತ್ರಗಳನ್ನು ನಿರ್ಮಿಸುತ್ತಿದ್ದಾರೆ. ಒಂದು ವಿಜಯ್ ಅಭಿನಯದ ಸಾಧು ಕೋಕಿಲ ನಿರ್ದೇಶಿಸುತ್ತಿರುವ 'ದೇವ್ರು' ಹಾಗೂ ಮತ್ತೊಂದು ಯೋಗರಾಜ್ ಭಟ್ಟರ 'ಮನಸಾರೆ'. ದರ್ಶನ್ ರ ಮತ್ತೊಂದು ರೀಮೇಕ್ ಚಿತ್ರ'ಪೊರ್ಕಿ' ಸಹ ಸೆಟ್ಟೇರಲಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಕಿರುತೆರೆ ನಟಿ ಅಭಿನಯಾ ವೈವಾಹಿಕ ಜೀವನಕ್ಕೆ!
ಮರುಕಳಿಸಿದ ಮಿನುಗು ತಾರೆ ಕಲ್ಪನಾ ನೆನಪು
ಜಗ್ಗೇಶ್ ವಿರುದ್ಧ ಬೆಂಗಳೂರಲ್ಲಿ ಕರವೇ ಪ್ರತಿಭಟನೆ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada